ನಿನ್ನ ಕಣ್ಣ ಕಾಂತಿಯಲ್ಲೇ
ಪ್ರಪಂಚ ಬೆಳಗಿರುವಾಗ
ಬೆಳಕಿನ ಹಂಗೇಕೆ ಬಾಳ ದಾರಿಯಲಿ
ಕತ್ತಲಿನ ಗುಂಗೇಕೆ ಎನ್ನ ಮನದಲಿ
ನಿನ್ನ ಮುಖದ ಕನ್ನಡಿಯಲ್ಲಿ
ನನ್ನ ನಗುವಿನ ಪ್ರತಿಬಿಂಬ
ನಿನ್ನ ಕಣ್ಣೀರು ಹರಿದಿದೆ ನನ್ನ ಕಣ್ಗಳಲಿ
ಮುಖ ಬಾಡಿದೆ, ಮನಸ್ಸು ಮರುಕಪಟ್ಟಿದೆ
ಜೀವನದ ಸಂಜೆಯಲ್ಲಿ ನಮ್ಮಿಬ್ಬರ
ಬೆರಳುಗಳು ಬೆರೆತು ಹೋಗಿದೆ
ಮನದ ಸಂದೇಶಗಳು ಪ್ರವಹಿಸಿವೆ ಭಾಷೆಯ ಹಂಗಿಲ್ಲದೆ
ಪ್ರೀತಿಗೆ ಇನ್ನ್ಯಾವ ಭಾಷೆ?
ನೀ ನಕ್ಕ ಮೊದಲ ನಗು
ಮನದಲ್ಲೇ ಮನೆ ಮಾಡಿದೆ
ಆಡಿದ ಮೊದಲ ಮಾತು
ಕೂತು ಬಿಟ್ಟಿದೆ; ಹೂತು ಹೋಗಿದೆ ಎದೆಯಲ್ಲಿ
ನೀನಿಲ್ಲದ ಈ ಬದುಕಲ್ಲಿ
ನಿನ್ನ ನೆನಪುಗಳೇ ತುಂಬಿಹೋಗಿವೆ
ಕಾಡುವ ನೂರು ಯೋಚನೆಗಳು
ಕುಗ್ಗಿಹೋದ ಹೃದಯಕ್ಕೆ ಲಗ್ಗೆ ಇಟ್ಟಿವೆ
*****


















