
ಅಕ್ಕರೆಯೊಳೊ ಮರುಕದೊಳೊ ನೆನೆದರೆ ಸಾಕು ನೀ ನನ್ನ ಎಂದಾದರು ಒಮ್ಮೆ ನಿದ್ದೆಯೊಳೊ ಅರೆನಿದ್ದೆಯೊಳೊ ಕನವರಿಸಿದರೆ ಸಾಕು ನೀ ನನ್ನ ಎಂದಾದರು ಒಮ್ಮೆ ಮುಂಜಾವದ ಆಗಸದಲಿ ಬೆಳ್ಳಿಯ ನೋಡಿದರೆ ಸಾಕು ಒಮ್ಮೆ ಸಂಜೆಯ ಆಗಸದಲಿ ಅದೇ ಕಂಡರೆ ಸಾಕು ಒಮ್ಮೆ ಎಂದಾದರ...
ಉರಿವ ಬಿಸಿಲಿನ ನಡುವೆ ಮಾವು, ಬೇವುಗಳ ಹೂಗಂಪು ಮುಂಜಾವಿನ ಕನಸಿನಲಿ ಕೆಂಡ ಮಿಂದೆದ್ದ ಸೂರ್ಯ ನಿಟ್ಟಸಿರು ಬಿಟ್ಟ ಕಣ್ಣೀರು! ಹೊಸ ವರುಷ ಬಂದಿದೆ ಸಾವಿನ ಸನ್ನಿಧಿಯಲ್ಲಿ ಪತರುಗುಟ್ಟುವ ಕ್ಷಣಗಳಲ್ಲಿ ಎಸಳು ಜೀವಗಳ ಹೊಸಕುತ್ತ ಕನಸುಗಳ ಕನ್ನಡಿ ಚೂರುಚೂರ...
ನಡೆವ ಹಾದಿಯಲಿ ಇಡುವ ಹೆಜ್ಜೆಯಲಿ ಬೆಳಕು ಮೂಡುತಿರಲಿ ಕೆಂಪು ಪಯಣ ಬಿರುಬಿಸಿಲಿನಲ್ಲೂ ದಣಿವನ್ನು ಕಾಣದಿರಲಿ ಹೆಜ್ಜೆ ಹೆಜ್ಜೆ ಹತ್ಹೆಜ್ಜೆ ಕೂಡಲಿ ಧ್ವನಿ ಒಂದೆ ಇರಲಿ ದಾರಿ ನೂರು ಎಡಬಲದಿ ಸೆಳೆದರೂ ದಿಕ್ಕು ತಪ್ಪದಿರಲಿ ಭೂತದರಿವಿದೆ ಚರಿತೆ ಕಟ್ಟುವ ...
ಮೂಲ: ಸುತಪಾ ಸೇನ್‌ಗುಪ್ತ ಆಮೇಲೆ ನನ್ನ ನಾದಿನಿ ಮನೆಗೆ ಹೋದೆ, ಅತ್ತೆ ಮಾವಂದಿರನ್ನು ಒಲಿಸಿ ಮೆಚ್ಚಿಸಿದೆ. ತೃಪ್ತಿಗೊಂಡ ಹಿರಿಯರು ಸರ್ಪಬಂಧನ ಬಿಚ್ಚಿ ಮುಕ್ತಳಾಗಿಸಿದರು. ಆದರೂ ಪೂರ್ತಿ ವಿಷ ಆರಿಲ್ಲ ಈಗಲೂ; ನನಗೀಗ ಏನನ್ನೂ ಮಾಡಲಾಗುತ್ತಿಲ್ಲ, ಲೇಖ...
ನಿನ್ನ ಕಣ್ಣ ಕಾಂತಿಯಲ್ಲೇ ಪ್ರಪಂಚ ಬೆಳಗಿರುವಾಗ ಬೆಳಕಿನ ಹಂಗೇಕೆ ಬಾಳ ದಾರಿಯಲಿ ಕತ್ತಲಿನ ಗುಂಗೇಕೆ ಎನ್ನ ಮನದಲಿ ನಿನ್ನ ಮುಖದ ಕನ್ನಡಿಯಲ್ಲಿ ನನ್ನ ನಗುವಿನ ಪ್ರತಿಬಿಂಬ ನಿನ್ನ ಕಣ್ಣೀರು ಹರಿದಿದೆ ನನ್ನ ಕಣ್ಗಳಲಿ ಮುಖ ಬಾಡಿದೆ, ಮನಸ್ಸು ಮರುಕಪಟ್ಟ...
ಸೀತೆಯ ವನವಾಸ ಕೊನೆಗೊಂಡಿತೆನೆ ಕೆಳದಿ? ಹದಿನಾಲ್ಕು ವರ್ಷಗಳ ಘನಘೋರ ಕಾಡಿನ ವನವಾಸ ಅನುಭವಿಸಿ ಅಗ್ನಿ ಪರೀಕ್ಷೆಗೆ ಮೈಯೊಡ್ಡಿ, ಸೈ ಎನಿಸಿಕೊಂಡು ಬಂದಿದ್ದಾಳೆ ಆಧುನಿಕ ಮೀಸಲಾತಿಯ ಸೀತೆ. ಎಡ ಹೋರಾಟ ಮೂಲದ ಕಾಸಗಲ ಕುಂಕುಮದ ಬೃಂದೆ ಬಳ್ಳಾರಿ ವರಮಹಾಲಕ್...
ತಳದಲ್ಲಿದ್ದವರು; ನಾವು ಬೂದಿಯಲೆದ್ದವರು ಕತ್ತಲೆ ಚರಿತೆಯ ಬೆತ್ತಲೆ ಮಾಡುವ ಕನಸನು ಹೊತ್ತವರು | ನಾವು ಕನಸನು ಹೊತ್ತವರು || ನೋವನು ಉಂಡವರು; ಉಂಡು ಮೌನವ ಹೊದ್ದವರು ಅಕ್ಷರ ದೂರದ ಕತ್ತಲೆ ಗವಿಯಲಿ ಬದುಕನು ಕಳೆದವರು | ಬೆಳಕ ಕಾಣದೆ ಹೋದವರು ಬದುಕನ...













