Home / Hannerdmath

Browsing Tag: Hannerdmath

ಗಚ್ಚು ಮಾಳಿಗೆ ಮೇಲೆ, ಕಲ್ಲು ಹಾಸಿಗೆ ಕೆಳಗೆಲ್ಲ ಎಡಬಲಕು ಇಹುದು ರಂಜಿಸುವ ರಂಗು ಮಿರುಗುವ ಗೋಡೆ ಸದ್ದಿಲ್ಲ ! ಕಂಡು ಕಂಡಿಲ್ಲ !! ಬಂದು ಬಂದಿಲ್ಲ !!! ಯಾವೆಡೆಯಿಂದಿಳಿಯುವಿರಿ ನೀವು? ನಿಮ್ಮ ನಾ ನೋಡೆ ಮಿಣಿಕೊಮ್ಮೆ, ಇಣಿಕೊಮ್ಮೆ ಮಿಂಚುವಿರಿ ಕಣವೇ...

ಸುಂದರ ಬೆಂಗಳೂರಿನ ಸಿಟಿ ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದೆ. ಕಿಡಿಗೇಡಿ ಬಸ್ಸು ಒಂದು ಗಂಟೆ ತಡವಾದರೂ ಮುಖ ತೋರಿಸಲಿಲ್ಲ. ನನ್ನೆದುರಿನ ಪಾನ, ಬೀಡಾ, ಸಿಗರೇಟ, ಗುಟಕಾ, ಚಿಲ್ಲರೆ ದಿನಸಿ ಡಬ್ಬಿ ಅಂಗಡಿಯ ಮಾಲಕ ಅಂಗಡಿಯೊಳಗಿನ ಒಂದು ಬು...

ಯಾರಿಹರು ಬನ್ನಿರೋ; ದೀಪವೊಂದನು ತನ್ನಿರೋ ಕಡಿಯಿತೊಂದೇನೋ ಈ ಕತ್ತಲಲ್ಲಿ ತಾಳಲಾರೆನು; ಎಲ್ಲಿ ಹೋಗಿರುವಿರೋ? ನಾ ಮಾಡಬಲ್ಲೆನೇನು ಕಾವಳಲ್ಲಿ ! ಅವ್ವ ಬರಲಿಲ್ಲ, ಅಕ್ಕ ಇಲ್ಲಿಲ್ಲ, ಮತ್ತಾರ ಸುಳಿವಿಲ್ಲ ನಮ್ಮಮ್ಮ ಹೋದವಳು ಬರಲೇ ಇಲ್ಲ ಯಾರು ಕಾಣುವದಿಲ...

ಮುಚ್ಚು- ಮರೆ ಇಲ್ಲದ ಚೊಕ್ಕ ಸ್ಫಟಿಕದ ಹೃದಯ ಕಾವ್ಯ ವಾಹಿನಿಯ ಉದಯ ಬಿಂದು ಕವಿಯ ಹೃದಯ; ಕಾವ್ಯ ಜ್ಯೋತಿಯ ಕಾಯ ಮಿಂಚಿಹುದು; ಓ ಚಿಮ್ಮಿ ಬಂದಿಹುದು ಸರ್ಗಗ೦ಗೆಯ ಕರೆದು ನಲಿದಾಡಬಲ್ಲ ಸೂರ್ಯ ಚಂದಿರರೊಡನೆ ಆಡಬಲ್ಲ ಶಾಂತಿ ರೌದ್ರದ ಕಂಠ ಒಂದು ಮಾಡಲುಬಲ್...

ಗೆಲವಿರಲಿ, ಬರದಿರಲಿ ಎದುರು ಸೋಲು ಎಲ್ಲೆಡೆಗು ನಡೆದಾಗ ಗೆಲುವೆ ಮುಂಬರಲಿ ಗೆಲುವಿನಾಶಯ ಜೀವ ಜಗದಿ ಮೇಲು ಸೋಲಿನಲ್ಲೇನಿಹುದು; ಗೆಲುವೆಮಗೆ ಕಾದಿರಲಿ ಒಲವು ಗೆಲವಿನೆಡೆಗೆ ಒಯ್ಯುತಲಿರಲಿ ತಿಳಿದಿರಲಿ; ಬರುವವೇನೋ ನೂರಾರು ಸೋಲುಗಳು ಕಲ್ಲು-ಮುಳ್ಳಿಲ್ಲ...

ಯತಿವರನೆ ನಿನ್ನ ಹೆಸರಿಂದು ಉಸಿರಾಗಿಹುದು ನಿನ್ನ ತಪೋಬಲದಿ ಬೆಳಗಿರುವೆ ನಾಡನೆಲ್ಲವನು ಸುಖ-ದುಃಖ ಸಮನಾಗಿಸಿದ ಸ್ಥಿತಪ್ರಜ್ಞ ನೀನು! ಕಡುವಿರ ಸಿದ್ಧಯೋಗಿ ಶ್ರೀ ಕಾಡಸಿದ್ದೇಶ್ವರಾ!! ಈ ಪುಣ್ಯ ಭೂಮಿಯಲಿ ಪುಲ್‌ಪೊದರು ಬೆಳೆದು ಹಿಂದೊಮ್ಮೆ, ಪ್ರಕೃತಿ ...

ನೀರುಣಿಸಿ ಸಲುಹಿದರು ಹುಳುಹತ್ತಿ ಬೆಳೆಯಲಿಲ್ಲಾ ! ತಿಳಿಯಲಿಲ್ಲೆನಗೆ ಮಣ್ಣಲ್ಲಾ ಉಸುಕೆಂದು ಈ ನೆಲಾ! ಹೃದಯ ಬಟ್ಟಲೊಳು ಭಕ್ತಿ ಹಾಲು; ದೇವನೊಲಿಯಲಿಲ್ಲಾ! ಬಟ್ಟಲೇ ಎಂಜಲಾಗಿಹುದು; ಮಾಯೆ ಈ ಹೃದಯವಲಾ! ಚಲುವಾದ ಕಾಯಾಯ್ತು; ತಿನ್ನಲಾಸೆ ಮನಕಾಯ್ತು ಮರವ...

ಸೃಷ್ಟಿ ಚಿಮ್ಮಿದೇ; ಪಕ್ಕ ಬಡೆದು ಹಾರಿದೆ ಅತ್ತಲಿತ್ತ ಸುತ್ತು ಓಡಿ ಉಕ್ಕಿ ಹರಿದಿದೆ ಮೊಗ್ಗೆಯಲ್ಲಿ ನೆಗೆದು ಪಕಳೆರೂಪ ತಾಳಿದೆ ಅಗ್ಗ ಹುಲ್ಲಿನಲ್ಲಿ ಸಗ್ಗ ಸೊಗವ ತುಂಬಿದೆ ಭ್ರಮರವಾಗಿ ಬಂದಿದೆ, ಹೂವಾಗಿ ಕರೆದಿದೆ ಭ್ರಮೆಗೆಟ್ಟು ಭ್ರಮಿಸುವಾ ಕಬ್ಬಿಗ...

ಸಾಗರದ ಆಚೆಗಿನ ಕೂಗೊಂದು ಕೇಳುತಿದೆ ಆರದೋ ಏನೊ? ಯಾರಕರೆಯುತಿಹುದೇನೊ ? ತೆರೆಯ ಮೇಲೇರಿ ಬೀಸುಗಾಳಿಯಲಿ ಈಸುತಿದೆ ಬರುತಿದೆ; ಬಿಡದೆ ಬರುತಿದೆ; ಮುಗಿಯಲಿಲ್ಲವೇನೋ ? ಆರಕೂಗಾರ ಕರೆಗಾಗಿರಬಹುದೀ ಕಾರಿರುಳಿನಲಿ ? ಮುಗಿಲ ಮಾಳಿಗೆಯಲಿ ಮಿನುಗು ಚುಕ್ಕೆಗಳ...

ಹೃದಯ ತುಂಬಿ; ದುಂಬಿಯಾಗಿ ರಸಿಕವರ್ಣ ಮೂಡಲಿ; ಒನಪುಗರಿಯು ಚಿಗುರಲಿ ಅಂತರಂಗ ಹರ್ಷ ಕೂಗಿ ಸೃಷ್ಟಿ ಸ್ಪುರಿಸಿ ರಾಗ ಮಾಡಲಿ; ಹೃದಯ ತಾಳ ಹಾಕಲಿ ಪಕ್ಕ ಬೀಸಿ, ಮುಂದೆ ಈಸಿ ಚುಕ್ಕೆಯಡೆಗೆ ಓಡಲಿ, ರವಿಯ ಒಡನೆ ಆಡಲಿ ಮೇಲೆ ಏರಿ, ಹೃದಯ ಸೋಸಿ ಸತ್ಯ ಶಿವನ ಕ...

1...11121314

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....