ಒಬ್ಬ ದೊರೆ ಅಜಮದೇಶದ (ಪಾರಸಿ ದೇಶದ) ಸಾಮಾನ್ಯನೊಡನೆ ಒಂದು ನಾವೆಯನ್ನು ಹತ್ತಿದ. ಆ ಹುಡುಗ ಸಮುದ್ರವನ್ನು ನೋಡಿರಲಿಲ್ಲ. ಹಡಗಿನ ಅನುಭವ ಅವನಿಗೆ ಇರಲಿಲ್ಲ. ಅತ್ತು ಗೋಳಿಟ್ಟ. ಅವನ ಮೈಯೆಲ್ಲ ಅದುರಿ ನಡುಗುತ್ತಿತ್ತು. ದೋಣಿಯಲ್ಲಿದ್ದವರ ಹರುಷವೆಲ್ಲ ಹದಗೆಟ್ಟು ಹೋಯಿತು. ದೊರೆಗೆ, ಅವನ ಪರಿವಾರದವರಿಗೆ ಯಾರಿಗೇನೂ...

ನನ್ನ ಕವಿಯೆಂದೆನುವ ಮೆಚ್ಚುಮಾತೇಕೆ? ಪದದ ಸಮ್ಮಿಳನವೋ ಈ ನನ್ನ ಕವಿತೆ! ಎದೆಯ ಉಮ್ಮಳವಿದುವೆ, ಅದು ನಿನ್ನ ಕುರಿತೆ ಕೊರಗುತಿಹೆ ಕೊರಳಿದಕೆ ಹೊನ್ ಪದಕವೇಕೆ? ಇದು ಕವಿತೆಯಹುದೆನುವ ಮಾತು ಸರಿಯಲ್ಲ -ಕವಿಯು ನಾನಲ್ಲ- ಇದು ನಿನ್ನ ನೂರಾರು ಛಾಯೆಗಳ ಒರೆ...

ಪ್ರಿಯ ಸಖಿ, ಗಳಿಗೆ ಗಳಿಗೆಗೂ ಹೊಸ ಹೊಸರೀತಿಗೆ ಈ ಜಗವೋಡುತಿದೆ ಹಳತ ನೋಡಿ ತಾ ಕಿಲಕಿಲ ನಗುತಲಿ ಓ ಜಗವೋಡುತಿದೆ ಕವಿ ಪುತಿನ ಅವರ ‘ಹೊಸಹಾಡು’ ಕವನದ ಈ ಸಾಲುಗಳನ್ನು ಕೇಳಿದ್ದೀಯಲ್ಲವೇ? ಬದುಕು ನಿಂತ ನೀರಲ್ಲ ಅದು ನಿರಂತರ ಹೊಸತರ ಅನ್ವೇಷಕ.  ರೀತಿನೀ...

ಹುಲ್ಲು ಹೇಗೆ ಹಾಲಾಗುತ್ತೆ ಹಸುವಿನ ಹೊಟ್ಟೇಲಿ? ಹಕ್ಕಿಗೆ ಉಸಿರು ಕಟ್ಟೋಲ್ವಾಂತ ಪುಟ್ಟನೆ ಮೊಟ್ಟೇಲಿ? ಮೋಡದ ತುಂಬ ನೀರಿದ್ರೂನೂ ಅದ್ಹೇಗೆ ತೇಲತ್ತೆ? ರಾತ್ರೋ ರಾತ್ರಿ ಸೀ ಹಾಲೇಕೆ ಹುಳಿ ಮೊಸರಾಗುತ್ತೆ? ದೇವ್ರೇ ಇದೆಲ್ಲ ಮಾಡ್ತಾನಂತೆ ಕಷ್ಟ ಇಲ್ದೇನ...

ಮಹಾಭಾರತದ ಮಹಾಮುನಿಗಳಲಿ ದೂರ್ವಾಸ ಅಪೂರ್ವ ನಿನ್ನ ಮಹಿಮೆ. ವ್ಯಾಸ, ಕುವರವ್ಯಾಸ ಕಾಲ ಶಿಲೆಯಲ್ಲಿ ಕಡೆದಿಹರು ನಿನ್ನ ಅಶಾಂತ ಗ್ರೀಷ್ಮ ಮಧ್ಯಾಹ್ನ ಮೂರ್ತಿಯನು. ಆರ್ಯಾವರ್ತ ಒಂದು ಕಾಲದಲಿ ಆಶ್ರಮ ನಿಯಮ ಹದಗೆಟ್ಟು ತ್ಯಾಗದ ಮುಖದ ಮೇಲೆ ಭೋಗದ ಬಂಗು ಬರ...

ಯಾರ ಕಂಡು ಹೆದರಿ ಓಡುವೆ? ಯಾರ ಹಿಡಿಯಲು ಸರ್‍ರ ಸಾಗುವೆ? ಒಂದೆ ದಾರಿಯೊಳೆಂದು ನಡೆಯುವೆ- ಎಲ್ಲಿ ನಿಲ್ಲುವಿ ಹೇಳೆಲೊ? ಬೆಟ್ಟು ಅಗಲದ ದಾರಿ ಮಧ್ಯದಿ ಕಡಿದ ಬಯಲಿನ ಹೊಂಡ ನಡುವಲಿ ಕಂಡ ಕಂಡ ತಗ್ಗು ತಳದಲಿ- ಎಲ್ಲಿ ಮುಂದಕೆ ಹರಿಯುವೇ? ಹನಿಯ ಜಿನುಗಿಸಿ...

ತನು ನಷ್ಟವಾದರೇನಯ್ಯ, ಮನ ನಷ್ಟವಾಗದನ್ನಕ್ಕ? ವಾಕ್ಕು ನಷ್ಟವಾದರೇನಯ್ಯ, ಬೇಕುಬೇಡೆಂಬುದನಳಿಯದನ್ನಕ್ಕ? ಅಂಗ ಸುಖ ನಷ್ಟವಾದಡೇನಯ್ಯ, ಕಂಗಳ ಪಟಲ ಹರಿಯದನ್ನಕ್ಕ? ಮನ ಮುಗ್ಧವಾದಡೇನಯ್ಯ, ಅಹಂಮೆಂಬುದ ಬಿಡದನ್ನಕ್ಕ? ಇವೆಲ್ಲರೊಳಗಿರ್ದವೆಲ್ಲ ನೆನಿಸಿಕೊಂ...

ಉತ್ತರ ಧೃವಕ್ಕೆ ಹೊಂದಿಕೊಂಡಿರುವ ನೆದರ್‌ಲ್ಯಾಂಡಿನ ಒಳನಾಡಿನ ಹಳ್ಳಿಯೊಳಗೆ ಹೊಕ್ಕಾಗ – ಮನಸ್ಸು – ದೇಹ ಎಲ್ಲ ನನಗರಿಯದೇ slow motion pictureದಂತಾಗಿ ಹಗುರಾಗಿ ಹಕ್ಕಿಯಾಗಿ ಹಾರಾಡಿತು. ಧರಗಿಳಿದು ಬಂದ ಸ್ವರ್ಗದೊಳಗೆ ಅದೇ ಮಳೆಯಾಗ...

ಒಮ್ಮೊಮ್ಮೆ ಎನಿಸಿವುದು ಜೀವವಾರಿದಮೇಲೆ ಸುಖಸ್ವಪ್ನಗಳ ಬಿಂಬ ಮೂಡುವುದು ಎಂದು, ಕೊಳದ ನೀರಲೆಯಳಿದು ಮೌನದಲಿ ಮಲಗಿರಲು ಸೌಂದರ್ಯದಾಗಸವ ಬಿಂಬಿಸುವ ತೆರದಿ! ಆದರೆಂತೋ ಏನೊ! ಅಂತಾದರೆನಿತುಸುಖ, ಬಾಳದು ಸ್ವಪ್ನವನು ಮರೆಯಬಹುದಾಗ! ಜೀವದೊಳಗಿಲ್ಲದುದ ಸಾವ...

ಪ್ರಿಯ ಸಖಿ, ಕೆಲವರಿಗೆ ಸದಾ ಉಪದೇಶ ನೀಡುವ ಖಯಾಲಿ. ಯಾರು ಕೇಳಲಿ ಬಿಡಲಿ ಉಪದೇಶ ನೀಡುವ ಸಂದರ್ಭವಿರಲಿ ಬಿಡಲಿ, ಉಪದೇಶ ಕೇಳುವವನು ಅರ್ಹನಿರಲಿ ಬಿಡಲಿ ಉಪದೇಶಿಸುತ್ತಿರುವುದು ಅಂಥವರ ಹವ್ಯಾಸ. ಇಂತಹ ಚಟವನ್ನು ಕಂಡ ಸರ್ವಜ್ಞ ಹೀಗೆ ಹೇಳುತ್ತಾನೆ. ಕೇಳ...

ಹಣ್ಣು ಮರಗಳ ಮುಡಿಯಲ್ಲಿ, ಬೇರು? ಅಡಿಯಲ್ಲಿ, ಬಂಗಲೆ ಬೆಚ್ಚನೆ ಬಿಸಿಲಲ್ಲಿ, ಪಾಯ? ತಳದಲ್ಲಿ. ಚಿನ್ನ ದೊಡ್ಡೋರ್ ಮೈಯಲ್ಲಿ, ಅದಿರು? ನೆಲದಲ್ಲಿ. ನದೀ ನೀರು ಬಯಲಲ್ಲಿ ಮರಳು? ತಳದಲ್ಲಿ ಬೇರು ಪಾಯ ಅದಿರು ಮರಳು ಯಾಕೆ ಕಾಣೋಲ್ಲ? ದುಡಿಯೋ ಹಿರಿಯರೆ ಹಾ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...