Home / Hanneradumath

Browsing Tag: Hanneradumath

[ಸೋಬಾನ ಪದ] ಸೋ ಅನ್ನೆ ಸೋವಣ್ಣೆ ಸೋಮಶೇಖರ ಕಣ್ಣೆ ಸೋಮರಾಯನ ಹೆಣ್ಣೆ ಸೋಬಾನ ಸೋ ||ಸೋಽಽ ||ಪಲ್ಲ|| ಗಂಡುಳ್ಳ ಗರತೇರು ಗಿಣಿಗಡಕ ಜೋಗ್ತೇರು ನುಸಿಗಡಕ ನಾಗ್ತೇರು ಕೂಡ್ಯಾರ ಸೋ ಪಿರಿಪಿಸ್ಸ್ ಮಾತ್ನ್ಯಾಗ ಮಾತೀನ ತೂತ್ನ್ಯಾಗ ಪುಸ್ಸಂತ ಪೋಣ್ಸ್ಯಾರ ಪಿಸ...

[ಮಕ್ಕಳ ಹಾಡು] ಅಜ್ಜಯ್ಯ ಗುಜ್ಜಯ್ಯ ಮಜ್ಜೀಗಿ ಕೊಡತೇನ ದಟ್ಟಿಯ ಪುಟ್ಟಿಯ ಕರೆದೊಯ್ಯ ದೊಡ್ಡಜ್ಜ ದೊಡ್ಡಯ್ಯ ತಂಬಾಕು ಕೊಡತೇನ ಪರಕಾರ್‍ದ ಮಮ್ಮಗಳ ಕರೆದೊಯ್ಯ ||೧|| ಬೂರಲ ಮರದಾಗ ಜೋರಾಗಿ ಕರದೇನ ಬುರ್‍ಲಜ್ಜ ಬುರ್ರಂತ ಹಾರ್‍ಹೋದೆ ಗುಡದಾಗ ಕೊಳ್ಳಾಗ ಕ...

(ಮಕ್ಕಳ ಗೀತೆ) ತಾಯಿ- ಇಡ್ಲೀಯ ಗುಂಡಣ್ಣಾ ಚಟ್ನೀಯ ಚಲುವಣ್ಣಾ ಹೋಗಣ್ಣಾ ಸುಬ್ಬಣ್ಣಾ ಸಾಲೀಗೆ ||ಪಲ್ಲ|| ಮಗ- ಇಡ್ಲೀಯ ನಾನೊಲ್ಲೆ ಚಟ್ನೀಯ ಒಲ್ಲೊಲೆ ಮಾಸ್ತರು ಬೈಬೈ ಬೈಯ್ತಾನಾ ಆ ಸಾಲಿ ಯಾ ಸಾಲಿ ಹಳಸೀದ ಮಸಾಲಿ ಮಾಸ್ತರು ಬಡಿಬಡಿ ಬಡಿತಾನಾ ||೧|| ತಾ...

ಗಣಪತಿ ಬಂದಾನೋ ಚೌತಿ ಗಣಪಣ್ಣಾ ವರ್ಷಾ ವರ್ಷಾ ಹರ್ಷಾ ಹರ್ಷಾ ತಂದೆಣ್ಣಾ ||ಪಲ್ಲ|| ಮನಿಯಾ ಜಗಲಿ ಊರಾ ಬಗಲಿ ಮೆರೆದೆಣ್ಣಾ ಎದಿಯಾ ಬಾಗ್ಲಾ ದಡಾ ದಡಾ ತೆಗೆದೆಣ್ಣಾ ಚುಂವ್‌ಚುಂವ್ ಚುಂವ್‌ಚುಂವ್ ಇಲಿಯಾ ಮೇಲೆ ಕುಂತೆಣ್ಣಾ ಮವ್‌ಮೆವ್ ಮೆವ್‌ಮೆವ್ ಬೆಕ್ಕ...

ಪಂಚ್ಮಿ ಬಂದೇತೆ ಪಂಚೇತ್ಯಾಗೇತೆ ಪುಂಗಿ ತಂಗಿಲ್ಲಾ ||ಪಲ್ಲ|| ಮೋಸಂಬ್ವನದಾಕಿ ತೆಂಗಿನ್ ಬನದಾಕಿ ಇದ್ದಿದ್ಹಾಂಗ ಇಲ್ದಂಗಾದಿಯಾ ಗಿಣಿಮೂಗು ಚಲುವಾಕಿ ಹೊಳಿತುಂ ಜಡಿಯಾಕಿ ಅಗಸಿ ಆಚಿ ಚೊಗಚಿ ಆದಿಯಾ ||೧|| ಕಡೆಕಡೆ ಪಂಚ್ಮ್ಯಾಗಿ ಕಲ್ಲಂಗ್ಡಣ್ಣಾಗಿ ಗಲ್‍...

ಗಿಡಿಗಿಡಿ ಗಿಡಿಗಿಡಿ ಗಿಡಿಗೆಂವ್ ಬುಡುಬುಡು ಬುಡುಬುಡು ಬುಡುಗೆಂವ್ ಬುಡುಬುಡ್ಕಿ ನುಡಿಯೊಂದ ಕೇಳಾರಿ ||ಪಲ್ಲ|| ಕಾಲೊಂದ ಬಂದೇತಿ ಗುರುಕಾಲ ಶುಭಕಾಲ ಮುಂದೀನ ಇಸವೀಯು ಬಲುಜೋರ ನಿಮದೆಲ್ಲ ಕಾರ್‍ಭಾರ ಮನಿಮುಂದ ದರಭಾರ ಮನಿಯಾಗ ಸರಕಾರ ಜೋರ್‍ದಾರ ||೧|...

ಬಂತಾವ್ವಾ ಬಂತಾವ್ವಾ ಬಂತವ್ವಾ ಶ್ರಾವಣಾ ಚಂದೇನ ಚಾರೇನ ಸಾಮೇರ ಚರಣಾ ||ಪಲ್ಲ|| ಮಠತುಂಬ ರಂಗೋಲಿ ಮುತೈದಿ ಬಾಲೇರು ಪಡಿಹಿಗ್ಗು ಪಂಚಮಿ ಮಾಡ್ಯಾರೆ ತೋರಮುತ್ತಿನ ಕಾಂತಿ ಮುತ್ತು ಮಾಣಿಕ ದಾಂತಿ ಕಾಶೀಯ ಪೀತಾಂಬ್ರ ಉಟ್ಟಾರೆ ||೧|| ಪರಪಂಚ ಪಂಚೇತಿ ಫಜೀ...

ನೀನು ದೇವ ನಾನು ಭಕ್ತ ಎಂದರಾರು ಹುಚ್ಚರು ನಾನೆ ದೇವ ನೀನೆ ಭಕ್ತ ನೆಂದು ಯಾರು ತಿಳಿವರು ||೧|| ವರ್ಷ ಕೋಟಿ ವಿರಸ ಕೋಟಿ ಯಲ್ಲಿ ಹಲ್ಲಿ ಯಾದೆನೆ ಬರಿದು ಬರಿದು ಬಚ್ಚ ಬರಿದು ಬರಿಯ ಬಯಲ ಉಂಡೆನೆ ||೨|| ನನ್ನ ಕಂಠ ನನ್ನ ಕಾವ್ಯ ನನ್ನ ಕಲ್ಪ ಕನಸು ನೀ...

ಬಿಡಬೇಡ ಬಾಲಿ ಬಿಡಬೇಡ ಹಿಡಿಬೇಡ ಸಾಲಿ ಹಿಡಿಬೇಡ ||ಪಲ್ಲ|| ಮಾಸ್ತರಾ ಮಸ್ತಿಲ್ಲಾ ಸಾಲೀಯು ಸಿಸ್ತಿಲ್ಲಾ ನನಕೂಟ ಸುಸ್ತಿಲ್ಲ ಬಾಬಾರ ಪುಸ್ತಾಕ ಪ್ಯಾಟ್ಯಾಗ ಮಾರಾಕ ಬಂದಿಲ್ಲ ಕೊಳ್ಳಾಕ ರೊಕ್ಕಿಲ್ಲ ನೀ ಬಾರ ||೧|| ಕಲಸೋರು ಕೌಹಕ್ಕಿ ಕಲಿಯೋರು ಕೂಹಕ್ಕಿ...

ವಿಲಯ ದಿಂದ ಮಲಯ ಭಾನು ಇಗೋ ಇಲ್ಲಿ ಮೂಡಲಿ ಪ್ರಲಯ ಮೇಘ ಇಂಗಿ ತಂಗಿ ಹೂವು ಹಣ್ಣು ಸುರಿಯಲಿ ||೧|| ಎಂಥ ಗಾಳಿ ಕುತ್ತು ಕೇಳಿ ಗರ್ರ ಗರ್ರ ತಿರುಗಿತು ಮನೆಯ ಗುಡಿಯ ಹುಡಿಯ ಮಾಡಿ ಚಿಂದಿ ಚೂರು ಮಾಡಿತು ||೨|| ಬರಲಿ ಶಾಂತ ಅವಲ ವಿಮಲ ರಾಜ ಹಂಸ ಜಲವನಂ ಮ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...