ಮನುಷ್ಯರೆಲ್ಲರು

ಒಂದೇ ಒಂದೇ ಒಂದೇ
ಮನುಷ್ಯರೆಲ್ಲರು ಒಂದೇ

ಒಂದೇ ಭೂಮಿ ಒಂದೇ ನಿಸರ್ಗ
ಮನುಷ್ಯರಿಗಿರುವುದು ಒಂದೇ ಸ್ವರ್ಗ
ಒಂದೇ ಜಾತಿ ಒಂದೇ ವರ್ಗ
ಉಳಿದುದಲ್ಲವೂ ಅಳಿವಿನ ಮಾರ್ಗ

ಒಂದೇ ಗಾಳಿ ಒಂದೇ ನೀರು
ಒಂದೇ ಹುಟ್ಟು ಸಾವಿನ ತೇರು
ಒಬ್ಬನೆ ಗುರು ಒಬ್ಬನೆ ದೇವರು
ಇರು ಎಲ್ಲಾದರು ಮನುಷ್ಯನಾಗಿರು

ಕಪ್ಪು ಕೆಂಪು ಕಂದು ಬಿಳುಪು
ಒಂದೇ ಬೆಳಕಿನ ಬೇರೆಯೆ ಹೊಳಪು
ಆಫ್ರಿಕ ಏಶಿಯ ರಶಿಯ ಯುರೋಪು
ಒಂದೇ ಭೂಮಿಯ ವಿಧ ವಿಧ ರೂಪು

ಒಂದೇ ತೋಟದಿ ಎಷ್ಟೋ ಹೂವು
ಇದ್ದರೇನೇ ಇರುವುದು ಚೆಲುವು
ಎಲ್ಲರ ಪಡೆದುದು ಒಂದೇ ನೆಲವು
ಎಲ್ಲರ ಕಾಯುವುದೊಂದೇ ಒಲವು
ಒಂದೇ ಒಂದೇ ಒಂದೇ
ಮನುಷ್ಯರೆಲ್ಲರು ಒಂದೇ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವರ ‘ಸರ್ವಿಸು’
Next post ಹೇಳಿರಲಿಲ್ಲವೇ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…