ಮರ ಮತ್ತು ಹುಲ್ಲೆ

ಮಳೆಯಲ್ಲಿ ಎಲ್ಲಬಾಗಿಲು ಹಾಕಿಕೊಂಡೋ ಚಳಿಯಲ್ಲಿ ಬೆಚ್ಚನೆಯ ಶಾಲು ಹೊದ್ದುಕೊಂಡೋ ಕವನಗಳು ಸುರಿಸುವಂತೆ ಈ ಬೇಸಗೆಯೆ ಬಸಿಲಿನ ಮುಂಜಾವು ಮುಸ್ಸಂಜೆಯಲ್ಲಿಯೂ ನಾನೇ ನೀರೆರದು ಬೆಳೆಸಿದ ಮರಗಳ ಸಾಲಿನಲ್ಲಿ ಕುಳಿತು. ಅದರ ಮೇಲೆ ವರ್ಷ ವರ್ಷಗಳವರಗೆ ಚಿಲಿಪಿಲಿಸಿದ...

ಆದರ್ಶಕ್ಕೆ

ದೂರದೂರ ದಿಕ್ದಿಗಂತದಿಂದ ದೂರಕೆ ಹಗಲು ಮುಗಿಲು ಮಿಲನವಾಗಿ ಕುಣಿಯುತಿರುವೆಡೆ ಜಗವೆ ಒಲವ ಕೊಳಲು ಆಗಿ ಗಾನ ಸುರಿವೆಡೆ ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ! ಕಣ್ಣ ಮುಚ್ಚಿ ಹೃದಯ ಮುಚ್ಚಿ ಒಮ್ಮೆ ಅಂದು ಕಾತರಿಸಲು ಮಿಂಚಿನಂತೆ...

ಇದು ಮೊದಲು

ಪ್ರಿಯ ಸಖಿ ಅನ್ನವನು ಕೊಡು ಮೊದಲು ಬಟ್ಟೆಯನು ಕೊಂಡು ಉಡಲು ಕಟ್ಟಿಕೊಡು ಮನೆಗಳನು ಬಳಿಕ ನೀನು ಕವಿಯಾಗಿ ಬಾ ನೀತಿವಿದನಾಗಿ ಬಾ ಶಾಸ್ತ್ರಿಯಾಗಿ ಧಾರ್ಮಿಕನಾಗಿ ಮನುಜಕತೆಯನು ಕಲಿಸು ಬಾ ಇವನದನು ಕಲಿಯ ಬಲ್ಲ! ಇದು...

ದೊಡ್ಡೋರೆಲ್ಲಾ ಅದೇ ರೀತಿ

"ಮರಗಳೆಲ್ಲಾ ಯಾಕೆ ಅಷ್ಟೊಂದ್ ದೊಡ್ಡಕ್ ಇರ್‍ತಾವೆ?" "ಒಳ್ಳೇವ್ರೆಲ್ಲಾ ಹಾಗೇ ಮರಿ, ಎತ್ತರ ಇರ್‍ತಾರೆ." "ಒಳ್ಳೇವ್ರಾದ್ರೆ ಯಾಕೆ ಮತ್ತೆ ಮಾತೇ ಆಡೊಲ್ಲ?" "ಮಾತಾಡಿದ್ರೆ ಬಂತೇ ಚಿನ್ನ ನಡತೆಗೆ ತಪ್ಪಲ್ಲ." "ಎಲೇನ್ ಕಿತ್ರೂ, ಹೂವನ್ ಕಿತ್ರೂ ಯಾಕೆ...

ಈ ಶಿಕ್ಷೆ ಯಾರಿಗೆಂದು?

ಹಾಸಿಗೆಯೆ ಹರಸಿರುವ ದುಂಡುಮಲ್ಲಿಗೆಯರಳೆ ಆ ತುಂಬು ಹೆರಳ ಹೆಣ್ಣೆಲ್ಲಿ? ಬಿಳಿ ದಿಂಬಿನಂಚಿನಲಿ ಗೆರೆ ಬರೆದ ಕಾಡಿಗೆಯೆ, ಆ ದೀಪದುರಿಯ ಕಣ್ಣೆಲ್ಲಿ? ಅತ್ತ ಮಂಚದ ಕೆಳಗೆ ಬಿದ್ದ ಕಾಲುಂಗುರವೆ, ಆ ನವಿಲನಡೆಯ ಹೆಣ್ಣೆಲ್ಲಿ? ಬೆಳ್ಳಿ ಬಟ್ಟಲಿನೊಳಗೆ...

ವಿರಹಿಣಿಯ ಸಂತಾಪ

ಚಂದ್ರಮುಖಿಯು ನೀನು ಎಂದು ಬೆಡಗುಗಾರ್ತಿ ಚೆಲುವೆಯೆಂದು ಸಂದ ಜೀವದಾತ್ಮ ಗೊಂಬೆಯೆಂದು ಪೇಽಳಿ- ಇಂದು ತರವೆ ಇನಿಯ ಇನಿತು ಕೊರಗಿಸುವುದೊ! ನೀರೆ ನೀನೆ ಶೂರೆ ಎಂದು ಎನ್ನ ಮೋಹ ಕಲಶವೆಂದು ಸಾರೆ ಸರಸಿ ತೀರದಲ್ಲಿ ಚೆನ್ನು...

ಲಿಂಗಮ್ಮನ ವಚನಗಳು – ೨೧

ಬಂಡಿಯ ಮೇಗಣ ಹೆಳವನಂತೆ, ಕಂಡಕಂಡ ಕಡೆಗೆ ಹಲುಬಿದರೆ, ನಿಮಗೆ ಬಂದುದೇನಿರೋ? ಈ ಮಹಾಘನವನರಿಯದನ್ನಕ್ಕ. ಹಾಡಿದರಿಲ್ಲ, ಹರಸಿದರಿಲ್ಲ, ಕೇಳಿದರಿಲ್ಲ. ಏನ ಮಾಡಿದರು ವಾಯಕ್ಕೆ ವಾಯವೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ|| ಸಾ|| ಫ....

ಪ್ರಕೃತಿ

ರಾತ್ರಿ ಬೆಳಕು ಮಳೆ ಬಿಸಿಲು ನೆಳಲು ನಾನೆಂದೂ ಬಿಟ್ಟುಕೊಟ್ಟವಳೇ ಅಲ್ಲ: ಯಾಕೆಂದರೆ ಅದು ನನ್ನ ಬಿಟ್ಟಿಲ್ಲ ತನ್ನ ಋತುಮಾನದಲ್ಲಿ ನನ್ನನ್ನಾಳಕ್ಕಿಳಿಸಿ ಎತ್ತರಕ್ಕೇರಿಸುವ ಪ್ರಕೃತಿಯೇ ನಾನಿರುವಾಗ ಯಾವುದಕ್ಕೂ ಕೊಸರಿಕೊಂಡಿಲ್ಲ ಪಕ್ಷಿಯಾಗಿ ಚಿಲಿಪಿಲಿಗುಡುವ ಹಸಿರು ಹೊಲಗದ್ದೆಗಳ ನಡುವೆ...

ಕವಿಯ ಕಣ್ಣು ತೆರೆಯುತಿತ್ತು

ಮನಸಿನಾಗಿನ ಭಾವಗಳಂತೆ ಮರದ ಮೇಲಿನ ಚಿಗುರೆಲೆಯೆಲ್ಲ ತೂರಿಬಂದ ಗಾಳಿಯಲ್ಲಿ ಕುಣಿಯುತಿತ್ತು-ಬಳುಕಿ ಬಳುಕಿ-ಕುಣಿಯುತಿತ್ತು. ತುಟಿಯ ಮೇಲಿನ ಮುಗುಳಿನ ಹಾಗೆ ಸುತ್ತ ಹಾಸಿದ ಹಸುರಿನ ಮೇಲೆ ಹಾರಿಬಂದ ಚಿಟ್ಟೆ ದಂಡು ಜಿಗಿಯುತಿತ್ತು-ನಲಿದು ನಲಿದು-ಜಿಗಿಯುತಿತ್ತು ಮೋರೆ ಮೇಲಿನ ಕುರುಳಿನ...
ಪ್ರೀತಿ ಇಲ್ಲದ ಮೇಲೆ

ಪ್ರೀತಿ ಇಲ್ಲದ ಮೇಲೆ

ಪ್ರಿಯ ಸಖಿ, ನಮ್ಮ ಸಮಾಜದಲ್ಲಿದ್ದ ಉನ್ನತ ಮೌಲ್ಯಗಳು ನಿರಂತರವಾಗಿ ಅಧೋಗತಿಗಿಳಿಯುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಕಾರಣವೇನು? ಹುಡುಕಹೊರಟರೆ ಸಾವಿರಾರು ಕಾರಣಗಳು ಸಿಕ್ಕಬಹುದು. ಆದರೆ ಕವಿ ಜಿ. ಎಸ್. ಶಿವರುದ್ರಪ್ಪನವರಿಗೆ ಹೊಳೆದಿರುವ ಒಂದೇ ಒಂದು ಮುಖ್ಯ ಕಾರಣ...