
ಅದೇ ಮುಗಿಲಿದೆ ಅದೇ ದಿಗಿಲಿದೆ ಅಂದಿಗು ಇಂದಿಗು ಇದೇ ಇಂದಿಗು ಎಂದಿಗು ಅದೇ ಬೆಳಕು ಮೂಡುತಿದೆ ಬೆಳಕು ಮಾಯುತಿದೆ ಹಗಲು ರಾತ್ರಿಗಳ ಹೊಸೆಯುತಿದೆ ಹೂವು ಬಿರಿಯುತಿದೆ ಹೂವು ಬೀಳುತಿದೆ ಬೀಜ ಬೇರುಗಳ ಹೊಸೆಯುತಿದೆ ಕಡಲು ಮೊರೆಯುತಿದೆ ಕಡಲು ಕರೆಯುತಿದೆ ...
ಕುದುರೆಮುಖ ಕುದುರೆಮುಖ ಆ ಹೆಸರಿನಲ್ಲೆ ಎಂಥ ಸುಖ ಗುಡ್ಡವಿಲ್ಲ ಬೆಟ್ಟವಿಲ್ಲ ಶಬ್ದ ಕೊರೆದ ನಿರ್ಮಿತಿ ಗಾಳಿಗಿಂತ ವೇಗವಾಗಿ ಎಲ್ಲಿ ನನ್ನನೊಯ್ಯುತಿ ದಾಟಿ ಕಡಲ ಮೀಟಿ ಮುಗಿಲ ಬಂದ ದೇಶ ಯಾವುದು ತೆರೆದು ಕಿಟಿಕಿ ಕಣ್ಣ ಮಿಟುಕಿ ಕಂಡ ರೂಪು ಯಾರದು ನಡೆದು...
ಎಲ್ಲ ಕಪ್ಪೆಗಳಂತಲ್ಲ ನಮ್ಮ ಗೂಂಕುರು ಕಪ್ಪೆ ಇನ್ನುಳಿದ ಕಪ್ಪೆಗಳೆಲ್ಲ ಇದುರೆದುರು ಬರಿಯ ಸಪ್ಪೆ ಹೆಬ್ಬಂಡೆಯಂತೆ ಹೇಗೆ ಕುಳಿತು ಬಿಟ್ಟಿದೆ ನೋಡಿ ಹೀಗೆ ನಾವು ನಡೆವ ದಾರಿಗಡ್ಡ ಎಲ್ಲಿಂದ ಬಂತೊ ಈ ಗುಡ್ಡ! ಮೇಲೆಲ್ಲ ಕಣಿವೆ ಕೊಳ್ಳ ಅಲ್ಲಿಲ್ಲಿ ಕೆಲವು ...
ಕಡಲೂ ಹೇರಳ ಕೆರೆಯೂ ಹೇರಳ ತುಂಬಿದ ಕೆರೆಯೂ ಹೇರಳ ಕೇರಳ ಕೇರಳ ಕೇರಳ ಬಿಸಿಲೂ ಹೇರಳ ಮಳೆಯೂ ಹೇರಳ ಹರಿಯುವ ಹೊಳೆಯೂ ಹೇರಳ ಕೇರಳ ಕೇರಳ ಕೇರಳ ಮರವೂ ಹೇರಳ ಗಿಡವೂ ಹೇರಳ ಹಸಿರಿನ ಮಲೆಗಳು ಹೇರಳ ಕೇರಳ ಕೇರಳ ಕೇರಳ ತಾಳೆಯು ಹೇರಳ ಬಾಳೆಯು ಹೇರಳ ನಾರೀಕೇಳವ...
ಯಾವುದು ಅಸಲಿ ಯಾವುದು ನಕಲಿ ಅತುಲತ್ ಮುದಲಿ ಅತುಲತ್ ಮುದಲಿ ಗುಡುಗಿತು ಕಾಡು ನಡುಗಿತು ನಾಡು ಉರುಳಿತು ಒಂದೊಂದೇ ಮನೆ ಮಾಡು ಇಲಿಯೋ ಹುಲಿಯೋ ಹುಡುಕಿಸಿ ನೋಡು ಯಾವುದು ಅಸಲಿ ಯಾವುದು ನಕಲಿ ಅತುಲತ್ ಮುದಲಿ ಅತುಲತ್ ಮುದಲಿ ಅವಲೋಕಿತೇಶ್ವರನಿಂದ ಕಲಿ!...
ಒಂದೇ ಒಂದೇ ಒಂದೇ ಮನುಷ್ಯರೆಲ್ಲರು ಒಂದೇ ಒಂದೇ ಭೂಮಿ ಒಂದೇ ನಿಸರ್ಗ ಮನುಷ್ಯರಿಗಿರುವುದು ಒಂದೇ ಸ್ವರ್ಗ ಒಂದೇ ಜಾತಿ ಒಂದೇ ವರ್ಗ ಉಳಿದುದಲ್ಲವೂ ಅಳಿವಿನ ಮಾರ್ಗ ಒಂದೇ ಗಾಳಿ ಒಂದೇ ನೀರು ಒಂದೇ ಹುಟ್ಟು ಸಾವಿನ ತೇರು ಒಬ್ಬನೆ ಗುರು ಒಬ್ಬನೆ ದೇವರು ಇರ...
ಚಿಂತಲ್ ಬಸ್ತಿ ಚಿಂತಲ್ ಬಸ್ತಿ ಬಡವರ ಬಗ್ಗರ ಅಗ್ಗದ ಆಸ್ತಿ ಸ್ವರ್ಗಕ್ಕಿಂತಲೂ ನೀನೇ ಜಾಸ್ತಿ ರಾಮುಡು ಭೀಮುಡು ಪರಮೇಶ್ವರುಡು ಕಾಜಿಬಿ ಗೀಜೀಬಿ ಗೊರಿಬಿಗೆಲ್ಲಾ ಎಲ್ಲರಿಗೂ ಇದು ಒಂದೇ ಮಾಡು ಇರುವಂತೆಲ್ಲರಿಗೊಬ್ಬನೆ ಅಲ್ಲಾ! ಆಚೆಗೆ ಬಯಲು ಈಚೆಗೆ ರೈಲು...













