ಗ್ರಾಮರ್ ಟೀಚರಿಗೆ

ಬಿತ್ತುತ್ತಿದ್ದಾನೆ ಮುಳ್ಳನ್ನ ಕುಟ್ಟುತ್ತಿದ್ದಾನೆ ತೌಡನ್ನ ಕಟ್ಟುತ್ತಿದ್ದಾನೆ ಒಂದೇ ಸಮನೆ ತಾನೇ ತನ್ನ ಚಟ್ಟವನ್ನ. ಅಯ್ಯಾ ಬೆಳ್ಳಯ್ಯ! ನಿನ್ನ ಮೈಯ ಮರೆಸುವ ಈ ಗ್ರಾಮರು ಡಾಮರು ಯಾಕೆ? ಕೊಟ್ಟ ಕಾಫಿಗೆ ಥ್ಯಾಂಕ್ಸ್ ಹೇಳುವಾಗಲೂ ಪಾಣಿನಿ ಪತಂಜಲಿ...

ರಾಮನಾಥನ ವರದಿ

ಅಂಥಿಂಥವನಲ್ಲ ರಾಮನಾಥ ಕಾರ್ಬನ್ ಕಾಪಿ ವರದಿಗಾರ, ಎಂಥೆಂಥವರನ್ನೋ ನುಂಗಿ ನೀರು ಕುಡಿದವನು ಒಂದರ್ಥದಲ್ಲಿ ಕ್ರಾಂತಿಕಾರ. ಅಸಾಧ್ಯ ಸತ್ಯವಂತ ರಾಮನಾಥ ನಾ ಹೇಳಿದ್ದನ್ನೇ ಕಕ್ಕಿದ, ಪದ ಅಳಿಸದೆ ಪದ ಬಳಸದೆ ಹೊಸಾ ಹೊಸಾ ಅರ್ಥ ಬೆಳೆದ....

ಕಲಾವಿದರ ಕುಟುಂಬಗೀತೆ

ಕಲಾವಿದರ ಹಣೆಯಲ್ಲಿ ಮೂರನೆ ಕಣ್ಣೊಂದಿದೆ. ಚಿಕ್ಕ ಮಣ್ಣಕಣದಲ್ಲೂ ಬಣ್ಣದ ಕುಂಬಳ ಕಾಣುವ ಈ ವಿಚಿತ್ರ ಕಣ್ಣಿಗೆ ಚಂದ್ರಮುಖದ ಹಳ್ಳಕೊಳ್ಳ ಖಂಡಿತ ಕಾಣುತ್ತದೆ. ಆಳಗಳನ್ನ ಮರೆಸಿ ಬೆಳದಿಂಗಳ ಮೆರೆಸಿ ನಗುತ್ತ ಬಂದರೆ ಎದುರಿಗೆ ಸುಂದರಿ ಶೂರ್ಪನಖಿ,...

ದೀಪಿಕಾ – ಸ್ವಗತ

ಯಾಕೆ ಈ ಆನಂದ ಕಾಡುತ್ತಾನೋ ಹೀಗೆ ಆಡುತ್ತಾನೆ ಆಡುತ್ತಾನೆ ಆಡುತ್ತಾನೆ ದೇವರೇ ನಡುಬೀದಿಯಲ್ಲಿ ಬಟ್ಟೆ ಎಳೆದ ಹಾಗೆ ಥಟ್ಟನೆ ಕಿಬ್ಬೊಟ್ಟೆ ಮೇಲೆ ಕೈಯಿಟ್ಟಂತೆ ಫಕ್ಕನೆ! ಒಳಗೆ ಕತ್ತಲೆಯಲ್ಲಿ ಹುಗಿದ ಗುಟ್ಟಿಗೆ ಕಡ್ಡಿ ಗೀರಿ ಭಾರಿ...

ಬುದ್ಧಿವಾದ

ಕೇಳಲಾರೆ ಕಣೆ ದೀಪಿಕಾ ನಿಲ್ಲಿಸೆ ಈ ಬಡಾಯಿ, ಡೌಲು ನಾ ಕಾಣದ್ದೇನೇ ನೀ ಕುಟ್ಬುವ ಈ ಜಂಬದ ಡೋಲು? ಗಂಡಿನ ಹಂಗಿಲ್ಲದೆ ಬಾಳುತ್ತೀಯಾ? ಲೇ ಹುಡುಗಿ! ತೇಲುವ ಬೆಂಡಾಗುತ್ತದೆಯೆ, ಬಾಗಿದ ಜೊಂಡಾಗುತ್ತದೆಯೆ ನಿಂತ ನೆಲವನ್ನೆ...

ಅಹವಾಲು

ಸರಿಯೇನೆ ದೀಪಿಕಾ ಇದು ಸರಿಯೇನೇ? ಈ ಜಂಭ, ನಾಲಿಗೆಯಲಿ ಬೆನ್ನಿರಿಯುವ ಉರಿವ್ಯಂಗ್ಯ ಅಡಬಹುದೇನೇ ದೀಪಿಕಾ ಕಾಡಬಹುದೇನೇ? ಮಾತಲ್ಲಿ ಕೂದಲು ಸೀಳಿ ಬಗೆಯಬಹುದೇನೇ ಎದೆಯ ನನ್ನ ಮನೆಯಲ್ಲೇ ನನ್ನ ಹುಗಿಯಬಹುದೇನೇ? ಇಲ್ಲವೆ, ಕೈಗೆ ಬಿದ್ದರೂ ನಾ...

ಕೊರಗು

ಸತ್ತ ಕನಸನ್ನೆತ್ತಿ ಮತ್ತೆ ನೀರೆರೆದು ಚಿಗುರಿಸಿದ ನೀರೆ ನೀನು ಯಾರೆ ? ಮುಗಿಲಲ್ಲಿ ಅಲೆಸಿರುವ ಕೀಲುಕುದುರೆ, ನನ್ನ ಅಮಲಿನಾಳದಲದ್ದಿದಂಥ ಮದಿರೆ. ಉರಿವ ಬಿಸಿಲಿಗೆ ತಂಪುಗಾಳಿ ಸುಳಿಸಿ ಮಣ್ಣಲ್ಲಿ ಮೋಡಗಳ ಬಣ್ಣ ಕಲೆಸಿ ಮಾತ ಮರ್ಜಿಗೆ...

ಕಂಡದ್ದು

ಯಾರಿವಳೀ ದೀಪಿಕಾ ಕವಿಕನಸಿಗೆ ಕಣ್ಣು ಬಂತೊ, ಉಸಿರಾಡಿತೊ ರೂಪಕ! ಬಿಸಿಯೂಡಿಸಿ ಹಸಿರಾಡಿಸಿ ಕನವರಿಕೆಯ ನಾಡಿಗೆ ಹಳಿಯನೆಳೆದ ಹದಿನಾರರ ಬಿರಿವ ಹೂವ ಮಾಲಿಕಾ ದೀಪಿಕಾ ದೀಪಿಕಾ ಕನಕಾಂಬರ ಬೆಳೆಕಹೊದ್ದ ಮುಗಿವ ಹಗಲ ತುದಿಗೆ ಮೊಲ್ಲೆ ಮಾಲೆಯಾಗಿ...

ದೀಪಿಕಾ ಸೃಷ್ಟಿ

ದೀಪಿಕಾ ನಿನ್ನ ನಗೆಯೆಂದರೆ ನಿನ್ನ ಬಗೆಯಂಥದು; ನಿನ್ನ ಬಗೆಯೆಂದರೆ ಮಲ್ಲಿಗೆ ಧಗೆಯಂಥದು; ಮೈಯನ್ನ ಕೆರಳಿಸಿ ಕೊರಗಿಸಿ ಒಳಗಿನ ಕಣ್ಣನ್ನು ತೆರೆಸುವ ನಿನ್ನ ಚೆಲುವು ನವಿಲುಗರಿಯ ಪತ್ರದಂಥದು, ಕತ್ತಲೆ ಬಾನಿನ ಚುಕ್ಕಿಯ ಛತ್ರಿಯಂಥದು ನನ್ನೊಳಗಿನ ಪದರ...

ಅದೇ ಕಥೆ

ಆಡುಗೂಲಜ್ಜಿ ಕಣ್ಣುಮುಚ್ಚಿ ಹೇಳುತ್ತಾಳೆ ಕಥೆಯ, ನೇಯುತ್ತಾಳೆ ರಾಗವಾಗಿ ವರ್ತಮಾನ ವ್ಯಥೆಯಾಗುವ ಸತ್ತ ಸುಖದ ಸ್ಮೃತಿಯ. ಕಣ್ಣಿಂದ ದಳದಳ ನೀರು ಹೆಪ್ಪುಮುಪ್ಪಿನ ಸುಕ್ಕುತೆರೆ ಸರಿಸಿ ಮುಖದಲ್ಲಿ ಏಳುವುವು ನೂರು ಜೇನುಗೂಡನು ಹಿಂಡಿಬಂದ ಅನುಭವ ಸಾಲು: "ಅಯ್ಯೋ...
cheap jordans|wholesale air max|wholesale jordans|wholesale jewelry|wholesale jerseys