
ಸಂತೆ ಗದ್ದಲದಲಿ ಕೂತು ಸಂತರಾಗುವ ಹುಚ್ಚು! ನೂರಾರು ಆಮಿಷಗಳ ಚುಂಬಕ ಸೆಳೆತದಲೂ ಏನೂ ಬೇಡೆನುತ ಕಣ್ಮುಚ್ಚಿ ಕುಳಿತರೂ ಮತ್ತದೇ ಸೆಳೆವ ಬಣ್ಣದ ಚಿತ್ರಗಳು. ಗಳಿಗೆಗೊಮ್ಮೆ ಅಲ್ಲಿಲ್ಲಿ ಹಾರುವ ಹುಚ್ಚು ಮನಸಿಗೆ ಕಲಿಸುವುದೆಂತು ಸ್ಥಿತಪ್ರಜ್ಞತೆಯ ಪಾಠ? ನ...
ಅಟ್ಟ ಏಣಿಗಳ ಅದೇ ಹಳೇ ಕಥೆ ಅಟ್ಟವೇರಲು ಏಣಿ ಏಣಿ ಕೊನೆಗೆ ಅಟ್ಟವಂತೆ! ಒಂದೊಂದು ಏಣಿ ಮೆಟ್ಟಿಲೇರಲೂ ಪ್ರಯಾಸ ದೀರ್ಘ ಪ್ರವಾಸ ಹಠ ಹಿಡಿದು ಉಪವಾಸ! ಎರಡನೇ ಮೆಟ್ಟಿಲೇರಿದರೆ ಮೊದಲ ಮೆಟ್ಟಿಲ ಮರೆವು ಏರುತ್ತಾ ಹೋದಂತೆ ಕೆಳಗಿನದೆಲ್ಲವೂ ಕೆಲಸಕ್ಕೆ ಬಾರದ...
ಮತ್ತೆ ಮತ್ತೆ ಬದುಕಿಗೊಡ್ಡುವ ಜೀವನೋತ್ಸಾಹದ ಪ್ರತೀಕವಾಗಿ ನಿಂತ. ಮದನಿಕೆಯರ ಚಿತ್ರ. ಕಣ್ ತುಂಬಿ ಮನ ತುಂಬಿ ಇಲ್ಲೇ ಇದೇ ನಿಜವೆಂದು ಭ್ರಾಂತ. ಧುಮ್ಮಿಕ್ಕಿ ಹರಿವ ಹೇಮೆ ಒಮ್ಮೆ ಮೇರೆ ಮೀರಿ ತುಳುಕಿ ಮೈಭಾರ ತಡೆಯದೇ ಬಳುಕಿ ಸಡಗರದ ಪಯಣ ಗಮ್ಯದೆಡೆಗೆ...
ಇಳೆಗೆ ಹೊಸರಾಗ ಕಲಿಸುವ ಹುಚ್ಚು ಯಾಕೆ ಬಂತೋ ಈ ಮಳೆಗೆ? ಹೊತ್ತು – ಗೊತ್ತು ಒಂದೂ ಇಲ್ಲದೇ ಹೀಗೆ ಸುರಿದು ಬಿಡುವುದೇ ಇಳೆಗೆ? ನಡೆಯುತ್ತಾ ನಡೆಯುತ್ತಾ ಅರ್ಧದಲ್ಲೇ ಥಟ್ಟನೆ ಎಲ್ಲಾ ನಿಂತು ಗಾಳಿ – ನೀರು – ಬೇರುಗಳೆಲ್ಲಾ ಇಳೆಯೊ...
ಮೌನದಕ್ಷಯ ಪಾತ್ರೆಯೊಳಗೆ ಒಂದು ಅಗುಳು ಮಾತು ಕಾವು ಕೂತು ಚಟಪಟನೆ ಸಿಡಿದು ಸಾವಿರವಾಯ್ತು ಲಕ್ಷವಾಯ್ತು ಅಕ್ಷಯವಾಯ್ತು ಎಷ್ಟೊಂದು ಮಾತು ಕಣ್ಣುಬಿಟ್ಟಿದೆ ಮೊಳೆತು! ಮೌನ ಹೊದ್ದ ನಿರ್ಜೀವ ಕನಸುಗಳಿಗೆ ಮಾತು ತುಂಬುವ ಹೊತ್ತು ಕೆಂಪು, ಹಸಿರು, ಹಳದಿ, ನ...
ಅವಳು ದೋಸೆಹಿಟ್ಟು ತಿರುವಿ ಬೋಸಿಗೆ ತುಂಬಿಟ್ಟು ಇದ್ದಂಗೇ ಇರಬೇಕು ಎಂದೆಚ್ಚರಿಕೆ ಕೊಟ್ಟು ನೆಮ್ಮದಿಯಲಿ ಮಲಗಿ ಏಳುವಾಗಾಗಲೇ… ದೋಸೆಹಿಟ್ಟು ಒಳಗೇ ಹುಡುಗಿ ಸೊಕ್ಕಿ ಬೋಸಿ ಮೀರಿ ಉಕ್ಕುಕ್ಕಿ ಹರಿಹರಿದು ಹೊಸಿಲು ದಾಟಿ ಶುಭ್ರ ಬಿಳಿಯ ನದಿಯಾಗಿ ಚ...














