Home / Kannada Poetry

Browsing Tag: Kannada Poetry

ಬೆಚ್ಚನೆಯ ಸಿರಿಹಗಲ ಭರವಸೆಯ ನನಗಿತ್ತು ಮಳೆಯಂಗಿ ಇರದೆ ಪ್ರಯಾಣಿಸಲೇಕೆ ಪ್ರೇರಿಸಿದೆ ? ನನಗಡ್ಡ ಬರುವಂತೆ ಕರಿಮೋಡಕೆಡೆಯಿತ್ತು ಹೊಲಸುಗಪ್ಪಲ್ಲಿ ಚೆಲುವನ್ನೇಕೆ ಮರೆಸಿದೆ ? ಕರಿಮುಗಿಲ ತೂರಿ ಹೊರಬಂದು ಗಾಳಿಗೆ ಜರೆದ ಕಂಗೆಟ್ಟ ಮುಖದ ಮಳೆ ಹನಿ ಒರೆಸಿ...

ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ನಾನು ಯಾವುದೋ ಒಂದು ತರಗತಿಯಲ್ಲಿ ಓದುತ್ತಿದ್ದೇನೆ. ಅಲ್ಲ ಅಲ್ಲ ಯಾವುದೋ ಒಂದು ತರಗತಿಯಲ್ಲಿ ಇದ್ದೇನೆ. ಅದೂ ಅಲ್ಲ ಯಾವುದೋ ಒಂದು ತರಗತಿಯಲ್ಲಿ ನನ್ನ ಹೆಸರಿದೆ. ತರಗತಿಗೆ ಹೋಗಲು ನನಗೆಲ್ಲಿ ಸಮಯ? ಕಾಲೇಜಿಗ...

ಜೋಲು ಮೋರೆಯ ಮಾಡಿ ಕಲ್ಲ ಮೇಲೆಯೆ ಕುಳಿತ ನಲ್ಲೆಯೊಬ್ಬಳು – ಬಳಿಯೆ ಹೂವು ಚೆಲ್ಲಿತ್ತು. ಯಾರಿಲ್ಲ ಬಳಿಯಲ್ಲಿ, ಮೇರು ವ್ಯಥೆ ಮನದಲ್ಲಿ ಯಾರದೋ ವ್ಯಸನ, ಆವದೋ ಚಿಂತನ ಮಾರುತನ ಮಂದ ಅಲೆ ತುಂಬುತಿದೆ ಮನ ಜಾರುತಿದೆ ಸೆರಗು, ಏರುತಿದೆ ಮೆರಗು-ಅರಿ...

ಎಲ್ಲಾದರು ಒಂದು ದಿನ ಎಂತಾದರು ಒಂದು ದಿನ ಕಾಣದಿರುವೆನೇ ನಾ ನಿನ್ನನು ಹಾಡುತಿರಬಹುದು ನೀ ಮಾತಾಡುತಿರಬಹುದು ನೀ ಸುಮ್ಮನೆ ಕುಳಿತಿರಬಹುದು ನೀ ಕುಣಿಯುತಿರಬಹುದು ನೀ ಬಸವಳಿದಿರಬಹುದು ಮುತ್ತಿನಂಥ ಬೆವರ ಹನಿ ನಿನ್ನ ಹಣೆ ಮೇಲಿರಬಹುದು-ಅಲ್ಲಿ ಕುರುಳೊ...

ಪ್ರಭುದೃಷ್ಟಿ ಹರಿದು ಗಿರಿತುದಿಗೆ ಹೆಮ್ಮೆಯನೆರೆದು, ಹೊನ್ನ ತುಟಿಯೊತ್ತಿ ಹಸಿರೆದೆಗೆ ಮುತ್ತನು ಸುರಿದು, ಮಂಕುತೊರೆಮೈಗೆ ಬಂಗಾರ ರಸವನು ಬಳಿದು, ಹೊಳೆವ ಬೆಳಗಿನ ಚೆಲುವ ನೋಡಿರುವೆ ಮೈಮರೆದು. ಥಟ್ಟನೇಳುವುವು ಕೆಳಗಲೆವ ಕಾರ್ಮೋಡಗಳು ದಿವ್ಯಮುಖ ಮರೆ...

ಸುಂದರ ಸಂಜೆ ಸಂತಸದ ತಂಗಾಳಿ ಸೊಗಸಾದ ಆಗಸ ಗಗನದ ತುಂಬಮುಗಿಲುಗಳು ಸಣ್ಣವು ದೊಡ್ಡವು ಬಿಳಿಯವು ಕರಿಯವು ಬಾನಿನ ಹಾಲ್ಗಡದಲ್ಲಿ ತೇಲುವ ಬೆಣ್ಣೆಗಳು ಅಂತರಿಕ್ಷದ ಅರಮನೆಯಲ್ಲಿ ಭಾರಿ ಔತಣಕೂಟ ಮೋಡಗಳ ಓಡಾಟ, ಮಿಂಚಿನ ದೀಪಾಲಂಕಾರ ಗುಡುಗಿನ ಅಬ್ಬರದ ಸಂಗೀತ...

ಏನು ಲೋಕ ಏನು ಜನ, ಏನು ಶೋಕ ಏನು ಮನ ತಾನು-ತನ್ನದೆಂದು ಜನ, ನೇಹವಿಲ್ಲವಿಂದು ಹಣ! ನೇಹವ ಬಯಸಿತು ತನು ಮನ ಗೇಯವ ಹಾಡಿತು ಅನುದಿನ ಭವದಲಿ ವ್ಯರ್ಥವೆ ಹೋಯಿತು ತವ ತವೆಯುತ ಬಾಳು ಗೋಳಾಯಿತು ಏನದು ಮನದಾ ಮಹದಾಶೆಯು ಮೇಣದು ಮಮತೆಯ ಸುಖದಿಂಗಿತವು ಯಾಕದು...

ದೇವರ ಕಾಣಲು ಹೋದವರಿದ್ದಾರೆ ಕಾಡುಬೆಟ್ಟಗಳ ಹಾದು ಕಾಡ ಕಾಣಲಿಲ್ಲ ಬೆಟ್ಟವ ಕಾಣಲಿಲ್ಲ ದೇವರ ಕಾಣಲಿಲ್ಲ ಮರವ ಕಾಣದೆ ಕಾಡ ಕಾಣುವುದು ಬಯಲ ಕಾಣದೆ ಬೆಟ್ಟವ ಕಾಣುವುದು ಎಂತೊ ಮನುಷ್ಯ ಮನುಷ್ಯರ ಕಾಣದ ದೇವರ ಕಾಣುವುದು? ಪಾಪವ ನೀಗಲು ಹೋದವರಿದ್ದಾರೆ ಪುಣ...

ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೆ ಬೀಸುತ್ತಿದ್ದ ಚುಂಬಕ ಗಾಳಿ ಈಗ ಬಿರುಸಾಗಿದೆ. ಕಸ ಕಡ್ಡಿಯನ್ನೆಲ್ಲಾ ತೂರುತ್ತಿದೆ ಅಂದಿನ ಸೂರ್ಯ ಚಂದ್ರರ ಅವಿನಾಭಾವ ಸಂಬಂಧ ಮಿತಿ ಮೀರುತ್ತಿದೆ. ಬಯಕೆ ದಾಂಗುಡಿ ಯಿಡುತ್ತಿದೆ. ಒಂದಾಗುವಾತುರ ತೋರುತ್ತಿದೆ. ಮತ...

ನನ್ನ ಜೀವಿತ ಮುಗಿದು ಕಾಲ ಮೂಳೆಗಳನ್ನು ಮಣ್ಣಲ್ಲಿ ಹೂಳುವನು. ಅದೃಷ್ಟದಿಂದಾಗ ನೀ ನನ್ನ ಕಳಪೆ ಸಾಲುಗಳ ಓದಿದೆಯೆನ್ನು. ನನ್ನ ಕಾಲದ ಪ್ರಗತಿ ಜೊತೆಗೆ ಹೋಲಿಸಿದಾಗ ಪ್ರತಿಯೊಂದು ಬರೆಹವೂ ಮೀರಿದ್ದರೂ ಇದನು, ಇದರ ಕೌಶಲ ಆ ಅದೃಷ್ಟವಂತರ ಬರೆಹ- ಕಿಂತ ಕೆ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....