ನಿನ್ನ ಮಿಲನದಿ ಹೆಪ್ಪುಗೊಂಡೆನು

ಎಲೆಲೆ ರಾಣಿ ಸುರತ ಜಾಣಿ
ಸಾಕು ನಿನ್ನಯ ನೂಪುರಂ,
ಕೂಳು ಮರೆತೆನು ಕಾವು ಮರೆತೆನು
ನೀನೆ ಚಲುವಿನ ರೂಪುರಂ

ಹೂವು ಅರಳಿವೆ ಬಳ್ಳಿ ಚಿಗುರಿವೆ
ನಿನ್ನ ಕಣ್ಣಿನ ತೋಟದಿ
ಹಕ್ಕಿ ಹಾಡಿವೆ ಮೋಡ ತೇಲಿವೆ
ನಿನ್ನ ಕಂಠದ ಗಾನದಿ

ನಾನೆ ಮಲ್ಲಿಗೆ ಮಧುರ ಸಂಪಿಗೆ
ಇನಿಯೆ ನಿನ್ನಯ ತಂಪಿಗೆ
ನೀನೆ ಶಾಂತಲೆ ಶಾಮ ಕೋಮಲೆ
ದೇವಿ ನನ್ನಯ ಇಂಪಿಗೆ

ಆತ್ಮ ಗವಿಗಳ ಕಂಟಿ ಕಿತ್ತೆನು
ಜ್ಞಾನ ದೀವಿಗೆಯಾದೆನು
ನಿನ್ನ ಮಿಲನದ ಸತ್ಯ ರಾತ್ರಿಗೆ
ಸಿಡಿಲ ಮಂಚವ ಹೆಣೆದನು

ನಿನ್ನ ಅಪ್ಪುತ ತಪ್ಪಿ ಹೋದೆನು
ಆಳ ಕೊಳದಲಿ ಮುಳುಗಿದೆ
ನಿನ್ನ ಮಿಲನದಿ ಹೆಪ್ಪುಗೊಂಡೆನು
ಶಾಂತಿ ಧಾಮದಿ ಬೆರೆದೆನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಸವಣ್ಣನವರಿಗೆ
Next post ಬೋಳಾಗಿದ್ದ ಬೆಟ್ಟ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…