ಕುಳ್ಳ ದುರ್ಬಲ ಮಗುವನ್ನು ನೋಡಿ ಬಡ ತಂದೆ ತಾಯಿಗಳಿಗೆ
ಯಾರೋ ಹೇಳಿದ್ದರಂತೆ: ಚಿಂತೆಬೇಡ
ಇವನು ನಿಮಗೆ ದೇವರು ಕೊಟ್ಟವರವಾಗುತ್ತಾನೆ.
ಮುಂದೆ ರಾಜಮಹಾರಾಜರ ಭಾರೀ ಕುದುರೆಗಳನ್ನು
ಸವಾರಿ ಮಾಡಿಕೊಂಡಿರುವ ಸರದಾರ
ಅವರು ಹೇಳಿದ್ದು ಅವನ ಗ್ರಹಗತಿಗಳನ್ನು ಲೆಕ್ಕ ಹಾಕಿ
ಈಗ ಅವನಾಗಿದ್ದಾನೆ ಅತ್ಯಂತ ಪ್ರಸಿದ್ಧ ರೇಸ್ ಜಾಕಿ
*****

Latest posts by ಶ್ರೀನಿವಾಸ ಕೆ ಎಚ್ (see all)