
ದಾರಿ ತಪ್ಪಿದವನೊಬ್ಬ ಬ್ರಾಹ್ಮಣ ಅಲೆಯುತಿದ್ದ ಕಾಡಿನಲ್ಲಿ ಮುಸ್ಸಂಜೆಯ ಸಮಯ ಸಿಕ್ಕಿದ ಯಕ್ಷಿಯ ಬಲೆಯಲ್ಲಿ ಹೆಣ್ಣು ರೂಪದ ಯಕ್ಷಿ ತನ್ನ ಮನೆಗೆ ಕರೆಯಿತು ನಾಳೆ ಹೋದರಾಯಿತೆಂದು ಅವನ ಮನವ ಒಲಿಸಿತು ಊಟ ಕೊಟ್ಟು ಚಾಪೆ ಹಾಕಿ ಮಾತಾಡುತ್ತ ಕುಳಿತಿತು ಕೈಯಲ...
ಮಂಜಿನ ಮರೆಗೆ ತಿಪ್ಪೆಯ ಒಳಗೆ ಹೂವೊಂದು ಅರಳಿತ್ತು ಮತ್ತನ ಮೈಯಿ ಕೆಂಪನೆ ಬಾಯಿ ಥರ ಥರ ನಡುಗಿತ್ತು ಕಣ್ಣಲಿ ಕಂಬನಿ ನುಣ್ಣನೆ ನಲ್ದನಿ ನಸುಕನು ಹರಿದಿತ್ತು ಯಾರದು ತಂದೆ? ಯಾರದು ತಾಯಿ? ಎಲ್ಲರ ಕೇಳಿತ್ತು ನಾಯಿಯ ಬೊಗಳು ಇರುವೆಯ ಸಾಲು ಕಂದನ ಮುತ್ತಿ...
ವೇಣುವಿನ ನಾದ ಹೊಮ್ಮಿತು ನಾಭಿಯೊಳಗಿಂದ ಮೂಡಿದ್ದು ಅದೆಂಥಾ ಮೋಹನ್ಮೋಹ ಮಾರ್ದವದ ಕನಸುಗಳು ಕಾಡ ನೀರವತೆಯಲ್ಲೂ ಮುಗಿಲ ಮುಟ್ಟಿಬಂದವು ಬೆಂದ ನೆಲ ಪ್ರಫುಲ್ಲಿಸಿತು ಪರಿಮಳ ಪೂಸಿತು ಇಬ್ಬನಿಯೂ ತಂಪೆರೆಯಿತು ಮೌನದ್ವಾರ ತೆರೆದುಕೊಳ್ಳಲು ಧೀರ್ಘದಾಹದ ಗಂಟ...
ಗಟ್ಟಿಮುಟ್ಟಾದ ತೋಳು ತೊಡೆ ತಟ್ಟಿ ಅಖಾಡದಲ್ಲಿ ಸೆಣೆಸಾಡಿದ ಜಟ್ಟಿ ಹೂಮಾಲೆ ಕಂಡೊಡನೆ ತಲೆಬಾಗಿದ ರಣರಂಗದಲ್ಲಿ ನೂರಾರು ರುಂಡ ಚಂಡಾಡಿದ ಭುಜಬಲ ಪರಾಕ್ರಮಿ ಹೂಮಾಲೆ ಕಂಡೊಡನೆ ತಲೆ ಬಾಗಿದ ಹೂವಿನ ಹಿರಿಮೆಯನು ಬಲ್ಲವನೇ ಬಲ್ಲ ಲೋಕದಲಿ ಹೂವಿಗೆ ಎದುರಾಳಿ...
ಅದೆಷ್ಟು ದಿನಗಳಾದವು ಕಸುವು ಹದಗೊಳ್ಳಲು ಕಾದು, ಬರುವ ನಿರೀಕ್ಷೆಗಳಲ್ಲಿಯೇ ನೆಟ್ಟ ಕಣ್ಣು ಬಿದಿರುಕೋಲಿನ ನಾದ ಕರ್ಣಕ್ಕಿಳಿಯದೇ ಕದಿರು ಕತ್ತರಿಸಿದ ಪೈರು ಆಕೆ ಆ ನೀಲಾಂಗನನ ಸುತ್ತ ನೆರೆದ ಗೋಪಿಕೆಯರ ಕಮಲದಳ ಕಣ್ಣುಗಳ ದಂತ ಕದಳಿ ಮೈ ನುಣುಪು ತೋಳುಗ...
ಕಡಲ ಉಪ್ಪು ನೀರಿನಲ್ಲುರುಳುರುಳಿ ಒರಟಾದ ಕಲ್ಲಿನಂತೆ, ಅಪಳಿಸುವ ಅಲೆಗೆ ಎದೆಯೊಡ್ಡಿ, ಬಂದೇ ಬರುವ ಚಳಿಗೆ ಮಳೆ ಗಾಳಿ ಬಿಸಿಲಿಗೆ ಸಾಕ್ಷಿಯಾಗಿ ಕಾಲದ ಕಟ್ಟು ಮೀರಿದ ಬಂಡೆಗಲ್ಲಿನಂತೆ ಸಹಜವಾಗಿ ಇದ್ದುಬಿಡಬಹುದಾಗಿತ್ತು. ಹಾಗೆ ಆಗಲಿಲ್ಲ. ತನ್ನ ಕುರಿತು...
ಜನನದಲ್ಲಿ ಮರಣದಲ್ಲಿ ಹೂವು ಜತೆಯಾಗುವುದು ಸಂತೋಷದಲ್ಲಿ ದುಃಖದಲ್ಲಿ ಹೂವು ಭಾಗಿಯಾಗುವುದು ಮಿಕ್ಕವರು ಮರಳಿದರೂ ಮಸಣದಲ್ಲಿ ಹೂವು ಉಳಿದೇ ಉಳಿಯುವುದು ಆಳಿದವನ ಆತ್ಮವನ್ನು ಪರಮಾತ್ಮನೆಡೆ ಕೊಂಡೊಯ್ಯುವುದು. *****...














