ಕಮ್ಮಟ

ಇದು ನನ್ನ ಕಮ್ಮಟವು. ರಾಜಮುದ್ರೆಯನೊತ್ತಿ
ಹಣವನೋಡಾಡಿಸುವುದಲ್ಲ. ಆಡಳಿತಗಳ
ವ್ಯವಹಾರವನ್ನು ನಿಯಂತ್ರಿಸುತ ದಿಗ್ದೇಶಗಳ-
ನೊಲಿಸ ಬಯಸುವುದಿಲ್ಲ ಕಲ್ಲು ಬಂಡೆಯ ಕೆತ್ತಿ
ಬೋಳಗುಮ್ಮಟಗಳನು ಬಾಳ ಬಯಲಿನಲೆತ್ತಿ
ನಿಲ್ಲಿಸುವ ಸಾಮರ್‍ಥ್ಯವಿದಕಿಲ್ಲ ತಾರೆಗಳ
ಕೋಟಿ ಹೊನ್ನನು ತಂದು ಆಗಸದ ಮೇರೆಗಳ
ತುಂಬುವಳವಿದಕಲ್ಲ ಅದು ದೇವನುಪಪತ್ತಿ

ನನ್ನ ಕಮ್ಮಟದಲ್ಲಿ ಅನುದಿನವು ಜನಿಸುವವು
ಕಮ್ಮಲರ ನರುಗಂಪು ಹಿಡಿದ ಹೊಂಗನಸು, ಇಡಿ
ನಾಡ ಬಗೆಯನು ಸೆಳೆವ ಸೊಗಸುಗಾರಿಕೆ, ಬಾನ
ಮುಟ್ಟಿ ಮುತ್ತಿಡುವಂಥ ಭಾವಗಳು, ಇಲ್ಲಿಹವು-
ಈ ನುಡಿಯ ಬೆಡಗಿನಲಿ-ನಾನೊಲಿದ ತಾಯ ಮುಡಿ-
ಗೆಂದು ಸಲ್ಲಿಸಿದ ಹೂ, ಅನುಸಂಧಿಸಿದ ಗಾನ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿವಸಮಾಗಮ
Next post ಕಾಡುತಾವ ನೆನಪುಗಳು – ೧೬

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…