ಬಿಸಿಲು ಕಂಡಿತು ಹಾಸಿಗೆ
ಹಳೆಯ ದಿಂಬಿಗೆ ಹೊಸಾ ಹೊದಿಕೆ

ಅತ್ತೆ ಮಾವನ ಪುಟಗಳು
ಲಕಲಕ ಹೊಳೆದು
ಹೂವ ಮುಡಿದವು

ದೇವರಿಗೆ ದೀಪ
ಹೊಸಿಲಿಗೆ ಕುಂಕುಮ
ಬಾಗಿಲಿಗೆ ನೀರು

ಚಿತ್ರಾನ್ನ, ಕೋಸಂಬರಿ
ವಡೆ, ಪಾಯಸದಲಿ
ಕಲ್ಲು ಸಿಗದಿರಲಿ
ಎಂದು ಪ್ರಾರ್ಥನೆ!

ಮಡಿಲು ತುಂಬಿದ
ಸೀರೆ-ಕುಪ್ಪಸ
ಇಷ್ಟವಾಯಿತೋ…
ಇಲ್ಲವೋ ಅನುಮಾನ

ಅನಿಸುವುದು ಹತ್ತಿರ
ಹತ್ತಿರ ಹೋಗಬೇಕೆಂದು
ಏನು ಮಾಡಲಿ?
ಹಾಳು ಕಂದಕ
ಹಿರಿದಾಗುವುದು.
*****