
ಬೆಚ್ಚಿಸುವುದೇಕವನ ಬಿಮ್ಮನೆ ಕುಳಿತವನ ಸುಮ್ಮನೆ ಬಾಗಿಲ ತೆರೆದು ಕಿಂಡಿ ಸಾಲದೆ ನೋಡುವೊಡೆ ಗಿಂಡಿ ಸಾಲದೆ ಸಿಂಪಿಸುವೊಡೆ ಕಿರಣ ಸಾಲದೆ ಬೀರುವೊಡೆ ಕಿಟಕಿ ಸಾಲದೆ ಹಾಯುವೊಡೆ ಕಂಬನಿ ಸಾಲದೆ ಹರಿಯುವೊಡೆ ಕಿರುನಗೆ ಸಾಲದೆ ಸುರಿಯುವೊಡೆ ಎಬ್ಬಿಸುವುದೇಕವನ...
ಕಾಲ ನನ್ನನು ಹೇಗೊ ಹಾಗೆ ಒಲವನೂ ಕಾಡಿ ಕ್ರೂರ ಹಸ್ತಗಳಿಂದ ಹಿಡಿದು ಹಿಂಡುವನು; ಮೈಯ ನೆತ್ತರು ಬತ್ತಿ ಹಣೆಯಲ್ಲಿ ಗೆರೆಮೂಡಿ ನನ್ನ ಪ್ರೇಮಿಯ ಪ್ರಾಯಭರಿತ ಹೊಂಬೆಳಗು ಕಡಿದಾದ ಕಾಲದಿರುಳಲ್ಲಿ ಮರೆಯಾಗುವುದು; ಚೆಲುವ ಪ್ರಭುವಲ್ಲಿ ಮೇಳೈಸಿರುವ ಸಿರಿಯ ಪ...
ಅಪರಿಮಿತ ತಾರೆಗಳ ಅನುದಿನವು ಆಗಸದಿ ಎಣಿಸುವುದು ನನ್ನ ಧರ್ಮ ಎಣಿಸುವೆನು ಗುಣಿಸುವೆನು ಅಳೆಯುವೆನು ಎಳೆಯುವೆನು ಯಾಕೆ ಏನೆಂದು ನಾನು ತಿಳಿಯೆ ನಿಂತಿವೆಯೊ ಚಲಿಸುತಿವೆಯೊ ಮಿಂಚುತಿವೆಯೊ ಜ್ವಲಿಸುತಿವೆಯೊ ವರ್ಧಿಸುತಿವೆಯೊ ಕ್ಷಯಿಸುತಿವೆಯೊ ಹಾಗೆ ಅಲ್ಲ...
ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ ಧಾವಿಸುತ್ತಿವೆ ನಮ್ಮ ಗಳಿಗೆಗಳು ಗುರಿ ಕಡೆಗೆ ; ಮುಂಚೆ ಸರಿದುದರ ಎಡೆದೊರೆತು ಹಿಂದಿನ ಕ್ಷಣಕೆ ಒಂದೆ ಸಮ ಸ್ಪರ್ಧೆಯಲಿ ಮುಂದೊಡುತಿವೆ ಜೊತೆಗೆ. ಕಣ್ತೆರೆದ ಬದುಕು ಬೆಳಕಿನ ಪಾತ್ರದಲಿ ಚಲಿಸಿ, ತೆವಳುತ್ತ ...
ನನ್ನನ್ನು ಮೊದಲು ನಿನ್ನ ಗುಲಾಮನಾಗಿಸಿದ ದೈವ ನನಗೊಂದು ಕಟ್ಟಳೆಯನ್ನು ವಿಧಿಸಿತು, ನಿನ್ನ ಪ್ರಿಯ ಸುಖ ಸಮಯದಲ್ಲಿ ತಲೆಹಾಕದೆ ನೀನೆ ಕರೆಸುವ ತನಕ ತೆಪ್ಪನಿರು ಎಂದಿತು. ನಾನು ಸೇವಕ ತಾನೆ ? ಒಡೆಯ ವಿಧಿಸಿದ ವಿರಹ- ಕಾರಾಗೃಹದ ವಾಸ ಒಪ್ಪಿ ಬಾಳುತ್ತೇನ...













