ಕಾಯಕದ ಕಟ್ಟಳೆ

” ಇನ್ನು ಕಾಯಕದ ಕಟ್ಟಳೆಯನ್ನು ಅರಿತುಕೊಳ್ಳುವುದು ಅತ್ಯಾವಶ್ಯಕ ವೆಂದು ತೋರುತ್ತಿದೆ. ಆದ್ದರಿಂದ ಆ ವಿಷಯವನ್ನು ಸುಲಲಿತವಾಗಿ ವಿವರಿಸಬೇಕೆಂದು ಪ್ರಾರ್ಥಿಸುತ್ತೇನೆ” ಎಂದು ಸಹಸ್ರಮುಖಿಯಾದ ಜನಜಂಗುಳಿಯು ಅಂಗಲಾಚಿ ಕೇಳಿಕೊಳ್ಳಲು, ಸಂಗಮಶರಣನು ತನ್ನ ಕರ್ತವ್ಯಕ್ಕೆ ಅಣಿಯಾಗುವನು.

-” ಕಾಯಕವೆಂದರೆ ಕಾಯದ ಪರಿಶ್ರಮದಿಂದ ಕಾಯವನ್ನು ಸಂರಕ್ಷಿಸುವುದು ಹಾಗೂ ಲೋಕದ ರಿಣವನ್ನು ತೀರಿಸುವುದು.

ಕಾಯಕವೆಂದರೆ ಪರಮೇಶ್ವರನ ಸಲುವಾಗಿ, ಪರಮೇಶ್ವರನ ಪ್ರೀತ್ಯರ್ಥ ವಾಗಿ ಪರಮೇಶ್ವರನ ಕಾರ್ಯಮಾಡುವುದು.

ಕಾಯದ ಕಳವಳವನ್ನು ಕಳೆಯುವದಕ್ಕಾಗಿ ನಡೆಸುವ ಘೋರ ಹೋರಾಟವಲ್ಲ, ಕಾಯಕವೆಂದರೆ. ಹೆಂಡಿರು-ಮಕ್ಕಳನ್ನು ಹೊರೆಯುವದಕ್ಕಾಗಿ ಅಂಡಲೆಯುವ ಖಟಾಟೋಪವಲ್ಲ ಕಾಯಕವೆಂವರೆ. ಕಾಯಕವೆಂದರೆ ಪರಮಾತ್ಮ ಸೇವೆ; ಪರಮಾತ್ಮ ಪೂಜೆ.

ಬಾಯಿಂದ ಪರಮಾತ್ಮನನ್ನು ಪ್ರಾರ್ಥಿಸಿ ಪೂಜಿಸುವಂತೆ ಕೈಯಿಂದ ಮಾಡುವ ಪ್ರಾರ್ಥನೆಯೇ ಕಾಯಕವೆನಿಸುತ್ತದೆ.

ಮಾಡುವ ಕಾಯಕಪು ಪರಮಾತ್ಮನ ಪ್ರೀತ್ಯರ್ಥವಾಗುಪುದು ಹೇಗೆ, ಮಾಡುವ ಕಾಯಕವು ಪರಮೇಶ್ವರನ ಕಾರ್ಯವಾಗುವುದು ಹೇಗೆ ?

ಕಾಯಕದಲ್ಲಿ ಶ್ರೇಷ್ಯ, ಕನಿಷ್ಠ ಎಂದು ತುಲನೆ ಮಾಡುವುದಾಗಲಿ, ಹಿರಿದು ಕಿರಿದು ಎಂದು ತಾರತಮ್ಯ ಮಾಡುವುದಾಗಲಿ ಸಲ್ಲದು.

ಕೈಕೊಂಡ ಕಾಯಕದಿಂದ ಅವನ ಹಿರಿಮೆ-ದೊಡ್ಡತನಗಳ ನಿರ್ಣಯ ವಾಗಕೂಡದು. ಅದನ್ನು ಮಾಡುವ ಮನಸ್ಸಿನಿಂದ ಕರ್ತೃವಿನ ಹಿರಿಮೆ-ದೊಡ್ಡತನಗಳ ನಿರ್ಣಯವಾಗುವುದು ಯೋಗ್ಯವು.

ಪೂರ್ವಾಶ್ರಮದಲ್ಲಿ ರಾಜನಾದ ಮಾರಯ್ಯನು ಕಲ್ಯಾಣಕ್ಕೆ ಬಂದ ಬಳಿಕ, ಕಟ್ಟಗೆಯ ಹೊರೆಹೊತ್ತು ತಂದು ಮಾಡುವ ಕಾಯಕವನ್ನು ವಹಿಸಿ ದನು. ಹಾಗೆ ಮಾಡುವುದಕ್ಕೆ ಆತನ ಅಂತರಂಗದ ಅರಸನು ಅಪ್ಪಣೆ ಕೊಟ್ಟಿದ್ದನೆಂದೇ ತಿಳಿಯಲು ಅಡ್ಡಿಯಿಲ್ಲ. ಬಾಳಿನ ವರಿಸ್ಥಿತಿ ಹೆದಗಟ್ಟು ಮಾರಯ್ಯನು ಮೋಳಿಗೆಯ ಕಾಯಕವನ್ನು ಅನಿವಾರ್ಯವಾಗಿ ಕೈಕೊಂಡವ ನಲ್ಲ. ಯಾವ ಕಾಯಕದಿಂದ ಪರಮಾತ್ಮನ ಪೂಜೆಮಾಡಿದಂತೆ ಏಕಾಗ್ರತೆ, ಶಾಂತಿ, ಆನಂದಗಳು ತಲೆದೋರುವವೋ ಅದೇ ಕಾಯಕವನ್ನು ಕೈಕೊಳ್ಳುವುದು ಯೋಗ್ಯವೆಂದು ಸದಸದ್ವಿವೇಕವು ತೀರ್ಮಾನಿಸಿಕೊಡುವದು

ಚಂದ್ರಯ್ಯನು ನುಲಿಯ ಕಾಯಕ ಕೈಕೊಂಡಿದ್ದಾಗಲಿ, ಕಕ್ಕಯ್ಯನು ಡೋಹರ ಕಾಯಕಕ್ಕೆ ಒಲಿದಿದ್ದಾಗಲಿ, ಮಾಚಯ್ಯನು ಮಡಿವಳ ಕಾಯಕ ವನ್ನು ಒಪ್ಪಿಕೊಂಡಿದ್ದಾಗಲಿ ಅಂತರಂಗದ ಪ್ರಭುವಿನ ಅಪ್ಪಣೆಯಿಂದಲೇ ಎಂಬುದನ್ನು ಗ್ರಹಿಸಿಕೊಳ್ಳ ತಕ್ಕದ್ದು. ಕಲ್ಯಾಣ ಬಸವಣ್ಣನು ಹೊಲೆ ಹೊಲೆಯರ ಮನೆಯ ಕೈಕೂಲಿ ಮಾಡುವುದಕ್ಕೂ ಸಿದ್ಧನಾಗಿದ್ದವನು. ಆದರೆ
ಕೂಡಲಸಂಗನುದೇವನ ಅಪ್ಪಣೆಯು ಬಲವತ್ತರವಾದುದರಿಂದ ಅವನು ಅಮಾತ್ಯಕಾಯಕವನ್ನು ವಹಿಸಬೇಕಾಯಿತು.

ಕಾಯಕದಲ್ಲಿ ಕೊಡಗಿದಾಗ ಆಗುವ ಮಾನಸಿಕ ಪೂಜೆ ಒಂದು ಹಂತವಾದರೆ, ಅದರಿಂದ ದೊರೆತ ಕೂಲಿಯಿಂದ ಪ್ರಕಟ ಪರಮೇಶ್ವರನಿಗೆ ಸಲ್ಲಿಸುವ ಸೇವೆ ಇನ್ನೊಂದು ಹಂತವೆನಿಸುತ್ತದೆ.

ಕಾಯಕದಲ್ಲಿ ತೊಡಗಿದವನ ಮುಂದೆ  ಪ್ರತ್ಯಕ್ಷ ದೇವರು ಬಂದು ನಿಂತರೂ  ಸಹ ನೋಡಲಿಕ್ಕಾಗದ ಅಚಲತೆಯೂ, ಕಾಯಕದಲ್ಲಿ ತೊಡಗಿದವನ ಆಶ್ರಯನನ್ನು ತೊರೆದು ಪ್ರಾಣಲಿಂಗವು ಅಗಲಿದರೂ ಲಕ್ಷ್ಯಿಸಲಿಕ್ಕಾಗದ ಅವಿಕಲತೆಯೂ ಇರಬೇಕಾಗುತ್ತದೆ.

ಕಾಯಕದಲ್ಲಿ ನಿರತನಾವಡೆ ಗುರುದರ್ಶನವಾದರೂ ಮರೆಯಬೇಕು.
ಲಿಂಗಪೂಜೆಯಾದರೂ ತೊರೆಯಬೇಕು.
ಜಂಗಮ ಮುಂದಿದ್ದರೂ ಹಂಗುಹರಿಯಬೇಕು.
ಕಾಯಕವೇ ಕೈಲಾಸವಾದ ಕಾರಣ,
ಅಮಳೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು.

ಗುರುದರ್ಶನದ ಫಲಕ್ಕಿಂತ ಮಿಗಿಲಾದ ಫಲವು ಕಾಯಕದಲ್ಲಿ ನಿರತ ನಾದವನಿಗೆ ದೊರಕೊಳ್ಳುವದು. ಲಿಂಗಪೂಜೆ- ಯಿಂದ ಲಭಿಸುವ ಆನಂದಕ್ಕಿಂತ ಹಿರಿದಾದ ಆನಂದವು ಕಾಯಕ ನಿರತನಾದನನಿಗೆ ಪ್ರಾಪ್ತನಾಗುವದು. ಪ್ರತ್ಯಕ್ಷ ಪರಮಾತ್ಮನಿಂದಲೂ ಪ್ರಾಪ್ತವಾಗದ ಶಾಂತಿ-ಜ್ಯೋತಿ-ಆನಂದಗಳು ಕಾಯಕದಲ್ಲಿ ನಿರತನಾದವನಿಗೆ ಲಭ್ಯ- ವಾಗುತ್ತಿದ್ದರೆ, ಬೇರೆ ಕೈಲಾಸವಿನ್ನೇಕೆ ಬೇಕು? ಅಂಥ ದಿವ್ಯ ಕೈಲಾಸವನ್ನು ಸಹ ತಂದಿಳಿಸುನ ಕಾಯಕವು ಶಾರೀರಿಕ ಪೂಜೆ-ಪ್ರಾರ್ಥನೆ ಆಗಲಾರದೇ?

ಪರಾವಲಂಬಿಯಾದ ಜೀವನವು ಯಾರಿಗೂ ಸಲ್ಲದು. ಅದು ಭಕ್ತನಿಗೂ ಭೂಷಣವಲ್ಲ, ಗುರುವಿಗೆ ಒಪ್ಪುವಂಥದಲ್ಲ. ಪ್ರತ್ಯಕ್ಷ ಅಮಳೇಶ್ವರ ಲಿಂಗನಿಗೂ ಕಾಯಕಬೇಕು. ಕಾಯಕವಿಲ್ಲದನನು ಭಕ್ತನೂ ಆಗಲಾರನು. ಗುರುವಂತೂ ಆಗಲೇ ಆರನು. ಕಾಯಕವಿಲ್ಲದನನು ದೇವರೆಂತು ಆಗುವನು? ಮನುಷ್ಯನು ಮನುಷ್ಯನಾಗಿ ಉಳಿಯಬೇಕಾದರೂ ಕಾಯಕವೇ
ಮೊದಲು ಬೇಕಾಗುತ್ತದೆ.

ನೇಮವ ಮಾಡಿಕೊಂಡು ಭಕ್ತರ ಭವನಂಗಳಿಗೆ ಹೊಕ್ಕು
ಕಾಯಕನ ಬಿಟ್ಟು, ಹೊನ್ನು ಬೇಡಿಹೆನೆಂಬುದು
ಕಷ್ಟವಲ್ಲವೇ ಸದ್ಭಕ್ತಂಗೆ?
ಆ ಗುಣ ಅಮಳೇಶ್ವರ ಲಿಂಗಕ್ಕೆ ದೂರ.

ಈ ನೆಲದ ಮೇಲೆ ಕಾಯಕವಿಲ್ಲದೆ ಬದುಕುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಅವರಿಗೆ ಬದುಕುವ ಅಧಿಕಾರವೂ ಇಲ್ಲ. ಕಾಯಕವಿಲ್ಲದೆ ಬದುಕಲೆಳೆಸುವ ಜೀವಿಯ ಮನುಷ್ಯತ್ವವೇ ನಷ್ಟವಾಗುತ್ತಿರುವಾಗ ಭಕ್ತತ್ವವಾಗಲಿ, ಗುರುತ್ವವಾಗಲಿ ಅದೆಂತು ಉಳಿದು ಬರುವುದು? ಕಾಯಹೊತ್ತ ಜೀವಿಗೆ ಕಾಯಕವೇ ಲಕ್ಷಣ. ಅದೇ ಪ್ರಾಣದ ಪ್ರಕಟನೆ; ಪ್ರಾಣಲಿಂಗದ
ಪ್ರತ್ಯಕ್ಷತೆ.

ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ.
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲಹರಿವುದು.
ಜಂಗಮನಾದರೂ ಕಾಯಕದಿಂದ ವೇಷದ ಪಾಶ ಹರಿವುದು.
ಇದು ಚೆನ್ನಬಸವಣ್ಣ ಪ್ರಿಯ ಚಂಡೇಶ್ವರ ಲಿಂಗದ ಅರಿವು.

ಕಾಯಕವು ಕುಲದಕುರುಹೆಂದು ಕೆಲವರು ಭಾವಿಸುತ್ತಾರೆ. ಕಾಸಿದವನು ಕಮ್ಮಾರನಾಗುವವಲ್ಲದೆ, ಕಮ್ಮಾರ ಕುಲವನ್ನೇ ಅವನು ಕಟ್ಟಿದಂತಾಗಲಿಲ್ಲ. ಬೀಸಿದವನು ಮಡಿವಾಳನಾಗುವನಲ್ಲದೆ ಮಡಿವಳ ಜಾತಿಯನ್ನೇ ಅವನು ನಿರ್ಮಿಸಿದಂತಾಗಲಿಲ್ಲ. ಹಾಸನಿಕ್ಕಿ ಸಾಲಿಗನಾದ ಮಾತ್ರಕ್ಕೆ ಅದೊಂದು ಕುಲವೆಂದೇ ತೀರ್ಮಾನವಾಗಲಾರದು. ವೇದವನೋದಿ ಹಾರುವನೆನಿಸಿಕೊಂಡ ಮಾತ್ರಕ್ಕೆ ಅದೊಂದು ಜಾತಿಯಾಗಿ ನಿಲ್ಲಲಾರದು. ಲಿಂಗ ಸಂಗ ವನರಿತ- ವನೇ ಕುಲಜನು. ಅದನ್ನರಿಯದವನೇ ಕುಲಹೀನನು. ಕುಲಜರ ಜಾತಿ ಒಂದು; ಕುಲಹೀನರ ಜಾತಿ ಇನ್ನೊಂದು.

ದಾಸೋಹಕ್ಯಾಗಿ ಅಂದರೆ ಪ್ರಕಟ ಪರಮೇಶ್ವರನ ಸೇವೆಗಾಗಿ ಕಾಯಕ ಕೈಕೊಂಡವರೆಲ್ಲ ಲಿಂಗಸಂಗವನರಿತವರೇ ಅಹುದು. ಅವೆರೆಲ್ಲ ನಿಜವಾಗಿಯೂ ಕುಲಜರು. ಕುಲಜರು ಯಾವ ಕಾಯಕ ಕೈಕೊಂಡರೂ ಅದು ಪವಿತ್ರವೇ; ಅವನು ಪೂಜ್ಯನೇ. ಕುಲಜನು ಮಾಡಿದುದೆಲ್ಲವೂ ಪರಮತ್ಮ ಪೂಜೆಯೇ. ಕಾಯಕ ವಹಿಸಿದವನ ಮನೆಯಂಗಳದ ತುಂಬೆಲ್ಲ ಮೂವತ್ತು ಮೂರು ಕೋಟಿ ದೇವತೆಗಳು ನೆರೆದಿರುತ್ತಾರೆ. ಕಾಯದುಡಿಸುವ ಕಾಯಕ ನಡೆದಿರುವಲ್ಲಿ ಆತನ ಅಂಗೋಪಾಂಗಗಳೆಲ್ಲ ಯಜ್ಞಶಾಲೆಗಳೇ ಆಗಿರುತ್ತದೆ, ಕಾಯಕದಿಂದ ಉಪಜೀವಿಸುನ ಜೀವಿಯ ಕೈಶುದ್ಧ, ಮನಶುದ್ಧ, ನುಡಿಶುದ್ಧ, ನಡೆಶುದ್ಧ. ಅಂಥವರ ಸಹನಾಸದಲ್ಲಿ ಕೈಲಾಸದ ಕಮನೀ ಜೀವನವೇ ಸಂಗಳಿಸುವದು

ಕೃಷಿಕೃತ್ಯಕಾಯಕದಿಂದಾದಡೇನು ?
ತನುಮನ ಬಳಲಿಸಿ ತಂದು, ದಾಸೋಹವ ಮಾಡುವ
ಪರಮಸದ್ಭಕ್ತನ ಪಾದವ ತೋರಯ್ಯ ಎನಗೆ.
ಅದೆಂತೆಮೆ ಆತನ ತನುಶುದ್ಧ, ಆತನ ಮನಶುದ್ಧ,
ಆತನ ನಡೆಶುದ್ಧ, ನುಡಿಯೆಲ್ಲ ಪಾವನವು.
ಆತಂಗೆ ಉಪದೇಶವ ಮಡಿದಾತೆನೇ ಪರಮಸದ್ಗುರು.
ಅಂತಪ್ಪ ಸದ್ಭಕ್ತನ ಮನೆಯ ಕೈಲಾಸವೆಂದು ಹೊಕ್ಕು
ಲಿ೧ಗಾರ್ಚನೆಯ ಮಾಡುವ ಜಂಗಮನೇ ಜಗತ್ಪಾವನ.
ಇಂತಪ್ಪವರ  ನೆರೆನಂಬಿ ನಮೋನಮೋ ಎಂಬೆನಯ್ಯ
ಕೂಡಲಸಂಗಮದೇನಾ.

ಗಳಿಸುವಾಗ ಕಾಯಕ ನಿಧಾನವು ಪೂಜೆ, ದೈಹಿಕ ಪ್ರಾರ್ಥನೆಯೆನಿಸಿ ದರೆ ಗಳಿಕೆಯನ್ನು ಬಳಸುನಾಗ ಆ ದಾಸೋಹ ವಿಧಾನವು ಪ್ರಕಟ ಪರಮಾತ್ಮನ ಸೇವೆ ಆತ್ಮತೃಪ್ತಿಯೆನಿಸಬಲ್ಲವು. ದಾಸೋಹವಿಧಾನಕ್ಕಾಗಿ ಯಾವ ಕಾಯಕ- ವನ್ನಾದರೂ ಉಚ್ಚನೀಚನೆಂಬ ಭೇದಭಾನನ್ನರಿಯದೆ ವಹಿಸಿಕೊಳ್ಳುವುದು ವಾಸ್ತವಿಕ. ಮೇಲು-ಕೀಳು ಎನ್ನದೆ ಕಾಯಕ ಮಾಡಿ, ದಾಸೋಹಕ್ಯಾಗಿ ವಿನಿಯೋಗಿಸುವದಲ್ಲದೆ, ಹೆಂಡಿರು ಮಕ್ಕಳ ಸಲುವಾಗಿ ಅಲ್ಲ. ಅಂದ ಮಾತ್ರಕ್ಕೆ ಅವರನ್ನು ಕಣ್ಣು ಕಟ್ಟಿ ಅರಣ್ಯದಲ್ಲಿ ಬಿಟ್ಟು ಬರಬೇಕೆಂಬ ಅರ್ಥವಲ್ಲ. ಹೆಂಡಿರು ಮಕ್ಯಳು ಸಹ ಪ್ರಕಟ ಪರಮಾತ್ಮರೇ ಅಹುದು. ಅವರ ಪ್ರಾಣಸಂಬಂಧಕ್ಕಾಗಿ ಅವರ ಹೊಣೆ ಹೊರುವದಲ್ಲ; ಆತ್ಮಸಂಬಂಧಕ್ಕಾಗಿ ಅವರನ್ನು ಹೊರೆಯುವುದು.

ನಾನು ಆರಂಬ ಮಾಡಿವೆನಯ್ಯ ಗುರುಪೂಜೆಗೆಂದು.
ನಾನು ವ್ಯವಹಾರವ ಮಾಡುವೆನಯ್ಯ ಲಿಂಗಾರ್ಚನಗೆಂದು.
ನಾನು ಪರಸೇವೆಯ ಮಾಡುವೆನಯ್ಯ ಜಂಗಮದಾಸೋಹಕ್ಕೆಂದು
ನಾನಾವ ಕರ್ಮಮಾಡಿದಡೆಯೂ ನೀ ಕೊಡುವೆ
ಎಂಬುದರಿತಿರ್ಪೆನಾಗಿ
ನೀ ಕೊಟ್ಟ ದ್ರವ್ಯವ ನಿನಗಲ್ಲದೆ ಮತ್ತೊಂದಕ್ಕೆ ವ್ಯಯಮಾಡೆನು.
ನಿಮ್ಮ ಸೊಮ್ಮು ನಿಮಗೆ ಸಲ್ಲಿಸುವೆನು,
ನಿಮ್ಮಾಣೆ ಕೂಡಲಸಂಗಮದೇವಾ.

ಗುರುಪೂಜೆ, ಲಿಂಗಾರ್ಚನೆ, ಜಂಗಮದಾಸೋಹ ಮೊದಲಾದ ದೊಡ್ಡ ದೊಡ್ಡ ಹೆಸರು ಹೇಳುತ್ತ ಖರ್ಚಿನ ಎಣಿಕೆಯನ್ನು ಬೆಳೆಸಿ,ಅದಕ್ಕೆ ತಕ್ಕಂತೆ ದ್ರವ್ಯಸಂಗ್ರಹ ಮಾಡುಡವುದಕ್ಕೆ ನಿಂತರೆ ಕಾಯಕನೀತಿಯೇ ತಪ್ಪಿ ಹೋಗುತ್ತದೆ. ಬಹಳ ಖರ್ಚಿಗಾಗಿ ಬಹಳ ಗಳಿಕೆ. ಬಹಳ ಗಳಿಕೆಗಾಗಿ, ಬಹಳ ಪರಿಶ್ರಮ; ಬಹು ವಿಧ ಪರಿಶ್ರಮ. ಬಹು ವಿಧದಲ್ಲಿಯೂ ಬಹಳ
ವಾಗಿ ಪರಿಶ್ರಮ ಪಡುವುದು ಅನಿವಾರ್ಯವಾದರೆ ಅಲ್ಲಿ ನೋವು ಅನಿವಾರ್ಯ ವಾಗುತ್ತದೆ. ಆಶೆಬುರುಕುತನವು ಅಸಾಧ್ಯವಾಗುತ್ತದೆ. ಆಡಂಬರವು ಅಡಿಗಡಿಗೂ ಕಾಣಿಸಿಕೊಳ್ಳುತ್ತದೆ. ಜಗ್ಗಾಟದೊಡನೆ ಕಡಿದಾಟವೂ, ಬಡಿದಾಟ- ದೊಡನೆ ತೂರಾಟಪೂ ಸೇರಿಕೊಂಡು ದಾಸೋಹದ ಸಾವಿತ್ರ್ಯವೆಲ್ಲ ಹುಡಿಗೂಡುತ್ತದೆ.

ಕುಂದಿಸಿಕುಂದಿಸಿ, ಬಂಧಿಸಿ ನೋಯಿಸಿ,
ಕಂಡಕಂಡವರ ಬೇಡಿತಂದು, ಜಂಗಮಲಿಂಗಕ್ಕೆ ಮಾಡಿಹೆನೆಂಬ
ದಂದುಗದ ಮಾಟಕ್ಕೆ ಲಿಂಗನೈವೇದ್ಯ ಸಲ್ಲದು.
ತನುಕರಗಿ ಮನಬಳಲಿ ಬಂದತೆರೆದನುವರಿದು
ಸಂದಿಲ್ಲದೆ ಸಂಶಯವಿಲ್ಲದೆ, ಜಂಗಮಲಿಂಗಕ್ಕೆ
ದಾಸೋಹವೇ ಮಾಟ.
ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದುದು
ಲಿಂಗಾರ್ಪಿತವಲ್ಲದೆ,
ದುರಾಶೆಯಿಂದ ಬಂದುದು ಅನರ್ಪಿತ.

ಇದು ಕಾರಣ ಸತ್ಯ ಶುದ್ಧ ಕಾಯಕದ ನಿತ್ಯದ್ರವ್ಯವಾದರೆ
ಚಂದೇಶ್ವರ ಲಿಂಗಕ್ಕೆ ನೈವೇದ್ಯ ಸಂದಿತ್ತು ಕೇಳಯ್ಯ.

ಕಾಯಕವೆಂದರೆ ಅದೊಂದು ವ್ರತ, ಕಠೋರವ್ರತ. ವ್ರತ ತಪ್ಪಿದರೆ ಸೈರಿಸುವುದು ಹೇಗೆ? ನಿತ್ಯದ ಕಾರ್ಯಕ್ಕೆ ನೇಮದ ಕೂಲಿ. ಅಂದಿನ ಕೂಲಿಯಿಂದ ಅಂದಿನ ಸೇವೆ. ಅಂಥ ವ್ರತತೊಟ್ಟವನ ಪ್ರಾಣಕ್ಕೆ ಪ್ರಸಾದ ಲಾಭ. ಪರಮಾತ್ಮನಿಗೆ ಪ್ರಾಣಲಾಭ. ನೇಮದ ಕೂಲಿ ಕಡಿಮೆಯೆಂದು ಹೆಚ್ಚಿನ ಕೂಲಿಗಾಗಿ ಕಂಗೆಡುವದೆಂದರೆ, ಹೇಮದಾಶೆಗೆ ಸಿಲುಕುವದು. ಅದರಿಂದ ಮಾಡುವ ಸೇವೆಯೆಲ್ಲವೂ ವ್ಯರ್ಥವಾಗುತ್ತದೆ.

ನುಲಿಯ ಚಂದ್ರಯ್ಯನು ಹುಲ್ಲು ಕೊಯ್ಯುವ ಕಾಯಕದಲ್ಲಿ ನಿರತನಾಗಿ ದ್ಧಾಗ, ಆತನ ಕೊರಳೊಳಗಿನ ಲಿಂಗದೇವರು ಬೇಕೆಂತಲೇ ಮಡುವಿನಲ್ಲಿ ಕಳಚಿಬೀಳುವನು. ಚಂದಯ್ಯನು ಅತ್ತ ಲಕ್ಷಗಿಡದೆ ತನ್ನ ನಿಯಮದಂತೆ ಹುಲ್ಲು ಕೊಯ್ದುಕೊಂಡು, ಹೊರೆಕಟ್ಟಿ ಹೊತ್ತು ಮನೆಗೆ ಹೊರಟಾಗ ಲಿಂಗದೇವರು ತನ್ನನ್ನು ಎತ್ತಿಕೊಳ್ಳಬೇಕೆಂತಲೂ ಮನೆಗೆ ಕರೆದೊಯ್ಯ ಬೇಕೆಂತಲೂ ಕೇಳಿಕೊಳ್ಳಲು ಚಂದ್ರಯ್ಯನು-ಮಡುವಿನಲ್ಲಿ ಹಾರಿಕೊಳ್ಳಲಿಕ್ಕೆ ತಾನು ಹೇಳಲಿಲ್ಲವೆಂದೂ ನನ್ನೊಡನೆ ಬರಬೇಕಾದರೆ ನೀನಾಗಿಯೇ ಬರುವುದೆಂದೂ ಹೇಳಿ ಮುಂದೆ ನಡೆದನು. ಮನೆಯಲ್ಲಿ ಹುಲ್ಲಿನಿಂದ
ನುಲಿಯ ಮಾಡುವ ಕೆಲಸ ಪೂರಯಿಸಬೇಕೆಂದೂ, ಸಿದ್ಧವಾದ ಕಣ್ಣಿಗಳನ್ನು ಮಾರಿಕೊಂಡು ಬರಬೇಕೆಂದೂ ಕಟ್ಟಿಳೆಗೆ ಒಸ್ಟಿಕೊಂಡ ಬಳಿಕ ಲಿಂಗದೇವ ರನ್ನು ಚಂದಯ್ಯ ಮನೆಗೆ ಕರೆತಂದನು. ಲಿಂಗದೇವನು ಒಡಂಬಡಿಕೆಯಂತೆ
ಹುಲ್ಲಿನಿಂದ ಕಣ್ಣಿ ಸಿದ್ಧ ಗೊಳಿಸುವುದಕ್ಕೆ ನೆರವಾದನು. ಆ ಬಳಿಕ ಕಣ್ಣಿ ಮಾರುವುದಲ್ಲೆ ಪೇಟಿಗೆ ಹೋಗಿ, ನಿತ್ಯಕ್ಕಿಂತ ಹೆಚ್ಚು ಬೆಲೆಗೆ ಆ ಕಣ್ಣಿ ಮಾರಿ ಬಂದ ಕಾರಣದಿಂದ ಚಂದಯ್ಯನು ಹೆಚ್ಚಿನ ದುಡ್ಡು ಮರಳಿಕೊಟ್ಟು ಬರಬೇಕೆಂದು ಸಿಟ್ಟು ಮಾಡಿ ಕಳಿಸಿದನು. ನುಲಿಯ ಚಂದಯ್ಯನ ಕಥೆಯನ್ನು ಚೆನ್ನಾಗಿ ಮನನ ಮಾಡಿದರೆ, ಕಾಯಕದ ಕಟ್ಟಳೆಯೆಲ್ಲ ಮನವರಿಕೆ ಆಗುತ್ತದೆ.

ಮನದ ಲೋಭವನ್ನು ಕಳೆಯುವ ಸಲುವಾಗಿಯೇ ಬಡತನನನ್ನು ಅಂಗೀಕರಿಸುವ ಉಪಾಯ ಮಾಡಲಾಗುತ್ತದೆ. ಬಡತನವ ಒಂದು ನೆವ ತೋರಿಸಿ, ಜೀವವು ಮೊದಲು ಊಣ್ಣುವುದಕ್ಕೂ ಆಮೇಲೆ ಉಡುವುದಕ್ಕೂ ಕೇಳಿ ಬಿಡದೆ, ಹೆಂಡತಿ, ಮಕ್ಕಳು, ಬದುಕು, ಕೇಡು, ಮರಣ ಎನ್ನುತ್ತ ಚಿಂತೆಯ ಸಂತೆಯ್ನೇ ನೆರೆಸುತ್ತದೆ.

ಬಡತನಕ್ಕೆ ಉಂಬುವ ಚಿಂತೆ, ಉಂಡರೆ ಉಡುವ ಚಿಂತೆ
ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡರ ಚಿಂತೆ.
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ.
ಬದುಕಾದರೆ ಕೇಡಿನ ಚಿಂತೆ, ಕೆಡದಿರೆ ಮರಣದ ಚಿಂತೆ.
ಇಂತೀ ಹಲವು ಚಂತೆಯಲ್ಲಿ ಇಪ್ಪವರನ್ನು ಕಂಡೆನು.
ಶಿವಚಿಂತೆಯಿದ್ದವರನೊಬ್ಬರನೂ ಕಾಣೆನೆಂದಾತ ನಮ್ಮ
ಅಂಬಿಗರ ಚೌಡಯ್ಯ ನಿಜಶರಣನು.

ಶಿವನ ಅಪ್ಪಣೆಯಾವರೆ ಸಿರಿವಂತಿಕೆಯಲ್ಲಿಯೂ ಇರಬೇಕು. ಬಡತನದಲ್ಲಿಯೂ ಇರಬೇಕು. ಸಿರಿವಂತಿಕೆ-ಬಡತನಗಳ ಅನುಭವಗಳೆರಡೂ ಪರಸ್ಪರ ಪೂರಕಗಳಾಗಿವೆ. ಎರಡರಲ್ಲಿ ಯಾವುದು ಬಂದರೂ ಕಾಯಕದ ಕೃಷಿ ನಡೆಯಲೇ- ಬೇಕು. ಆ ಕೃಷಿ ನಡೆಯದಿದ್ದರೆ, ಹಸಿವೆ ಹಿಂಗಲಾರದು. ಕಾಯಕವೆಂಬ ಕರ್ಮಯೋಗದ ಸಾಧನ ಮಾಡದಿದ್ದರೆ ಚಿತ್ತಶುದ್ಧಿಯಾಗಲಾರದು. ಹಸಿವೆ ಪಾಪಕ್ಕೆ ಕಾರಣ. ಚಿತ್ತಮಲಿನತೆ ಅಜ್ಞಾನಕ್ಕೆ ಕಾರಣ. ಅಂಥವನು ಇಲ್ಲಿಯೂ ಸಲ್ಲುವುದಿಲ್ಲ, ಅಲ್ಲಿಯೂ ಸಲ್ಲುವುದಿಲ್ಲ.”

ಜಗದೀಶ್ವರೀ ಮಾತೆಯು ಈ ವರೆಗಿನ ಮಾತುಗಳನ್ನೆಲ್ಲ ಕೇಳಿ ತಿಳಿದು, ಪೂರ್ತಿಸಾರವನ್ನು ಈ ಬಗೆಯಲ್ಲಿ ಉದ್ಘೋಷಿಸಿದರು ಹೇಗೆಂದರೆ–

“ಬಾಹ್ಯ ಜೀವನದ ಪರಿಪೂರ್ಣತೆಗೆ ಧನಬಲವು ಅಪರಿಹಾರ್ಯ. ದೀರ್ಫಕಾಲದಿಂದ ಧನವು ಅಸುರವಶವಾಗಿ ದುರ್ವಿನಿಯೋಗಗೊಂಡ ಕಾರಣ ದಿಂದ ಅದಕ್ಕೊಂದು ಬಗೆಯ ದೂಷಿತ ದೃಢಮುದ್ರೆ ಬಿದ್ಧಿದೆ. ಧನ-ವಿಭವ
ಗಳನ್ನು ಬಹಿಷ್ಕರಿಸಿ, ಬಾಳಿನ ಬಡತನ-ಬರಡುತನಗಳೇ ಆಧ್ಯಾತ್ಮಿಕ ಅವಸ್ಥೆಯೆನ್ನುವುದು. ಧನಸ್ವಾಮಿಯಾದ ಈಶ್ವರನ ಸಲುವಾಗಿ ಧನವನ್ನು ಪುನಃ ಜಯಿಸಿ ತಂದು, ಈಶ್ವರಾರ್ಪಣ ಬುದ್ಧಿಯಿಂದ ದಿವ್ಯಜೀವನಕ್ಕಾಗಿ
ಅದನ್ನು ಬಳಸತಕ್ಕದ್ದು.”

ಎನ್ನುವುದಕ್ಕೆ ” ಜಯಜಯ! ಜಯ ನಮಃ ಪಾರ್ವತೀಪತೇ ! ಹರ ಹರ ಮಹದೇವ!!” ಎಂಬ ಉಗ್ಗಡಣೆಯು ಜನಜಂಗುಳಿಯಲ್ಲಿ ಉದ್ಘೋಷಿಸಿತು.

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಳಿಸೀರೆಯವಳು
Next post ನಗೆ ಡಂಗುರ-೧೫೧

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

cheap jordans|wholesale air max|wholesale jordans|wholesale jewelry|wholesale jerseys