ಬಾಗು

ಬಾಗಿದೆ ಕೊಳದೊಳಗೆ-
ಕಮಲಗಳು
ಚಂದ್ರ, ನಕ್ಷತ್ರ ಗಣಗಳು

ತುತ್ತ ತುದಿಯೇರಿ ಬೆಟ್ಟ
ಬಾಗಿದೆ-
ಮನೆಗಳು, ಮರಗಳು
ಮಕ್ಕಳ ಆಟಿಕೆಯ ಹಾಗೆ
ಅಪರೂಪದ ಕಲಾವಿದ
ಬಿಡಿಸಿದ ಚಿತ್ರದ ಹಾಗೆ

ಹೆಮ್ಮರಗಳಡಿ ಬಾಗಿದೆ
ಪ್ರೇಮ ಪುಷ್ಪಗಳು
ಪಕ್ವವಾದ ಹಣ್ಣುಗಳು

ಬಾಗಿದೆ-
ಕಲ್ಲು ದೇವರ ಮುಂದೆ
ಬೆಳಗುವ ದೀಪಗಳಡಿ
ಅಹಂಕಾರವ ಸುಟ್ಟು
ಬಾಗುವುದ ಭಾಗ್ಯವೆನಿಸಿ
ಬಾಗಿ ಬಾಗಿ
ಬಾಗಿದುದನೆ ಅನವರತ

ಧೇನಿಸಿ ತಲೆ ಎತ್ತಿದರೆ
ಮೃತ್ಯು!
ಸರಕ್ಕನೆ ಬಾಗಿದೆ
ನಿಜವಾಗಿಯೂ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮಣ – ೨
Next post ಮಂತ್ರಾಲಯ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…