ಗಾರುಡಿಗ

ಇದು ಮಂತ್ರ; ಅರ್‍ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ; ತಾನೆ ತಾನೆ ಸಮರ್‍ಥಛಂದ; ದೃಗ್ಬಂಧ-ದಿ- ಗ್ಬಂಧ; ಪ್ರಾಣದ ಕೆಚ್ಚು ಕೆತ್ತಿ ರಚಿಸಿದೆ; ಉಸಿರ ಹೆದೆಗೆ ಹೂಡಿದ ಗರಿಯು ಗುರಿಯ ನಿರಿಯಿಟ್ಟು ಬರು- ತಿದೆ ತೂರಿ ಲೀಲೆಯಲನಾಯಾಸ....

ಶ್ರೀನಾರಾಯಣ

ಸ್ಫೂರ್‍ತಿಯ ಮೂರ್‍ತಿಗೊಂಡಂತೆ ಕಂಡವು ಆನೆ ಕುದುರೆ ಹಾ- ವುಗೆ, ನಿನ್ನ ಹೊಸ್ತಿಲವ ದಾಟಿ ಇಲ್ಲಡಿಯಿಟ್ಟೆ; ಬಿಜಯ ಮಾಡಿಸಿದೆ ವೈಭವದಿ, ದಿಗ್ವಿಜಯ ಮಾ- ಡುವೆ, ಕುರುಹಗಳ ತೋರಿ ಹೇಳುತಿಹೆಯಾ, ನಲ್ಲ! ನನಸೆಂದು ತೋರಿ ಹಾರೈಸಿದುದು ಕನಸಾಗೆ,...

ಚಿದಂಬರ

ಕಲವಧುವಿನೊಲು, ಅಡಕದಲಿ ನಗುವ ಕೌತುಕ-ಕು- ತೂಹಲದ ಕಣಿಯ ಕಣ್ಣಲಿ ತೆರೆದು, ’ಮುಗಿಲ ನೀ- ಲಿಯ ಕುಡಿದು ಬಿಳಿದು ಮಾಡುವೆ’ನೆಂದು ಹಸಿದ ಹ- ಳ್ಳಿಯ ಹುಡುಗ! ಗುರುವೆನುವ ಗರುವಾಯಿಯಲಿ ನಿಂತಿ- ರಲು ಇದಿರುಗೊಂಡೆ ನನ್ನನು ನೀನು,...

ಸತ್ಯಸಂಕಲ್ಪ

ಜನ್ಮ ಜನ್ಮಾಂತರದ ಸತ್ಯ ಸಂಕಲ್ಪವೇ, ಫಲಹೊಂದು ಕಾಲ ಬಂದಾಗ. ಒಗರಿಳೆದು ಹುಳಿ ಹೋಗಿ, ಸವಿ ಹವಣುಗೋಳುತಿರೆ, ಬಣ್ಣ ಹೊಂಬಣ್ಣ- ಕೇರುತಿರೆ, ಬಳುಕಿ ಗಾಳಿಗೆ, ಬೆಂದು ಬಿಸಿಲಿನಲಿ, ನಾನು ಕಾಯುವೆ; ಹಸಿವ ಎಸರೇರಿ ಕುದಿಬಂದು ಉಕ್ಕಿ...

ಸುಹೃದ

ಎಲೆ ಸುಹೃದ, ಸರ್‍ವ ಭೂತಾಂತರಸ್ಥನೆ, ನರನ ನಾರಾಯಣನೆ, ನಿನ್ನ ಮೈತ್ರಿಯ ಉಗಾಭೋಗ ಉಸಿರು ಈ ಹಕ್ಕಿಯಲಿ; ತುಂಬು ಜೀವವ ದೇವ. ಯುಗಜುಗದ ಪರಿಪಾಕದಿಂದ ಬರಲಿರುವಂಥ ಸ್ನೇಹಸಾರದ ಹದವನರಿವೆವೇ? ಕ್ಷಣಜೀವಿ- ಗಳು ನಾವು, ಕಣ್ಣ ಆಚೆಗೆ...

ಒಡನುಡಿ

ದುಃಸಾಧ್ಯಸಂಭಾವ್ಯವೆಂಬ ಸೊಲ್ಲಿನ ಗುಲ್ಲು ಗುಡುಗಾಡುತಿದೆ. ಕನ್ನಡದ ಕನ್ನಡಿಯು ಒಡೆದು ಬೆಸೆಯ ಬರದಂತೆ ದೆಸೆದೆಸೆಗೆ ಬಿದ್ದಿದೆ. ಹಿಡಿದು ಕಟ್ಟಬಲ್ಲಾ ಕೈಯೆ ಕಾಣದಿದೆ. ಒಡಹುಲ್ಲು ಬೆಳೆಯೆ, ಹೂದೋಟ ಹುದುಗಿದೆ ನೆಲದೊಳೆಲ್ಲೆಲ್ಲು. ದನದ ಜಂಗುಳಿಯಂತೆ ಹಿಂಡಾಗಿ, ಮನ ತಡೆದು...

ಅಗಸ್ತ್ಯ

ವಿಂಧ್ಯದ ಅನುಲ್ಲಂಘ್ಯ ಮಸ್ತಕವ ಮೆಟ್ಟಿ, ದ- ಕ್ಷಿಣದ ದಾರಿಯ ತೆರೆದು ತೋರಿದಿರಿ; ಉತ್ತರಕೆ ಉತ್ತರೋತ್ತರವಾಯ್ತು. ದಕ್ಷಿಣದ ಏಳ್ತರಕೆ ಎಡೆಯಾಯ್ತು. ನಿಮ್ಮ ಪಾವನ ಪಾದ ಮೆಟ್ಟಿದ- ಲ್ಲಲ್ಲಿ ತೀರ್ಥಕ್ಷೇತ್ರ. ಮುಕ್ತಿ ಗಂಗೆಯು ಇಳಿದ ಭಕ್ತಿ ಭೂಮಿಯು...

ಕೃತಿ

ನಿರ್‍ದೋಷಕೃತಿಯ ನಿರ್‍ಮಿಸುವೆನೆನ್ನುವ ಪಂಥ- ಗಾರ! ಹಂಬಲವೇನೊ ಹಿರಿದು; ಗುಣದೋಷ ಚ- ರ್‍ಚೆಯಲಿ ಪಳಗಿದ ಬಗೆಯ ನುರಿತ ನಯದಲಿ ಬಲಿತ ಕೈ ಚಳಕದಲಿ ಹಿಳಿವೆ ರಸವ, ಜುಬ್ಬರದ ಜಂ- ಜಡ ಸವರಿ; ಬಯಕೆ ಬರುವಾ ಬಾಲ...

ರಸಿಕ:-ವೇದಾಂತಿಗೆ

ನಗೆಯಾಡದಿರು ನನ್ನ ನಲುಮೆ ಒಲುಮೆಯ ಕುರಿತು. ಅರಿಯೆನೇ ತುಂಬು ಮೈ ಮಾಂಸಪಿಂಡದ ಡಂಭ- ವೆಂಬುದನು? ನಾಣು ನೆತ್ತರದಾಟ, ಮಧು ಚುಂಬ- ನವು ಕುನ್ನಿ ಚಿನ್ನಾಟ, ಸಂತತಿಯ ತಂತು ಋತು- ಮಾನಗಳ ಮಾಟ; ಅಂತಃಕರಣ ಹುಲು...

ದುರ್‍ಲಭಯುಕ್ತಿ

"ತಿಣಕದಿರು ಸುಖದ ಸಂಪಾದನೆಗೆ -ಒಂದಿನಿಸು ನಗೆ, ಇನಿಸು ದುಃಖ ವಿಸ್ಮೃತಿ, ಇನಿಸು ಲೋಕಾನು- ಭವವು, ರಸಿಕತೆ ಇನಿಸು, ತಾಳ್ಮೆಯಿರೆ ಇನಿಸಾನು; ಹಲಸು ಕಾತಂತೆ ರಸಭಾವ ರೋಮಾಂಚಿತಸು. ಹಸು ಕರುವಿನೆಡೆಗೆ ಕೆಚ್ಚಲುದೊರೆದು ಬರುವಂತೆ, ಅಂಬೆಗರೆಯಲು ಕರುಳು,...