
ಈ ಬಾರಿಯ ತಿರುವುಗಳಾ ಬಯಲಿನ ಹರಹುಗ- ಳೀ ಹುಡುಗಿಯ ಹುಬ್ಬುಗಳಾ ಸಂಜೆಯ ಮಬ್ಬುಗ- ಳಷ್ಟೆತ್ತರ ಬೆಟ್ವಗಳೀ ತೀರದ ತಗ್ಗುಗ- ಳಿನ್ನಿಲ್ಲ ಸಂಜೆಗಳು ಮತ್ತೀ ಬೆಳಕಿನ ಸುತ್ತಲ ಬೆತ್ತಲು ಆ ಕಣಿವೆಯ ಕೆಳಗಿನ ಕತ್ತಲು ಯಾವುದೊ ಕೋಟೆಯ ಸುತ್ತಲು ಇನ್ನಾವುದೊ ಪ್...
ನಿನ್ನ ಅನರ್ಘ್ಯ ಸೊಬಗು ಸಿಡಿಮದ್ದಿನಂತೆ ಹೊಡೆಯುವುದರಿಂದ ಬಹುಪಾಲು ಜನರ ಎದೆ ತಲ್ಲಿಣಿಸುವುದಂತೆ ತತ್ತರಿಸುವುದಂತೆ ಕೈಕಾಲು ಕವಿಗಳಿಗೆ ಕೂಡ ಬರದು ಕವಿತೆಯ ಸಾಲು ಹೀಗಿರುತ್ತ ಕೇವಲ ನಿನ್ನ ಛಾಯಾಚಿತ್ರ ನೋಡಿಯೋ ಪರವಶನಾಗಿ ಸಂಪೂರ್‍ಣ ಮೈಮರೆವ ಮೊದಲೆ...
ದೈವ ದೇವರು ಸ್ವರ್ಗ ನರಕ ಎಲ್ಲವೂ ಕಟ್ಟುಕತೆ ಆರಂಭದಿಂದ ಕೊನೆಯ ತೀರ್ಪಿನ ತನಕ ಎಂದೇಕೆ ಎಲ್ಲ ತಿಳಿದವನಂತೆ ತಿಳಿಯದವರ ಬೆಪ್ಪಾಗಿಸುವೆ ? ಮಾಡದಿದ್ದರೆ ಬೇಡ ನಮ್ಮ ನಜರಿನಲಿ ನಿನ್ನ ನಮಾಜು ನಿನಗೆ ನಿನ್ನದೇ ಆವಾಜು ಕೇಳುವುದು ಖುಷಿಯಾದರೆ ಎಬ್ಬಿಸು ಸ್...
ಉದಯಾಸ್ತಮಾನದ ಮಧ್ಯೆ ವರ್ಧನೆ ಕ್ಷಯ ಮರ್ತ್ಯರಿಗೆ ಚಕ್ಷುಗಳಿಂದ ನೋಡುವುದರಿಂದ ನಮ್ಮ ದೃಷ್ಟಿ, ಮನಸ್ಸಿನಿಂದ ಚಿಂತಿಸುವುದರಿಂದ ನಮ್ಮ ಜ್ಞಾನ, ಭೂಮಿಯಲ್ಲಿ ಬದುಕುವುದರಿಂದ ನಮ್ಮ ಆಯಸ್ಸು- ಸೀಮಿತ. ಸೀಮಾಬದ್ಧರು ನಾವು. ಶಕ್ತಿಗ್ರಹ ನೀನು ಬೆಳಗು ಸಂಜೆ...
ಫಿಲ್ (ಅರ್ಥಾತ್ ಫಿಲಿಪ್ ಕಾರ್ನಬಿ) ಶೆಲ್ಫಿನಲ್ಲಿ ಪುಸ್ತಕಗಳ ನಡುವೆ ತಲೆಬುರುಡೆಯೊಂದನ್ನ ಇರಿಸಿಕೊಂಡಿದ್ದಾನೆ. ಸಾಹಿತ್ಯದ ವಿದ್ಯಾರ್ಥಿ ಫಿಲ್ ತುಂಬಾ ಓದುತ್ತಾನೆ- ಶೇಕ್ಸ್‌ಪಿಯರ್, ಮಿಲ್ಟನ್, ಲಾರೆನ್ಸ್, ಇತ್ಯಾದಿ ಇತ್ಯಾದಿ ನಾಟಕದ ಹುಚ್ಚು ಬೇರೆ...
ಬರುವುದಿಲ್ಲವಿನ್ನೆಂದರೆ ಬರುತಿದ್ದರು ದೂರ ದೇಶದ ವ್ಯಾಪಾರಿಗಳು ವಿಧ ವಿಧ ಸರಕನು ತುಂಬಿದ ಹೇರು ಎಳೆಯಲು ಅರಬೀ ಕುದುರೆಗಳು ಊರಿನ ಮುಂದೆಯೆ ಡೇರೆಯ ಹಾಕಿ ಹೂಡುವರಿವರು ಬಿಡಾರ ಗಲ್ಲಿ ಗಲ್ಲಿಗೂ ಬರುವರು ಹುಡುಕಿ ಮಾತೇ ಮಾಯಾ ಬಜಾರ ಉಂಗುರ ಮಣಿಸರ ಕಾಡ...
ಹೊತ್ತು ಮೀರಿತ್ತು ಮನಸ್ಸು ದಣಿದಿತ್ತು ತನಗೆ ತಾನೇ ವಿರೋಧಿಸುತಿತ್ತು ಆಗ ಟಣ್ಣನೆ ಸಿಡಿದೆ ನೀನು ನಕ್ಷತ್ರಪಥದಿಂದ ಬಿದ್ದ ಶಾಖೆ ರೂಪಿಸುವಂತೆ ತನ್ನ ದಾರಿಯ ರೇಖೆ ತಡೆಯಲೆಳಸಿದ್ದೆ ಕೈಚಾಚಬಯಸಿದ್ದೆ ಕಾದು ಕೆಂಪಾದ ಕಬ್ಬಿಣದ ತುಂಡು ಬಡಿವ ಕಮ್ಮಾರನದರ...
ಯಾಕೆ ಸೃಷ್ಟಿಸಿದೆ ನನ್ನನೀ ರೀತಿ ಅಲ್ಲಿಗೂ ಸಲ್ಲದೆ ಇಲ್ಲಿಯೂ ನಿಲ್ಲದೆ ಇರುಳಿನೇಕಾಂತದ ನೀರವತೆಯಲ್ಲಿ ನನಗೆ ನಾನೇ ಆಗುವಂತೆ ಭೀತಿ ಬೀಸಿತೆ ಗಾಳಿ? ಆ! ಏನದು ಎದ್ದು ಮರಮರದ ಮೇಲು ಮರಮರವೆಂದು ಹಾರುವುದೆ ಕುಣಿಯುವುದೆ ಕುಪ್ಪಳಿಸುವುದೆ ನೋಡುವೆನು ನಾ...
ಮಂಡೂಕಗಳಿಗವಸ್ಥೆ ಮೂರು: ನಿದ್ದೆ, ಎಚ್ಚರ, ಮಧ್ಯಂತರ. ಮನುಷ್ಯರಿಗೆ ಕೂಡ ಅಷ್ಟೆ. ನಿದ್ದೆಯಲಿ ಕನಸು ಕೀಟಗಳದ್ದೆ ಎಚ್ಚರದಲವುಗಳ ಹಿಡಿಯಲು ಹುಡುಕಾಟ ಸಿಕ್ಕಿದರೆ ಊಟ, ಇಲ್ಲದಿದ್ದರೆ ಉಪವಾಸ ಮಧ್ಯಂತರಾವಸ್ಥೆಯಲಿ ಹೀಗೆಯೇ ಬೇಟ ಹೊಸತೇನಲ್ಲ; ತಲಾಂತರದಿಂ...














