Home / Kannada

Browsing Tag: Kannada

ತಂಗಾಳಿ ಸೂಸಿ ಹಾಡಿದ ಜೋಗುಳ ನಿಶ್ಶಬ್ದ ರಾತ್ರಿಯಲಿ ಜುಳು ಜುಳು ನದಿಯೊಡಲ ತುಂಬ ಅವನ ಧ್ಯಾನ ಬಾನ ಬುಡದಲಿ ಚಂದಿರನ ಬೆಳಕು ಅವಳು ಕಾದಳು ಅವನ ಕೊಳಲನಾದಕ್ಕಾಗಿ. ಹೂವಿನ ಪಕಳೆ ತುಂಬ ಗಂಧ ವಲಸೆ ಹೋದ ಹಕ್ಕಿಗಳ ನೆರಳು ತೆನೆ ತೂಗಿದ ಬಯಲ ಆಲಯ ಮೌನವರಿಸಿ...

ಜೀವನದ ಹಗಲಿನಲಿ ಕನಸು ಸುಳಿವಂದದಲಿ, ಆಕೆ ಬಂದಳು ಮುಂದೆ; ನಡುಹಗಲು ಬರುತಿರಲು ಅಳಿವಡೆವ ನೆರಳಿನೊಲು ಹಾರಿಹೋದಳು ಹಿಂದೆ! ಅವಳಿಲ್ಲ, ಈಗೆನ್ನ ಮನಸು ಕನಸಿನ ಅನ್ನ. ಕಂಗೆಟ್ಟ ಶಶಿ ನಾನು; ದಿನ ದಿನಕು ಸಣ್ಣಾಗಿ, ದುಃಖದಲಿ ಹಣ್ಣಾಗಿ, ಅಳಿವ ದಾರಿಗೆ ಹ...

ಸ್ತ್ರೀ ಜೀವನದೂದ್ದಕ್ಕೂ ಕಷ್ಟದ ಸುರಿಮಳೆ ಪ್ರಪಂಚದಲ್ಲಿ ಸ್ತ್ರೀಗೆ ವಿಮೋಚನೆ ಯಾವಾಗ? ಜನನದೊಂದಿಗೆ ಸಂಕಷ್ಟ ಚಿಕ್ಕಂದಿನಿಂದಲೇ ಬಡತನ ಜ್ಞಾನಾರ್ಜನೆಗೆ ಕೊರತೆ ಕುಟುಂಬದಲ್ಲಿ ಪ್ರೀತಿ ನಾ ಕಾಣೆ ಸರ್ವರ ಕಾಟಕ್ಕೆ ನಾ ಬಲಿಪಶು ಹೆಣ್ಣಿಗೆ ಇಂಥ ಜೀವನ ಬೇ...

ನೀನಿಳಿಯುವಾಗಿನ ನಿನ್ನ ನಗ್ನಕಾಲುಗಳ ಸೊಬಗನ್ನು ಕಣ್ಣುಗಳಲ್ಲಿನ ಆಚಾನಕ ಬೆರಗನ್ನು ಭಯ ಹಾಗೂ ಲಜ್ಜೆಗಳನ್ನು ನಾನು ಕಂಡಿರುವೆನು. ನೀನು ಬಂದಿಳಿದ ಬಸ್ಸು ಮುಂದೆಲ್ಲಿಗೊ ಹೊರಟು ಹೋಯಿತು. ಎದ್ದ ಧೂಳಿನಲ್ಲಿ ಯಾರೊ ಹಿಂದಿರುಗಿ ನೋಡಿದರು. ನೀನು ಮುಖ ಒರ...

ಸುಗ್ಗಿಯ ಹಬ್ಬವು ಬಂದಿದೆ ಅಣ್ಣ ತಂದಿದೆ ಸಂಭ್ರಮ ಸಗ್ಗದ ಬಣ್ಣ ಹಾಲಕ್ಕಿ ಒಕ್ಕಲ ಕುಂಚವು ಕುಣಿದಿದೆ ರೈತನ ಬವಣೆಯ ಕಾಲವು ಕರಗಿದೆ ಖಾಲಿಯಾ ಕಿಸೆಯದು ಝಣ-ಝಣ ಎಂದಿದೆ ಬತ್ತದ ಕಣಜವು ಉಕ್ಕೆದ್ದು ಬಂದಿದೆ ಮಾಮರದ ಸೆರಗಿನಲಿ ಹೂ ಬಿಸಿಲ ವೈಯಾರ ಕೋಕಿಲದ ...

ಮುಂಜಾನೆಯ ಹಗಲಲ್ಲಿ ಮಿಂದ ಬೆಳ್ಳಿ ನಾನಾಗಿ ಹಸನಾದ ಬಾಳಿಗೆ ಹೊಸತಾದ ಪ್ರೀತಿ ತುಂಬಿದ ಭಾಸ್ಕರ ನೀನಾಗಿ || ಋತು ಚಕ್ರಧಾರೆ ಹೊನಲಲ್ಲಿ ಓಕುಳಿ ಚೆಲ್ಲಿದ ವಸಂತ ನೀನಾಗಿ ನಿನ್ನಲಿ ಬೆರೆತ ಮನವು ತಂಪನೊಸೆದ ಪ್ರಕೃತಿ ನಾನಾಗಿ || ಹೊಂಬೆಳಕ ಸಂಜೆಯಲಿ ಮೇಘ...

ಕುಳ್ಳ ದುರ್ಬಲ ಮಗುವನ್ನು ನೋಡಿ ಬಡ ತಂದೆ ತಾಯಿಗಳಿಗೆ ಯಾರೋ ಹೇಳಿದ್ದರಂತೆ: ಚಿಂತೆಬೇಡ ಇವನು ನಿಮಗೆ ದೇವರು ಕೊಟ್ಟವರವಾಗುತ್ತಾನೆ. ಮುಂದೆ ರಾಜಮಹಾರಾಜರ ಭಾರೀ ಕುದುರೆಗಳನ್ನು ಸವಾರಿ ಮಾಡಿಕೊಂಡಿರುವ ಸರದಾರ ಅವರು ಹೇಳಿದ್ದು ಅವನ ಗ್ರಹಗತಿಗಳನ್ನು ...

೧ ನಿನ್ನ ಹೃದಯದಂಗಳೊಳಗೆ ಎನ್ನದೊಂದು ಅಂಗುಲಾ ಎನ್ನದೆಲ್ಲ ಹೃದಯ ಬೇಗೆ ನಿನ್ನ ಚರಣದೊಳು ಮಂಗಲಾ ೨ ಅದಾವ ಮಹಿಮೆಯಾ ಮಟ್ಟದಲಿ ಯಾವ ತೆರದಿ ನೀನಿರುವಿ ಆವದನ್ನರಿಯದವ ನಾನೇನು ಗೈಯಲಿ ಓ ಸದ್ಗುರುವೆ ಕೇಳೆನ್ನ ಮನವಿ ೩ ಹಸುಗೂಸು ನಾನಿಹೆನು ಇನ್ನೂ ತಿಳಿಯ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...