ಹಲ್ಲಿ ಲೊಚಗುಟ್ಟಿದಂತೆ ಕೇಳಿದ ಸದ್ದು ಏನೆಂದು
ನನಗೆ ಗೊತ್ತಾಯಿತು.
ರಾತ್ರಿ ನನ್ನವನನ್ನು ಕೇಳಿದೆ
ಈ ಕೃಷ್ಣ ತುಂಬಾ ಕಳ್ಳ ಅಲ್ಲವೇ?
ಅವನು ಹೇಳಿದ, ನಾನು ಮೊದಲೇ ಹೇಳಿರಲಿಲ್ಲವೇ
ಮಾರನೆ ದಿನ ಅವಳನ್ನು ಕೇಳಿದೆ, ಹೇಗಿತ್ತು?
ಅವಳು ಹೇಳಿದಳು, ನಿನ್ನ ಕಣ್ಣ ಮುಚ್ಚಿ ಹಿಡಿದು ನನಗೆ
ಕೊಟ್ಟ ಪುಕ್ಕಲು ಮುತ್ತು ಯಾರಿಗ್ಬೇಕಿತ್ತು?
ತುಂಬಾ ಸೆಪ್ಪೆಯಾಗಿತ್ತು.
*****