Home / Parimala Rao

Browsing Tag: Parimala Rao

ಮನೆ ಮಗಳು “ಸೋನಿ” ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು. ದಕ್ಷಿಣ ಕನ್ನಡದವರು ‘ಬಸುರಿ ಊಟ’, ಉತ್ತರ ಕರ್ನಾಟಕದವರ ‘ಉಡಿ ತುಂಬ...

ಅವನಿಗೆ ಕಥೆ ಬರೆಯಬೇಕೆಂಬ ಹುಚ್ಚು. ಒಂದೆರಡು ಸಾಲು ಬರೆದು ಚಿತ್ತುಮಾಡಿ ಗೆರೆಗಳನ್ನು ಅಡ್ಡಾದಿಡ್ಡಿ ಹಾಕಿ ಅದನ್ನೇ ಚಿತ್ರವಾಗಿಸುತ್ತಿದ್ದ. ಅವನಿಗೆ ಏನೂ ತೋಚದಾಗ ಕನ್ನಡದ ಅಕ್ಷರಮಾಲೆ ಅಲ್ಲೊಂದು ಇಲ್ಲೊಂದು ಬರೆದು ಇದು ಒಂದು ಗಹನವಾದ ಕಥೆ ಎನ್ನುತ...

ಆಕೆ ಕಥೆಗಳನ್ನು ಬರೆಯುತಿದ್ದಳು. ಪಕ್ಕದಮನೆಯ ಕಾಲೇಜು ಹುಡುಗಿ ಆಕೆ ಬರೆದ ಕಥೆಗಳನ್ನು ಓದುತ್ತಿದ್ದಳು. ಇಂದು ಸುಖಾಂತವಾದ ಕಥೆ ಮಾರನೆಯ ದಿನ ಬದಲಾಯಿಸಿ ಪ್ರೀತಿಯ ಜೋಡಿಯಲ್ಲಿ ಒಬ್ಬರನ್ನು ಸಾಯಿಸುತ್ತಿದ್ದಳು. ಓದಿ ಬೇಸತ್ತ ಹುಡುಗಿ ಆಂಟಿಗೆ ‘ಕೊಲೆಗ...

ಅವನೊಬ್ಬ ದೊಡ್ಡ ಕುಡುಕ. ಕುಡಿದು, ಕುಡಿದು ಸ್ವರ್ಗ ಸೇರಿದ. ಮನೆಯ ತುಂಬಾ ಕುಡಿದು ಖಾಲಿ ಮಾಡಿದ ಬಾಟಲ್ ಇಟ್ಟಿದ್ದ. ಮಕ್ಕಳಿಗೆ ಅಪ್ಪನ ನೆನಪು ಬೇಡವಾಗಿತ್ತು. ಅವನ ದೊಡ್ಡ ಮಗಳು ಖಾಲಿ ಸೀಸೆಗೆ ಬಣ್ಣ ಬಳಿದು ಸುಂದರ ಹೂದಾನಿ ಮಾಡಿದಳು. ಎರಡನೇಯ ಮಗಳು...

ವೃದ್ಧ ದಂಪತಿಗಳಿಗೆ ಆಕೆ ಅಡಿಗೆ ಕೆಲಸ ಮಾಡಿಕೊಡಲು ಬರುತ್ತಿದ್ದಳು. ಎರಡು ಮಕ್ಕಳ ತಾಯಿಯಾದ ಆಕೆ ನೀಟಾಗಿ ಸೀರೆ ಉಟ್ಟು, ಪೋನಿಟೈಲಿಗೆ ಹೂವಿಟ್ಟು, ಕೈ ಪರ್ಸಿನಲ್ಲಿ ಮೊಬೈಲ್ ಇಟ್ಟುಕೊಂಡು ಸ್ಟೈಲಾಗಿ ಬರುತಿದ್ದಳು. ಅವಳಿಗೆ ಅಡುಗೆ ಮಾಡುವಾಗ ಗಂಟೆಗೊಮ...

ಮದುವೆಗೆ ಕಾತುರವಾಗಿದ್ದ ಆ ಹುಡುಗಿಗೆ ದೂರದ ಸಂಬಂಧಿ ಯೊಬ್ಬರು, “ನೋಡು! ಇದು ಹುಡುಗನ ಮೊಬೈಲ್ ನಂಬರ್, ಮಾತನಾಡಿ ನೋಡು, ನಿನಗೆ ಸರಿಯಾಗಬಹುದು”, ಎಂದರು. ಹುಡುಗ ಹುಡಿಗಿ ದಿನವು ಗಂಟಗಟ್ಟಲೆ ಮಾತನಾಡಿ ಮೆಚ್ಚಿಕೊಂಡು ಮೊಬೈಲ್ ರೊಮಾನ್...

ಅವಳನ್ನು ಹುಚ್ಚಿ ಎಂದು ಎಲ್ಲರು ದೂರವಿಟ್ಟಿದ್ದರು. ಇವಳೊಂದು ನಮ್ಮ ವಂಶದಲ್ಲಿ ಕಪ್ಪು ಚುಕ್ಕೆ ಎಂದು, ಯಾರ ಕಣ್ಣಿಗೆ ಬೀಳದಂತೆ ದೂರದ ಅನಾಥಾಶ್ರಮದಲ್ಲಿ ಬಿಟ್ಟಿದ್ದರು. ಮರುಮದುವೆ ಮಾಡಿಕೊಂಡ ಹೊಸ ಹೆಂಡತಿಯೊಂದಿಗೆ ಗಂಡ ಸುಖವಾಗಿದ್ದ. ಅವಳಿಗಾಗಿ ಪರ...

ಅವನು ಗಾಂಧಿಯ ಚಿತ್ರವನ್ನು ತದೇಕ ಚಿತ್ತದಿಂದ ನೋಡುತಿದ್ದ. ಇವನು ಗಾಂಧಿಯ ಪರಮ ಭಕ್ತನಿರಬಹುದೆಂದು ಊಹಿಸಿ “ಗಾಂಧಿಯಲ್ಲಿ ನೀನೇನು ಕಂಡೆ?” ಎಂದೆ. “ಗಾಂಧಿ ಟೋಪಿ ಬಿಸಿಲಿಗೆ ಬಹಳ ಆಕರ್ಷಕವಾಗಿದೆ” ಎಂದ. ‘ಅಯ್ಯೋ’ ಎಂದು ...

ದೇವಸ್ಥಾನದಲ್ಲಿ ನಡೆಯುತ್ತಿದ್ದ ಪ್ರವಚನಕ್ಕೆ ನೂರಾರು ಜನ ಬರುತಿದ್ದರು. ಎಲ್ಲರ ಬಾಯಲ್ಲು ಪ್ರವಚನದ ಬಗ್ಗೆ ಬಿಟ್ಟು “ನಮ್ಮ ಚಪ್ಪಲಿ ಕಳುವಾಗಿದೆ” ಎಂದು ಹೇಳಿಕೊಂಡು ಮಾತನಾಡುತ್ತಿದ್ದರು. ಇದು ಪ್ರವಚನಕಾರಾರ ಕಿವಿಗೂ ಬಿತ್ತು. ಅವರು ...

ಯಾತ್ರೆಗೆ ಹೋದ ವೃದ್ಧ ಜೋಡಿ, ಜಗಳ ಆಡಿಕೊಂಡೇ ಬಾಳು ಕಳೆದಿದ್ದರು. ಅವರಲ್ಲಿ, ಷಷ್ಟಾಷ್ಟಕವಿತ್ತು. ನದಿ ಸ್ನಾನಕ್ಕೆ ಇಬ್ಬರೂ ಹೋದರು. ಸುಳಿಯೊಂದು ಬಂದು ವೃದ್ಧ ಗಂಡನನ್ನು ಎಳದೊಯ್ಯುವದರಲ್ಲಿತ್ತು. ವೃದ್ಧೆ ತನ್ನ ಕೈಯಿಂದ, ಗಂಡನ್ನನ್ನು ಎಳೆದುಕೊಂಡ...

1...2526272829...69

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....