Home / Kannada Poetry

Browsing Tag: Kannada Poetry

ಪ್ರತಿನಿತ್ಯ ಒಂದು ಹೊಸ ಅನುಭವ ಹೊತ್ತ ಸೂರ್ಯ ಹುಟ್ಟಿ, ಜಗದ ಜನರ ನೆರೆ ಕೂದಲ ಮಧ್ಯೆ ಒಂದು ನಗೆ, ಒಂದು ಹಾಡು, ಮಲ್ಲಿಗೆ ಅರಳುತ್ತವೆ ಘಮ್ಮಗೆ. ಒಲ್ಲದ ಮನಸ್ಸು ರಾತ್ರಿ ಕಳೆದು, ಬಿಳಿ ಹಕ್ಕಿ ಹಾರಾಡುವ ನೀಲ ಬಾನಿನಲಿ ಬೆಳಕಿನ ಕಿರಣಗಳು ಸೋಕಿದಾಗ, ನ...

ಒಂದು ಬಿನ್ನಾಣವಿಹುದು ಸುಸಮಾಧಿ ಸುಪ್ತ ಸೂರ್‍ಯನಂತೆ. ಹೃದಯಗುಹೆಯಲ್ಲಿ ಹಿಗ್ಗು ಹೊತ್ತಿಹುದು ಅನ್ನಿಸತ್ವದಂತೆ. ಹೃದಯ ಹೃದಯ ಮಿಲಿತೈಕ್ಯದಂಥದಿದೆ ಒಂದೆ ಹೃದಯಲೋಕ. ಸುಪ್ರಮೋದ ಪರ್‍ವತದ ಅಗ್ರಕಿದೆ ಭವ್ಯಮೌನ ಮೂಕ. ಶಾಂತಿ ತೊಡೆಯ ತೊಟ್ಟಿಲದಲಾಡಿಸುವಳ...

ಪ್ರೀತಿಯಿಂದ ಕೊಲ್ಲು ನೀ ಸುಖವಾಗಿ ಸಾಯುವೆ|| ಪ್ರೀತಿಸಿದಂತೆ ನಟಿಸಿ ಮಾತ್ರ ಮೋಸವ ಮಾಡಬೇಡ! ಪವಿತ್ರ ಪ್ರೀತಿ ನನ್ನದು, ಅದು ಎಂದೆಂದೂ ಅಜರಾಮರ|| ಮಗುವು ಅಮ್ಮನ ನಂಬಿದಂತೆ ನಾನು ನಿನ್ನ ನಂಬಿದೆ| ತಂಗಿಯು ಅಣ್ಣನ ನಂಬಿದಂತೆ ನಾ ನಂಬಿದೆ| ಹೂವೊಂದು ...

ಅರ್‍ಜುನನ ಹೃದಯದಲಿ ಪ್ರತಿಬಿಂಬಿಸಿದ ದೇವ ಪರ್ಜನ್ಯನೊಲು ಆತ್ಮ ಸುಜ್ಞಾನಗಳ ತಿಳಿವ ನಿರ್ಜೀವರಾದೆಮಗೆ ಧಾರೆಯೆರೆದೀ ಜಳವ ವರ್ಜಿಸಿದೆ ಬೋಧಿಸುತ ನಿನ್ನ ವಚನಾಮೃತವ. ಸೌಜನ್ಯ ಬೆಳೆ ಬಿತ್ತಿ ಬೆಳೆದೇರಿ ಪೂಫಲವ ನಾರ್ಜಿಸಿದೆವಾವಿಂದು ನಿನ್ನ ಕೃಪೆಯಿಂದೋಲ...

ಓಡುತಿರುವ ಗಾಡಿಯೊಳಗೆ ಇರುಳು ಹೆಪ್ಪುಗಟ್ಟುತಿದೆ ಒಳದೀಪಗಳನುರಿಸಿದರೆ ಹೊರಜಗವೇ ಮಾಯ ಕಿಟಕಿಗಾಜುಗಳ ಗೋಡೆಯಾಗಿ ಎಲ್ಲಿ ನೋಡಿದರೂ ಅಲ್ಲಿ ನೋಡಿದವನ ಮುಖವೆ ತೋರುವುದು ಲೋಕ ಮುಚ್ಚಿಕೊಳ್ಳುವುದು ಅಲ್ಲಿ ಹೊರಗೆ ಮಿನುಗುವ ಸಣ್ಣ ಮಿಂಚು ಹುಳಗಳೋ ಅಲ್ಲಿ ಮ...

ಯಾವ ಊರಿಗೆ ಹೋದರೂ ನನ್ನೂರು ನೆನಪಾಗುವುದು ಗೌರಿ ಶಂಕರನಿಗೆ ಶಿರ ಬಾಗಿದರೂ ಮನ ಸಹ್ಯಾದ್ರಿಗೆ ಮರಳುವುದು ಯಾವ ಊರಿಗೆ ಹೋದರೂ ನನ್ನೂರು ನೆನಪಾಗುವುದು ಗಂಗೆಯಲಿ ಮಿಂದರೂ ಮೈ-ಮನ ತುಂಗೆಯಲಿ ತಂಗುವುದು ಯಾವ ಊರಿಗೆ ಹೋದರೂ ನನ್ನೂರು ನೆನಪಾಗುವುದು ನಾನ...

ಗುಡುಗುಟ್ಟಿದ ಧರೆ ಕೆರಳಿತು ಸಾಗರ ಅಪ್ಪಳಿಸುತ ರಾಕ್ಷಸಾಕಾರದ ಸುನಾಮಿ ಕೊಚ್ಚಿ ಹೋದವು ಮನೆ ಮಠ ಜಲಸಮಾಧಿಯಾದವು ಜೀವರಾಶಿ ಕಂದಮ್ಮಗಳ ಸಾವಿನಲ್ಲಿ ಮುಗಿಲ ಮುಟ್ಟಿದ ಹೆತ್ತೊಡಲ ಕರುಳಿನ ನೋವು! ಕೇಳುವವರ್‍ಯಾರು? ಮಾರಣ ಹೋಮ ನಡೆಯಿತು ಜೀವರಾಶಿಗಳ ಮೇಲೆ...

ತೋರುವುದು ಕನ್ನಡಿ ಈ ಚೆಲುವು ಕರಗುವುದ, ಗಡಿಯಾರ ಕೈಮುಳ್ಳು ಗಳಿಗೆಗಳು ಜರುಗುವುದ; ಈ ಖಾಲಿ ಪುಟಗಳಲಿ ಬರೆ ಮನದೊಳಿರುವುದ, ರುಚಿನೋಡಿ ಬಳಸು ಈ ಪುಸ್ತಕದ ಒಳತಿರುಳ. ಕನ್ನಡಿಯು ಬಿಂಬಿಸುವ ಮುಖದ ಮುರಿನೆರಿಗೆಗಳು ಕೆಳಕುಸಿದ ಗೋರಿಗಳ ನೆನಪನ್ನು ಕೆದು...

ಕರುಣಾಳು ಸಂತತವು ಕಾಯ್ವಬೀಳಿಸನೆಮ್ಮ ಏಕೆ ಹೆದರಿಕೆ ಒಂದು ತಪ್ಪಿಗಾಗಿ ಹೆದರದಿರು ದಟ್ಟಡಿಯ, ಹಾಕುತ್ತ ಹೋಗೋಣ ದೇವನಿರುವಾ ದಿವ್ಯ ತಾಣಕಾಗಿ ಹಲವು ಹಂಬಲಗಳನ್ನು ಹೊರಹಾಕಿ ಎದೆಗೂಡ ಹಸನಾಗಿ ಇಟ್ಟು ಸೊಗ ಉಣ್ಣೋಣುಬಾ ಒಂದೊಂದೆ ಮೆಟ್ಟಲವ ಮೇಲೇರಿ ಗುರಿಯ...

ಸಾಹಿತ್ಯ ಗಗನದಲಿ ಧ್ರುವ ತಾರೆ ಮಿನುಗುತಿತ್ತು ಒಮ್ಮೆಲೇ ಮಾಯವಾಯ್ತು ಕಣ್ಮರೆಯಾದುದು ಜಡಕಾಯ ಶಾಶ್ವತವಾಗಿ ಉಳಿದದ್ದು ಅಮೂಲ್ಯ ಕೃತಿಗಳಲಿ. ಅದೆಂದಿಗೂ ಧ್ರುವ ಚಿರ ಶಾಂತಿ ಹೊಂದಲಿ ಜೀವ ಎಂದು ನಿನ್ನ ಬೇಡುವೆ ದೇವ. ೭-೧೦-೧೯೭೫ ರಂದು ಶ್ರೀ ಡಿ.ವಿ. ಗ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...