ಏರಿದ ಬಳೆ ಕೈಗೇರಿದ ಬಳೆ
ಇಷ್ಟು ಬೇಗ ಬಿಗಿಯಾಯಿತೆ
ಕಳಚಲೇಬೇಕೆ
ಹೌದು ಒಂದು ಅಂಗಿ ಕಳಚಿ
ಇನ್ನೊಂದು, ದೇಹ ಕಳಚುವ
ಆತ್ಮ, ಹಂಸದ ಅನಂತ
ಯಾತ್ರೆ, ಸಾಕೆ?
ಕಳೆದದ್ದೇ ತಿಳಿಯಲಿಲ್ಲ ಐದು
ದಶಕ ಎಂಥ ಉಲ್ಲಾಸ ಚಿಗುರು
ಹೂ ಮನಸು ಒಂದರೊಳಗೊಂದು
ಅತಿ ಸೊಗಸು,
ಗುಲಾಬಿಯಡಿಯಲ್ಲಿ ಮುಳ್ಳು
ಸಹಜ, ಅದನ್ನು ಬಿಡಿಸಿ ಹೂ
ಕಿತ್ತು ಮುಡಿಯುವುದೇ ಈ
ಬದುಕಿನ ನಿಜ.
*****