ಈ ಶಿಕ್ಷೆ ಯಾರಿಗೆಂದು?
Latest posts by ನರಸಿಂಹಸ್ವಾಮಿ ಕೆ ಎಸ್ (see all)
- ಶ್ರೀ ಕೃಷ್ಣನಂತೊಂದು ಮುಗಿಲು - January 7, 2017
- ಸಣ್ಣ ಸಂಗತಿ - September 18, 2015
- ಪಂಪನಿಗೆ - September 11, 2015
ಹಾಸಿಗೆಯೆ ಹರಸಿರುವ ದುಂಡುಮಲ್ಲಿಗೆಯರಳೆ ಆ ತುಂಬು ಹೆರಳ ಹೆಣ್ಣೆಲ್ಲಿ? ಬಿಳಿ ದಿಂಬಿನಂಚಿನಲಿ ಗೆರೆ ಬರೆದ ಕಾಡಿಗೆಯೆ, ಆ ದೀಪದುರಿಯ ಕಣ್ಣೆಲ್ಲಿ? ಅತ್ತ ಮಂಚದ ಕೆಳಗೆ ಬಿದ್ದ ಕಾಲುಂಗುರವೆ, ಆ ನವಿಲನಡೆಯ ಹೆಣ್ಣೆಲ್ಲಿ? ಬೆಳ್ಳಿ ಬಟ್ಟಲಿನೊಳಗೆ ಬಿಟ್ಟೊಂದು ಹನಿ ಹಾಲೆ, ನೀ ಕಂಡ ನನ್ನ ಕನಸೆಲ್ಲಿ? ಎದುರು ಹಾಸಿನಮೇಲೆ ತೆರೆದಿಟ್ಟ ವೀಣೆಯನು ಮಿಡಿದ ಆ ಮಿಂಚು ಬೆರಳೆಲ್ಲಿ? […]