ಬನ್ನಿ ಮಕ್ಕಳೆ ಚಂದ ಮಕ್ಕಳೆ
ಚಂದ ತೋಟವ ಬೆಳೆಯುವಾ ||

ನಾವು ಸೈಸೈ ನಾವು ಹೈಹೈ
ನಾವು ಪೈಪೈ ಪುಟ್ಟರು
ನಾವು ಪಾವನ ನಾವು ಈವನ
ನಾವು ದೇವನ ಹಣ್ಗಳು

ಹಸಿರು ನಾವು ಹೂವು ನಾವು
ನಾವು ಹಣ್ಣಿನ ಗೊಂಚಲು
ಹಕ್ಕಿ ನಾವು ಹಾಡು ನಾವು
ನಾವು ಸಿಡಿಲಿನ ಗೊಂಚಲು

ನಾವು ಚಿಂಚಿಂ ಚಂದ ಹಕ್ಕಿ
ಆತ್ಮ ಪಕ್ಕವ ಬಿಚ್ಚುವಾ
ದೇವ ದೇವನ ನಗೆಯ ತೋಟಕೆ
ಹಾಡು ದುಂಬುತ ಹಾರುವಾ

ನಾವು ಹೂವು ನಾವು ಗೋವು
ನಾವೆ ಮಾವು ಮಲ್ಲಿಗೆ
ನಾವು ಹಸಿರು ನಾವು ಉಸಿರು
ನಾವೆ ಶಾಂತಿಯ ಸಂಪಿಗೆ
*****