ದುಃಖ ಸಮುದ್ರವು
ಯೋಜನಗಳಾಚೆ
ಕೇಳುವುದರ ಮೊರೆತ

ಸಂತೋಷದ ದೊಡ್ಡ
ಹಡಗುಗಳನ್ನು
ಅದು ಮುಳುಗಿಸುವುದು

ನೆಮ್ಮದಿಯ
ಹುಟ್ಟಡಗಿಸುವುದು

ನಿಷ್ಪಾಪಿ ಹುಲ್ಲು ಕಡ್ಡಿ
ಮಾತ್ರವೇ
ನಿರಾಂತಕವಾಗಿ
ತೇಲಿ ದಡ ಸೇರುವುದು.
*****