ದೇವಸ್ಥಾನದಲ್ಲಿ ನಡೆಯುತ್ತಿದ್ದ ಪ್ರವಚನಕ್ಕೆ ನೂರಾರು ಜನ ಬರುತಿದ್ದರು. ಎಲ್ಲರ ಬಾಯಲ್ಲು ಪ್ರವಚನದ ಬಗ್ಗೆ ಬಿಟ್ಟು “ನಮ್ಮ ಚಪ್ಪಲಿ ಕಳುವಾಗಿದೆ” ಎಂದು ಹೇಳಿಕೊಂಡು ಮಾತನಾಡುತ್ತಿದ್ದರು. ಇದು ಪ್ರವಚನಕಾರಾರ ಕಿವಿಗೂ ಬಿತ್ತು. ಅವರು ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ ಚಪ್ಪಲಿ ಕಳುವಿಗೆ ಹಂದಿ ಜನ್ಮ ಬರುವದೆಂಬುದರ ಬಗ್ಗೆ ಸಾಂಗೋಪಾಂಗವಾಗಿ ಬಿತ್ತರಿಸಿ ಹೇಳಿದರು. ಮಾರನೆಯ ದಿನ ಎಲ್ಲರ ಮುಖದಲ್ಲಿ ಸಂತಸ ತುಳುಕಾಡುತಿತ್ತು. ಅವರ ಮಾಯವಾದ ಚಪ್ಪಲಿಗಳೆಲ್ಲವೂ ಮತ್ತೆ ಚಪ್ಪಲಿ ಸ್ಟಾಂಡಿನಲ್ಲಿ ಬಂದು ಕೂತಿದ್ದವು.
*****