ದೇವರೆ ನಿನಗೊಂದು ಕೋರಿಕೆ
ನನ್ನ ಬೇಡಿಕೆಗಳ ಪೂರೈಸದಿರು
ನಿನ್ನ ಧ್ಯಾನಿಸದ ಎಂಥದು
ನನ್ನ ಕಂಗಳೆದರು ಮಿಂಚಿಸದಿರು
ಆಕಾಶದೆತ್ತರಕ್ಕೆ ಕೈ ಚಾಚಲಾರೆ
ಭೂಮಿ ಅಗಲವ ಬಾಚಲಾರೆ
ನನ್ನ ಮನಸ್ಸ ನಾ ಹಿಡಿಯದೆ
ಇನ್ನೇನು ನಾ ಸಾಧಿಸಲಾರೆ
ಯಾವ ಮೂಲೆಯಿಂದ ಬಂದರೂ
ನನ್ನ ಲಾಭ ನಷ್ಟಯೋಚ್ನೆ ಏಕೆ!
ನನ್ನ ಬಾಳನ್ನು ಪುನಿತಗೊಳಿಸದೆ
ಪಾರಸ ಮಣಿ ಇದ್ದರೂ ಏತಕೆ!
ಕ್ಷಣ ಹೊತ್ತು ಸುಖಕ್ಕೆ ಧ್ಯಾನಿಸುವುದೆಲ್ಲ
ಸ್ವಾರ್ಥ ಹೊರತು ಮತ್ತೇನು!
ಮಾಣಿಕ್ಯ ವಿಠಲನರಿಯದ ಯಾವ ವಿದ್ಯೆ
ಎಷ್ಟು ಉತ್ತಮವಿದ್ದರೆ ಮತ್ತೇನು!
*****
















