ಕಾಲೇಜು ವಿದ್ಯಾರ್ಥಿ

ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ನಾನು
ಯಾವುದೋ ಒಂದು ತರಗತಿಯಲ್ಲಿ ಓದುತ್ತಿದ್ದೇನೆ.
ಅಲ್ಲ ಅಲ್ಲ
ಯಾವುದೋ ಒಂದು ತರಗತಿಯಲ್ಲಿ ಇದ್ದೇನೆ.
ಅದೂ ಅಲ್ಲ
ಯಾವುದೋ ಒಂದು ತರಗತಿಯಲ್ಲಿ ನನ್ನ ಹೆಸರಿದೆ.

ತರಗತಿಗೆ ಹೋಗಲು ನನಗೆಲ್ಲಿ ಸಮಯ?
ಕಾಲೇಜಿಗೆ ಬಂದರೆ ನೂರಾರು ಕೆಲಸ
ಹತ್ತಾರು ಸಂಘಗಳ ಸದಸ್ಯನಾನು
ನಾಲ್ಕಾರು ಸಂಸ್ಥೆಗಳ ಕಾರ್ಯದರ್ಶಿ ನಾನು
ಮತ್ತೊಂದು ಪಾರ್ಟಿಯ ಅಧ್ಯಕ್ಷನೇ ನಾನು!

ಕಾಲೇಜಿಗೆ ಬಂದೆ, ಪ್ರಿನ್ಸಿಪಾಲರ ಕಂಡೆ,
ನನ್ನೆಲ್ಲ ವಿಷಯಗಳ ಬಗ್ಗೆ ಮಾತನಾಡಿದೆ,
ಉಳಿದೆಲ್ಲ ಶಿಕ್ಷಕರ ಬಳಿ ಹೋಗಿ ಬಂದೆ,
ಎಷ್ಟೆಲ್ಲ ವಿಷಯಗಳ ಚರ್ಚಿಸಿ ಬಂದೆ
ನಾಲ್ಕಾರು ಗೆಳೆಯರೊಡನೆ ಹರಟುತ್ತಾ ನಿಂತೆ.
ಸಂಗೀತ, ನಾಟಕ, ನೃತ್ಯಗಳ ಬಗ್ಗೆ,
ಚುನಾವಣೆ, ಗ್ರಂಥಾಲಯ, ವಾಚನಾಲಯಗಳ ಬಗ್ಗೆ
ಫ್ರ್‍ಈಶಿಪ್ಪು, ಸ್ಕಾಲರ್‌ಶಿಪ್ಪು, ಲೋನುಗಳ ಬಗ್ಗೆ,
ಭಾಷಣ, ಬಹುಮಾನ, ಸನ್ಮಾನಗಳ ಬಗ್ಗೆ,
ಎನ್ನೆಸ್ಸೆಸ್, ಎನ್ಸೀಸಿ, ಸ್ಪೋರ್ಟುಗಳ ಬಗ್ಗೆ
ಕ್ರಿಕೆಟ್ಟು, ಫುಟ್ ಬಾಲು, ಟೆನ್ನಿಸುಗಳ ಬಗ್ಗೆ
ಗ್ರೂಪ್ ಸಾಂಗ್ಸು, ಗ್ರೂಪ್ ಡಾನ್ಸುಗಳ ಬಗ್ಗೆ
ಏನೆಲ್ಲ ಚಿಂತೆಯು ಎನಗೆ
ವರ್ಷವಿಡೀ ಇರುವುದು ಕಾರ್ಯ ನನಗೆ.

ಜುಲೈನಲ್ಲಿ ಕಾಲೇಜಿಗೆ ಸೇರಿದರೆ ಆಯ್ತು
ಆಗಸ್ಟ್‌ನಲ್ಲಿ ಚುನಾವಣೆಗಳು, ನಾಟಕಗಳು,
ಸೆಪ್ಟೆಂಬರ್‌ನಲ್ಲಿ ತಪ್ಪದೆ ವಾರ್ಷಿಕ ಮುಷ್ಕರ
ಅಕ್ಟೋಬರ್‌ವನ್ನೆಲ್ಲ ರಜದಲ್ಲಿ ಕಳೆದು
ನವೆಂಬರ್‌ನಲ್ಲಿ ಅವಸರದ ಪ್ರವಾಸ ಹೋಗಿ ಬಂದು,
ಡಿಸೆಂಬರ್‌ನಲ್ಲಿ, ನವೆಂಬರ್‌ನ ರಾಜ್ಯೋತ್ಸವ ಮಾಡಿ,
ಜನವರಿಯಲ್ಲಿ ಕ್ರೀಡಾಕೂಟ, ವಾರ್ಷಿಕೋತ್ಸವ ಮಾಡಿ
ಫೆಬ್ರವರಿಯಲ್ಲಿ ಸ್ಪೆಷಲ್ ಕ್ಲಾಸುಗಳ ಚಂಡಿ ಕಾಡಿ
ಮಾರ್ಚ್‌ನಲ್ಲಿ! ಓ ಭಯವಾಗುತಿದೆ ಎನಗೆ
ಭೂತ ಬಂತು ನೋಡಿರಲ್ಲಿ. “ಪರೀಕ್ಷೆ”!
*****
೧೨-೦೧-೧೯೭೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಮು ಸೌಹಾರ್ದದ ಸಂಕೇತ ಸ್ವಾಮಿ ವಿವೇಕಾನಂದ
Next post ನನ್ನವಳು

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys