ಇಷ್ಟು ದೊಡ್ಡ ಮನೆ
ಯಾರು ಸಂಭಾಳಿಸುವರು?

ಇಷ್ಟು ಚಂದದ ತೋಟ
ಯಾರು ನೋಡಿಕೊಳ್ಳುವವರು?

ಒಡವೆ ವಸ್ತು ಸೀರೆ
ಯಾರುಟ್ಟು ನಲಿವರು?

ಆಶೆಯಿಂದ ಹೊಂದಿರುವ
ಚಿಕ್ಕಪುಟ್ಟ ವಸ್ತುಗಳು

ಅಕ್ಕರೆಯ ಗಂಡ
ಮುದ್ದಾದ ಮಕ್ಕಳು

ಸ್ನೇಹಿತರು-ಸಂಬಂಧಿಗಳು
ಸುತ್ತಿಕೊಂಡಿವೆ ಸರಪಳಿಗಳು

ಸಮಯವಿದೆ ಇನ್ನೂ
ನಾಟಕ ಮುಗಿಯಲು

ಬಯಸುವುದು ಜೀವ
ನಿರಂತರ ನಟಿಸಲು
*****