“ಶಿವನಿಗ್ಯಾಕೆ ಮೂರ್ ಕಣ್ಣು?” “ಅವನು ದೇವ್ರಲ್ವ?” “ಲಕ್ಷ್ಮೀಗ್ಯಾಕೆ ಅಷ್ಟೊಂದು ಕಯ್?” “ಅವಳೂ ದೇವ್ರಲ್ವ?” “ಬ್ರಹ್ಮಂಗ್ ನಾಕ್‌ತಲೆ ಯಾಕಮ್ಮ?” “ವಿಷ್ಣೂ ಮಗನಲ್ವ...
ಎಳೆದೂ, ಎಳೆದೂ ಇರುಳು, ತೂಗಿ ತಡೆದೂ ಬೆಳಗು, ನನ್ನೀ ಕೈಹಿಡಿದವಳು ಹಾಸಿಗೆ ಹಿಡಿದಿರಲು. ಓಡಿಸಲಳವೇ ಚಿಂತೆ, ಬಿಡುವೇ ಬಳಲಿಕೆಗೆ, ನನ್ನೀ ಜೀವದ ಕಣ್ಣು ಹಾಸಿಗೆ ಹಿಡಿದಿರಲು? ಎಳೆದೂ, ಎಳೆದೂ…. ಭರವಸೆ ಒಂದೂ ಇಲ್ಲ; ಅಂಜಿಕೆ ಭಯವೇ ಎಲ್ಲ. ಕಣ್...
ಪಡುವಣ ದಿಗಂತದಲಿ ಅಗ್ನಿದೇವನ ಒಂದು ಕಾಲ್ಚೆಂಡು ಮೇಲ್ಹಾರಿ ಕೆಳಬೀಳ್ವುದೊ! ಬ್ರಹ್ಮಗಿರಿ ಎಂದೆಂಬ ಬೆಟ್ಟದಾ ಅರುಗಾಗಿ ದಿನಕರನು ಇಣಿಕಿಣಿಕಿ ಮರೆಸೇರ್ವನೊ! ಎಲ್ಲಿಂದ ಯಾವೆಡೆಗೆ? ಯಾವೂರು ಪೋಗ್ವನೊ ಅಗ್ನಿಯಾ ಚಂಡು ಈ ಕೆಂಬಣ್ಣದೀ; ಪಡುವಣದ ಪ್ರಾಂತದ...
ನಾನೊಂದು ಹಾಳೂರಿಗೆ ಹೋದರೆ, ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು. ಹುಲಿಕರಡಿ ಅಡ್ಡಲಾದವು. ಇವ ಕಂಡು ನಾ ಹೆದರಿಕೊಂಡು, ನನ್ನ ಕೈಗೊಂದು ಕಲ್ಲು ತಕ್ಕೊಂಡು ನೋಡುತ್ತ ಬರುತಿರಲು, ಆ ನಾಯಿಗಳು ಓಡಿದವು. ಹುಲಿಕರಡಿಗಳೂ ಅಲ್ಲಿಯೇ ಬಯಲಾದವು. ಆ ಊರು ನಿ...
ಮೋಡ ಬಸಿರಿನೊಳಗೆ ಹೂತಿಟ್ಟ ಬಯಕೆಗಳು ಒಂದೊಂದಾಗಿ ಸುಡುತ್ತ ಬೂದಿಯಾಗುವಾಗ ಫಳಾರನೆ ಹೊಡೆಯುವ ಸಿಡಿಲಿನ ಶಬ್ದಕ್ಕೆ ಹೊಟ್ಟೆಯೊಡೆದು ಹನಿ ಹನಿಗುಡುತ್ತ ಸುರಿಯುತ್ತಿದ್ದಂತೆಯೇ ತೊಳೆಯುತ್ತದೆ ಹಕ್ಕೆ ಗಟ್ಟಿದ ಮನಸನ್ನು ಮಳೆ ಎಂದರೆ ಪ್ರೀತಿ ನನಗೆ ̵...
ನೆರಳನರಸುವ ಕೂಸು ತನ್ನ ಎಳೆ ಕೈಗಳಲಿ ಅದ ಹಿಡಿದು ತನ್ನೊಡನೆ ಆಟಕುಪಯೋಗಿಸುವ ಎಳೆ ಚಪಲಕೀಡಾಗಿ-ಹಿಗ್ಗಿನಲಿ ಓಡುತಲಿ ಅದರೆಡೆಗೆ ನಡೆದಾಗ, ನೆರಳು ಕೈಗಳ ಹಿಡಿತ ತಪ್ಪಿಸುತ ಜಾರಿರಲು, ಕಣ್ಣೀರ ಕರೆಯುತ್ತ ತಾಯ ಮಡಿಲಲಿ ತನ್ನ ದುಗುಡ ಹರಿಸುವ ಹಾಗೆ, ಸಂತ...
ಪ್ರಿಯ ಸಖಿ, ನನ್ನಿಂದೇನು ಸಾಧ್ಯ ? “ನಾನು ಅತ್ಯಂತ ನಿಕೃಷ್ಟ ಜೀವಿ” ‘ನನ್ನಿಂದ ಯಾರಿಗೂ ಏನೂ ಪ್ರಯೋಜನವಿಲ್ಲ’ ಎಂದು ಹಲುಬುವ ನಿರಾಶಾವಾದಿಗಳನ್ನು ನಮ್ಮ ಸುತ್ತಮುತ್ತ ಕಾಣುತ್ತಲೇ ಇರುತ್ತೇವೆ. ಇಂತಹವರನ್ನು ಕಂಡೇ ಇರಬೇಕು ಕವಿ ಎಸ್....
ಅಪ್ಪ ಅಮ್ಮ ಎಲ್ಲಾರ್‍ಗಿಂತ ಅಜ್ಜಿ ನಂಗೆ ಇಷ್ಟ ಅಜ್ಜಿಗೂನು ಅಷ್ಟೆ ನಾನು ಇಲ್ದೆ ಹೋದ್ರೆ ಕಷ್ಟ. ಗಲ್ಲ ಹಿಂಡಿ ಮುದ್ದು ಮಾಡಿ ಚುಕ್ಕು ಬಡಿದು ತೊಡೇಲಿ, ನಿದ್ದೆ ಬರ್‍ಲೇ ಬಿಡ್ತಾಳಜ್ಜಿ ಕಥೆ ಹೇಳ್ತಾ ಕಡೇಲಿ! ನನ್ ಗೊಂಬೇಗೂ ಸ್ನಾನ ಮಾಡ್ಸಿ ಬಟ್ಟ ತೊಡ...
“ಗಂಡಯ್ಯ, ಗಂಡಯ್ಯ, ಬಿಡು ನಿನ್ನ ಚಿಂತೇಯ? ಪರದಾಟ ಸಾಕಿನ್ನು, ಮಹರಾಯ! ನಾ ನಿನ್ನ ಕೈಹಿಡಿದ ಹೆಂಡತಿಯೆ ಆಗಿರಲಿ,- ನಿನ್ನ ಮನೆಯಾಳಲ್ಲ ಸ್ವಾಮಿ !” ಎರಡರಲಿ ಒಂದೇನೊ ಆಳಾಗಿ ಇರಬೇಕು, ನನ್ನ ಚಿನ್ನಾ, ಓ ನನ್ನ ಚಿನ್ನಾ! ಆ ಆಳು ಗಂಡಿರಲ...
ಕರ್ಮದ ಬಾಳಿಗೆ ಮಣ್ಣಿಟ್ಟು ನೋಡಿದೆ ಜೀವದ ಒಳಗುಟ್ಟು! ಧರ್ಮಕೆ ಕಸಿಯನು ನಾ ಮಾಡಿ ತಿಂದೆನೊ ಪಾಪದ ಹಣ್ಣು ಇಡಿ; ಮೂಡಲ ಸೂರ್ಯನು ಅಲ್ಲಿರನು ಮನುಜನು ಬುದ್ದಿಯ ತಾಳಿರನು! ಗಂಟೆಯ ಮುಳ್ಳದು ತಿರುಗಾಡಿ ಲೋಕಕೆ ಕಲಿಪುದು ಬಲುಮೋಡಿ. ಸುತ್ತಲು ಮಂಜಿನ ನೆನ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...





