ಬಾಗಿದೆ ಕೊಳದೊಳಗೆ- ಕಮಲಗಳು ಚಂದ್ರ, ನಕ್ಷತ್ರ ಗಣಗಳು ತುತ್ತ ತುದಿಯೇರಿ ಬೆಟ್ಟ ಬಾಗಿದೆ- ಮನೆಗಳು, ಮರಗಳು ಮಕ್ಕಳ ಆಟಿಕೆಯ ಹಾಗೆ ಅಪರೂಪದ ಕಲಾವಿದ ಬಿಡಿಸಿದ ಚಿತ್ರದ ಹಾಗೆ ಹೆಮ್ಮರಗಳಡಿ ಬಾಗಿದೆ ಪ್ರೇಮ ಪುಷ್ಪಗಳು ಪಕ್ವವಾದ...
ಆ ದೇವರೇ ವರವಿತ್ತಂತೆ ಆ ಊರಿಗೆ ಅದೇ ದೊಡ್ಡ ಮರ ನಾಲ್ಕು ಹೆಗಲುಗಳು, ನೂರು ಕೈಗಳು ಸಾವಿರ ಸಾವಿರ ಬೆರಳುಗಳು ಸೂರ್ಯ ಚಂದ್ರ ನಕ್ಷತ್ರ ಗಣಗಳು ಬಿಡುಗಣ್ಣಾಗಿ ನೋಡುವಷ್ಟು ಅಷ್ಟು ದೊಡ್ಡ ಮರ ಬೆಳಕು-ಮಳೆ-ಮಣ್ಣಿನ...
ಗಕ್ಕೆಂದು ನಿಂತೆ ಒಂದು ಚಣ ಶುರುವಾಯಿತು ಅನುಮಾನ ಅವತ್ತು ಇಡೀ ದಿನ ಬೆಕ್ಕಿನದೇ ಧ್ಯಾನ ಮೀನು ಮಾರುವವಳಿಗೆ ಮಾಯೆ ಕವಿದಿರಲು ಒಣ ಮೀನಿಗೂ ಜೀವ ಬಂದಿರಲು ಘಮ ಘಮಿಸಿ ಅದು ಲೋಕವನೆ ಸೆಳೆದಿರಲು ಪರಿಮಳದ...
ಗಾಂಧಿ ಹುಟ್ಟಿದ್ದು ನೆಟಾಲಿನ ರಾಜಧಾನಿಯಾದ ಮೆರಿಟ್ಸ್ ಬರ್ಗ್‍ನಲ್ಲಿ ರೈಲ್ವೆ ಪ್ಲಾಟ್ ಫಾರಂನಲ್ಲಿ ಚೆಲ್ಲಾಪಿಲ್ಲಿಯಾದ ಹಾಸಿಗೆ, ಪೆಟ್ಟಿಗೆ, ಕಾಗದಗಳ ನಡುವೆ ಅಪರಾತ್ರಿ ಹೊರಗೆ ಅಸಾಧ್ಯ ಚಳಿ ಒಳಗೆ ಜ್ವಾಲಾಮುಖಿ ನೋವಿನಿಂದ ಒದ್ದೆಯಾದ ಕಣ್ಣುಗಳು ಮೈತುಂಬಾ ಅವಮಾನದ...
ಇಷ್ಟು ದೊಡ್ಡ ಮನೆ ಯಾರು ಸಂಭಾಳಿಸುವರು? ಇಷ್ಟು ಚಂದದ ತೋಟ ಯಾರು ನೋಡಿಕೊಳ್ಳುವವರು? ಒಡವೆ ವಸ್ತು ಸೀರೆ ಯಾರುಟ್ಟು ನಲಿವರು? ಆಶೆಯಿಂದ ಹೊಂದಿರುವ ಚಿಕ್ಕಪುಟ್ಟ ವಸ್ತುಗಳು ಅಕ್ಕರೆಯ ಗಂಡ ಮುದ್ದಾದ ಮಕ್ಕಳು ಸ್ನೇಹಿತರು-ಸಂಬಂಧಿಗಳು ಸುತ್ತಿಕೊಂಡಿವೆ...
ಎಲ್ಲರೂ ಬೆಚ್ಚಗೆ ಹೊದ್ದು ಮಲಗಿರಲು ಇವಳು ಎದ್ದು ಜಿಮ್‌ನಲ್ಲಿ ಬೆವರು ಸುರಿಸುತ್ತಾ ಕಸರತ್ತು ಮಾಡುವಳು ಎಲ್ಲರೂ ಹಾಲು ತುಪ್ಪದಲ್ಲಿ ಕೈತೊಳೆದರೆ- ಇವಳು ಹಣ್ಣು-ತರಕಾರಿ ಒಣಗಿದ ಚಪಾತಿಯ ಮೇಲೆಯೇ ಜೀವಿಸುವಳು ಎದುರಿಗೆ ಯಾರೂ ಇಲ್ಲ ಆದರೂ...
೧ ಅದೇ ಆ ಶಿವನ ವೇಷಧಾರಿ ನಾನಿದ್ದ ಬಸ್ಸಿನಲ್ಲಿಯೇ ಇದ್ದ ನನ್ನೊಂದಿಗೆ ಬಸ್ಸಿನಿಂದಿಳಿದ ತೇಗದ ಮರದ ಹಾಗೆ ಉದ್ದಕೆ ಸಪೂರ ಮೋಡದ ಮೈ ಬಣ್ಣ, ಮಿಂಚಿನ ನಗು ಮುಡಿಗೆ ತಗಡಿನ ಚಂದ್ರನನು ಮುಡಿದಿದ್ದ ತೋಳಿಗೆ...
ಕಪ್ಪಿಟ್ಟ ಮುಖ ಮಿಂಚು ಕಣ್ಣುಗಳು ಬೆಂಕಿ-ಬಿಸಿಯುಸಿರು ಗುಡುಗು-ಸಿಡಿಲು ಮೃದು ವಚನಗಳು! ಅವಳು ಕಣ್ಣು ನೆಟ್ಟಲೆಲ್ಲಾ ಕಂದಕಗಳು ತೋಳುಗಳು ತಾಕಿ ನೆಲಕ್ಕುರುಳಿದವು ಹೆಮ್ಮರಗಳು ಕಾಲಾಡಿದಲ್ಲೆಲ್ಲಾ ಚಿಮ್ಮಿದವು ಬಿಸಿ ನೀರ ಬುಗ್ಗೆಗಳು ತಲ್ಲಣಿಸಿತು ಸಕಲ ಜೀವ-ಜಗತ್ತು ಕೋಪವೋ......