ಹೊಸ ಚೆಲುವನು ಹರಸಿ – ಮೈಗೆ
ಹೊಸ ಸೊಬಗನು ತೊಡಿಸಿ
ಹಿಮದ ಶಾಪವಾಯು – ಬೀಸಿದೆ
ಹಸಿರ ಉಸಿರ ನಿಲಿಸಿ

ನೀಗಲಿ ಶಾಪವನು ಚೈತ್ರ
ಪ್ರಕೃತಿಗಭಯ ನೀಡಿ,
ಒಣರೆಂಬೆಯು ಹಸಿರ – ದನಿಸಲಿ
ಲಜ್ಜೆಯನ್ನು ದೂಡಿ

ಪ್ರಾಣವೀಣೆಯಲ್ಲಿ – ಈಗಲೆ
ನುಡಿಸು ಪ್ರೇಮಗಾನ
ರೋಮಾಂಚಿತ ಕಾಯ – ಅದಕೆ
ನಲ್ಲನದೇ ಧಾನ

*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)