ಯಾತ್ರೆಗೆ ಹೋದ ವೃದ್ಧ ಜೋಡಿ, ಜಗಳ ಆಡಿಕೊಂಡೇ ಬಾಳು ಕಳೆದಿದ್ದರು. ಅವರಲ್ಲಿ, ಷಷ್ಟಾಷ್ಟಕವಿತ್ತು. ನದಿ ಸ್ನಾನಕ್ಕೆ ಇಬ್ಬರೂ ಹೋದರು. ಸುಳಿಯೊಂದು ಬಂದು ವೃದ್ಧ ಗಂಡನನ್ನು ಎಳದೊಯ್ಯುವದರಲ್ಲಿತ್ತು. ವೃದ್ಧೆ ತನ್ನ ಕೈಯಿಂದ, ಗಂಡನ್ನನ್ನು ಎಳೆದುಕೊಂಡು ಎದೆ ಗವಚಿಕೊಂಡಳು. “ಮುಳಗಬೇಡಿ, ಮುಳಗಬೇಡಿ” ಎಂದು ಕಿರುಚುತ್ತಾ ದಡಕ್ಕೆ ಎಳದೊಡನೆ ಜಗಳ ಶುರುವಾಯಿತು. “ಬೇಡಾಂತ ಹೇಳಿದ್ರೆ ಕೇಳ್ತಿರಾರಿ? ಯಾಕ್ರಿ ಮುಳಗಿ ಸಾಯಿತೀರಿ?” ಎಂದು ತಾರಾ ಸ್ವರದಲ್ಲಿ ವೃದ್ಧೆ ಕಿರಿಚಿ ಕೊಂಡಳು. “ನಾ ಮುಳಿಗಿದರೆ ಜಗಳ ಯಾರು ಕಾಯಿತಾರೆ? ನಾನು ಖಂಡಿತ ಮುಳುಗೋಲ್ಲ” ಎಂದು ವೃದ್ಧ ನೀರಿನಿಂದ ಮೇಲೆ ಬಂದ.
*****