ನೀನು ದೇವ ನಾನು ಭಕ್ತ
ಎಂದರಾರು ಹುಚ್ಚರು
ನಾನೆ ದೇವ ನೀನೆ ಭಕ್ತ
ನೆಂದು ಯಾರು ತಿಳಿವರು ||೧||

ವರ್ಷ ಕೋಟಿ ವಿರಸ ಕೋಟಿ
ಯಲ್ಲಿ ಹಲ್ಲಿ ಯಾದೆನೆ
ಬರಿದು ಬರಿದು ಬಚ್ಚ ಬರಿದು
ಬರಿಯ ಬಯಲ ಉಂಡೆನೆ ||೨||

ನನ್ನ ಕಂಠ ನನ್ನ ಕಾವ್ಯ
ನನ್ನ ಕಲ್ಪ ಕನಸು ನೀಂ
ನಾನೆ ಗುರುವು ಕಲ್ಪ ತರುವು
ನನ್ನ ತಳಿರ ಪಕ್ಷಿ ನೀಂ ||೩||

ನಾನೆ ಪತಿಯು ನೀನ ಸತಿಯು
ನಾನೆ ಪ್ರೇಮ ಮಂದಿರಾ
ನನ್ನ ಬೆಳಗು ಪ್ರೇಮದೊಳಗು
ನಾನೆ ನಿನ್ನ ಚಂದಿರಾ ||೪||
*****