Home / ಜಾತ್ರೆಯಲ್ಲಿ ಶಿವ

Browsing Tag: ಜಾತ್ರೆಯಲ್ಲಿ ಶಿವ

ಕನಕ ಕುರಿ ಕಾಯುತ್ತಿದ್ದ ಕೃಷ್ಣ ದನ ಮೇಯಿಸುತ್ತಿದ್ದ ಪರಿಚಯವಾಯಿತು ಹೆಚ್ಚೇನಿಲ್ಲ… ಕನಕ ರೊಟ್ಟಿ ಒಯ್ಯುತ್ತಿದ್ದ ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ… ಕನಕನಿಗೆ ಹಾಡು ಕಟ್ಟುವ ಹುಚ್ಚು ಕೃಷ್ಣನಿಗೆ ಕೊಳ...

ಸೋನೆ ಮಳೆಯ ಸಂಜೆ… ಒಲೆಯ ಮೇಲೆ ಚಹಾ ಕುದಿಯುತ್ತಾ ಇತ್ತು ದೀಪ ಹಚ್ಚಿ, ಧೂಪ ಹಾಕಿ, ದೇವರನ್ನು ಬೆಚ್ಚಗಾಗಿಸಿ ಸ್ವೆಟರ್ ಏರಿಸಿ ಹಾಳೂರು.. ಎಂದು ಇಲ್ಲದ ಕರೆಂಟಿಗೆ ಬಾಯ್ತುಂಬ ಬಯ್ದು ದೀಪ ಧಾರಿಣಿಯಾದೆ, ಗಾಳಿ ಬಾಗಿಲ ತಳ್ಳಿತು ಎದುರಲ್ಲಿ ತೊಯ...

ಯಾವಾಗ ನೋಡಿದ್ರೂ ಜರಿಶಾಲು, ರೇಷ್ಮೆ ಪೇಟ ದೀಪಾ-ಧೂಪಾ ಹೂವು-ಹಾರ ಜೊತೆಗೆ ನಾಯಕರ ನಗೂ ಮುಖ ಹೊತ್ಕೊಂಡು ಬರ್‍ತಾ ಇದ್ದ ಪೇಪರ್‌ನಾಗೆ ನಿನ್ನ ಸುದ್ದಿನೂ ಓದ್ದೇ ಕಣಪ್ಪಾ… ದಿಕ್ಕಿಲ್ಲದಂಗೆ ರಾಶಿ ಬಿದ್ದಿದ್ದ ಟೊಮೊಟೊ, ಆಲೂಗಡ್ಡೆ, ಮೆಕ್ಕೆಜೋಳದ...

ನವಿರಾದ ಭಾವದಲೆಗಳ ಸೀಳುತ್ತಾ ಮುನ್ನುಗ್ಗುತ್ತಿತ್ತು ನವ್ಯದ ಹಡಗು ಆಹಾ! ಏನು ಬಿಂಕ, ಬೆಡಗು, ಬಿನ್ನಾಣ ಕೋಡುಗಲ್ಲಿನ ಮೇಲೆ ಕಡಲ ಹಕ್ಕಿಗಳಂತೆ ಕೂತು ನೋಡಿದೆವು. ಕಾರಿರುಳು- ‘ಕರಿಯ ನಭದ ಕಣ್ಗಳಂತೆ ಅಭಯದೊಂದು ರೂಹಿನಂತೆ ತೇಲಿಬಿಟ್ಟ ದೀಪದಂತೆ’ ನೂರ...

ನಮಿಸುವೆನು ತಾಯೆ ನಿನ್ನಡಿಗೆ ಮುನ್ನಡೆಸು ನನ್ನೀ ಜಗದೊಳಗೆ ಬೆಟ್ಟವಾಗಿಸು ಎಂದು ನಾನು ಬೇಡುವುದಿಲ್ಲ ಚಿಟ್ಟೆಯಾಗಿಸು ನನ್ನ ನಿನ್ನ ತೋಟದೊಳಗೆ ಚುಕ್ಕಿಯಾಗಿಸು ಎಂದು ನಾನು ಬೇಡುವುದಿಲ್ಲ ಹಕ್ಕಿಯಾಗಿಸು ನನ್ನ ಹಾರಿಕೊಂಡಿರುವೆ ನೀಲ ಗಗನದೊಳಗೆ ಸೂರ್ಯ...

ಕೊಳದೊಳಗಣ ಚಂದ್ರನನು ಆನೆ ಮೆಟ್ಟಿತು ನರಕದ ಬಾಗಿಲನು ತಾನೆ ತಟ್ಟಿತು ಬ ಒಳಗೆ, ನನ್ನೊಳಗೆ ಎಂದಿತು ಕೊಳದ ಕೆಸರು ನೇವರಿಸಿತು, ಆವರಿಸಿತು ಅಡಗಿತು ಆನೆಯ ಉಸಿರು ಆನೆ ಘೀಳಿಟ್ಟಿತು ದಶದಿಕ್ಕಿಗೂ ಮೊರೆಯಿಟ್ಟಿತು ಕರುಣೆಯಿಂದಲೇ ಇದಿರುಗೊಂಡವು ಕೇಡಿಗನನ...

ಮತ್ತೆ ಹುಟ್ಟವುದಾದರೆ ಈ ನೆಲವೇ ಇರಲಿ ಹುಟ್ಟಿದ ಮೇಲೆನ್ನ ನುಡಿಯು ಕನ್ನಡವೇ ಆಗಿರಲಿ ತುಂಗೆಯಲಿ ನಾನಿರಲು ಗಂಗೆಯೂ ಬರಲಿ ಕೃಷ್ಣ-ಗೋದಾವರಿ ಗೆಳತಿಯರು ಸಿಗಲಿ ಹಿಮಾಲಯವು ಮುಡಿಯಲ್ಲಿ ಸಹ್ಯಾದ್ರಿಯು ಅಡಿಯಲ್ಲಿ ಅಲ್ಲಲ್ಲಿಯೇ ಇರಲಿ ಕಲ್ಕತ್ತೆಯ ಕಾಳಿ ಶ...

ನಿನ್ನೊಂದಿಗೆ ಮಾತನಾಡಲಾರೆ… ಮುತ್ತು, ಸರ, ನತ್ತು, ವಾಲೆ, ಝುಮುಕಿಯೊಡನೆ ಮಾತಾಡುವೆ ಸೌದೆ, ಇದ್ದಿಲು, ಬೆಂಕಿ, ನೀರು, ಕೊಡ, ರಾಟೆಯೊಡನೆ ಮಾತಾಡುವೆ ಬೇಯಿಸಿದ ಹಿಟ್ಟು-ರೊಟ್ಟಿ ದೋಸೆ-ಪಲ್ಯದ ಜೊತೆ ಮಾತಾಡುವೆ ನಿನ್ನೊಂದಿಗೆ ಮಾತನಾಡಲಾರೆ ಜಾ...

ಮುಂದೆ ಸಾಗುವ ಮುನ್ನ ಹಿಂದೆ ನೋಡಬಾರದೆ ಒಮ್ಮೆ ನದಿಯಲ್ಲವೇ ನಾನು ತುದಿಯಲ್ಲಿರುವೆ ನೀನು ನಿಲ್ಲು ನಿಲ್ಲು ನೀ ನನ್ನ ಮಗಳೆ… ಹಿಟ್ಟು-ರೊಟ್ಟಿಯ ಸುಡುತ ಹರಕೆ-ಮುಡಿಪುಗಳನಿಡುತ ತಿಳಿದ ಹಾಡುಗಳ ಹಾಡಿ ನೂರು ದೇವರ ಕಾಡಿ ನಿನ್ನ ಪಡೆದೆ ಉಟ್ಟ ಸೀರ...

ಗಾಳಿ ತಂದಿತು ದೀಪವಾರಿದ ಸುದ್ದಿ ಒಂದು ಚಣ ಮೌನ ನೋಡು ಎಂದಿತು ಹೃದಯ ಬೇಡವೆಂದಿತು ಮನಸು ನಿಮ್ಮ ಚಿತೆಗೇರಿಸಬೇಕೆಂದು ಕೊಂಡಿದ್ದ ಎರಡು ನಸು ಹಳದಿ ಗುಲಾಬಿ ಮೊಗ್ಗುಗಳು ಇನ್ನೂ ಹಾಗೆಯೇ ಇವೆ ನಳನಳಿಸುತ್ತಿವೆ ಹೂದಾನಿಯಲ್ಲಿ ಸದ್ಯ ಬೂದಿಯಾಗಲಿಲ್ಲ ಹೂವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...