
ಕಣ್ಣಂಚಿನಲ್ಲಿ ಉಯ್ಯಾಲೆಯಾಡುತ್ತಿದ್ದ ಹನಿಯಲ್ಲಿ ಹೆಸರಿಲ್ಲದ ಯಾವುದೋ ಉಸಿರು ದೋಣಿಯಾಟವಾಡುತ್ತದೆ ಯಾವುದು ಆ ಹೆಸರಿಲ್ಲದಾ ಉಸಿರು? ಕಣ್ಣಂಚಿನಲ್ಲಿ ಉಯ್ಯಾಲೆಯಾಡುತ್ತಿದ್ದ ಹನಿಯಲ್ಲಿ ನೆನಪು ರಂಗೋಲಿಯಿಡುತ್ತದೆ ಹಕ್ಕಿಯೊಂದು ಮೊಟ್ಟೆಯಿಡುತ್ತದೆ ಎಲ...
೧ ಬಾಗಿಲಿಲ್ಲದ ಬಯಲೊಳಗಿಂದ ಮೆಲ್ಲಗೆ ಬಳುಕುತ್ತಾ ಬಂತು ಬೆಳಕಿನ ಹೊಳೆ ಅದರಾಳದಿಂದೆದ್ದ ನೂರಾರು ನಿಹಾರಿಕೆಯರು ಬೊಗಸೆ ತುಂಬಿ ಸುರಿಸುತ್ತಾರೆ ಬಣ್ಣದ ಬೆಳಕಿನ ಮಳೆ. ಹೇಳಿಕೊಳ್ಳಲು ಊರಿಲ್ಲದ ಊರಿಕೊಳ್ಳಲು ಬೇರಿಲ್ಲದ ಸೋರಿಕೊಳ್ಳಲು ನೀರಿಲ್ಲದ ಬೆಳಕಿ...
ಅರಳಲೋ ಬೇಡವೋ ಎಂದನುಮಾನಿಸುತ್ತಲೇ ಎಲೆದಳದಳಗಳ ಅರ್ಧವಷ್ಟೇ ಮೆಲ್ಲಗೆ ವಿಕಸಿಸಿ ಯಾರ ದಿಟ್ಟಿಗೂ ತಾಗದಿದ್ದರೆ ಸಾಕೆನುತ ಮೈಮನಗಳನೆಲ್ಲ ಮುದುರಿಸಿ ದೇಹವೂ ನಾನೇ ಆತ್ಮವೂ ನಾನೇ ಬಚ್ಚಿಡಲೆಂತು ಎರಡನೂ ಪರಕೀಯ ದಾಳಿಯಿಂದ? ಕಳವಳದಿಂದ ಸಣ್ಣ ತಾಗುವಿಕೆಗೂ ...
ಬೇರಿಳಿಸಲು ಕುಡಿಯೊಡೆಯಲು ಹೂ ಅರಳಿಸಲು ಸೂರ್ಯನೇನು ಒಂದು ಕಾಳೇ? ಜೀವ ತುಂಬಲು ಚೈತನ್ಯ ನೀಡಲು ಬಿಡದಂತೆ ಹಿಡಿದಿಡಲು ಆಗಸವೇನು ಮಣ್ಣೇ ? ಅನಾದಿಯಿಂದ ಆಗಸಕ್ಕೆ ಅದೇ ದೂರು ಸೂರ್ಯನ ಆತ್ಮಸಾಂಗತ್ಯವಿಲ್ಲದ ಬೇಜಾರು ಸೂರ್ಯನಿಗೋ ಅವನದೇ ಹಾದಿ ನಡೆದದ್ದೆ...
ಹೀಗೆ ಒಮ್ಮೊಮ್ಮೆಯಾದರೂ ಎಲ್ಲ ಮಿತಿಗಳ ಮೀರಿ ನನ್ನೆದೆಯ ದಡಕೆ ಅಪ್ಪಳಿಸು ಬಾ ಕಡಲೇ. ಶತಶತಮಾನಗಳಿಂದ ಕಾದು ಕೆಂಡವಾಗಿರುವ ನನ್ನೆದೆಯ ಸುಡುಮರಳ ಕೊಂಚ ತಂಪಾಗಿಸಿಕೊಳ್ಳುತ್ತೇನೆ. ನೀ ಹೊತ್ತು ತರುವ ಕುಳಿರ್ಗಾಳಿಗೆ ಒಮ್ಮೆಯಾದರೂ ಅರಳಿ ಮತ್ತೊಮ್ಮೆ ಪಕ್...
ಕಥೆಯಂತೂ ಸಾಗುತ್ತದೆ ಕಂದ ಆದರೊಂದೇ ಷರತ್ತು ಕಥೆ ಕೇಳುವ ಕುರುಹಿಗೆ ಕಥೆಗೆ ಉಸಿರಂತೆ ನೀ ‘ಹೂಂ’ ಎಂದರೆ ಮಾತ್ರ ಮುಂದೆ ಸಾಗುತ್ತದೆ ಕಥೆ ತಡವರಿಸದೆ! ಆಡ್ಡಗೋಡೆಯ ಮೇಲಿನ ದೀಪ ಇತ್ತಲೂ ಒಂದಿಷ್ಟು ಬೆಳಕು ಚೆಲ್ಲಿ ಅತ್ತಲೂ ಒಂದಿಷ್ಟು ಬೆಳಕು ಚೆಲ್ಲಿ ಎ...
ಏಕಿಂಥ ಬಿಗುಮಾನ ಬಾಗಿಲಾಚೆಯ ಮೌನ? ಹೊಸ್ತಿಲವರೆಗೂ ಬಂದು ನಿಂತು ಮುಖವ ಮರೆಸುವುದೇ ಇಂತು? ಹೇಳದೇ ಬರುವವರು ಕೇಳದೇ ಹೋಗುವವರು ಎಲ್ಲರಿಗಾಗಿ ವಿಸ್ತಾರವಾಗಿ ತರೆದೇ ಇದೆ ಬಾಗಿಲು. ನೀನು ಅತಿಥಿಯೂ ಅಲ್ಲ ದೇವಮಾನವನೂ ಅಲ್ಲ ನನ್ನದೇ ಕಳೆದು ಹೋದ ಒಂದು ತ...
ಎಚ್ಚರ ಎಚ್ಚರ ಕಾರ್ಗತ್ತಲ ತೆಕ್ಕೆಯಲಿ ಪೊದೆಯೊಳಗೆ ಅವಿತುಕುಳಿತ ಚೋರ ಹೊಕ್ಕಾನು ಮನೆಯೊಳಗೆ ನಿಶಾದೇವಿಯಾಲಿಂಗನದಲಿ ಮೈ ಮರೆತರೆ ಎಲ್ಲವೂ ಸೂರೆ ಕಡಲಿನ ತೆರೆ ದಂಡೆಗಪ್ಪಳಿಸಿದರೆ ಅರಿವಾಗುವ ಮೊದಲೇ ಎಲ್ಲಾ ನೀರೇ! ಎಚ್ಚರ ಎಚ್ಚರ ಕಿಟಕಿ, ಬಾಗಿಲು, ವಾತ...
ಮುಚ್ಚಿಕೊಂಡ ಕದಗಳ ಆಹ್ವಾನವಿಲ್ಲದ ಅಂತಃಪುರದೊಳಗೂ ಹೇಗೋ ನುಗ್ಗಿಬಿಡುತ್ತಾಳೆ ಗೊತ್ತೇ ಆಗದಂತೆ ಮೆಲ್ಲ ಮೆಲ್ಲಗೆ ಗೂಡುಕಟ್ಟಿ ಕನಸಿನ ಮೊಟ್ಟೆ ಇಟ್ಟುಬಿಡುತ್ತಾಳೆ ಇವಳದೇ ಜೀವಭಾವ ಮೈಮನಗಳ ತುಂಬಿಕೊಂಡು ಮೊಟ್ಟೆಯೊಡೆದು ಹುಟ್ಟಿಬಂದ ಕನಸಿನ ಕಂದನಿಗೆ ವ...














