ಸಾವನ್ನು ವೈಭವೀಕರಿಸಿದ ಎಮಿಲಿ ಡಿಕಿನ್ಸನ್

ಸಾವನ್ನು ವೈಭವೀಕರಿಸಿದ ಎಮಿಲಿ ಡಿಕಿನ್ಸನ್

ಭಾಗ-೧

ಆಕೆಯ ಜೀವನದ ಬಂಡಿಯಲ್ಲಿ ಸದಾ ಸಾವು ಸಂಚರಿಸುತ್ತಿತ್ತು. ಆಕೆಯ ದಾರಿ ಸಾವಿನ ದಾರಿಯಾಗಿತ್ತು. ಆದಕ್ಕೆಂದೆ ಆಕೆಯ ಕವನಗಳಲ್ಲಿ ‘ಡೆತ್ ಇನ್ ಲೈಫ್, ಲೈಫ್ ಇನ್ ಡೆತ್’ ವೇದಾಂತವಿದೆ. ಆಕೆ ಎಮಿಲಿ ಡಿಕನ್ಸನ್. ಸಾವಿನ ಬಾಗಿಲನ್ನು ತನ್ನ ಕವನಗಳ ಮೂಲಕ ತಟ್ಟಿ ತಟ್ಟಿ ಬಡಿದವಳು. ಆಕೆ ತನ್ನ ಬದುಕಲ್ಲಿ ಉಂಡ ನೋವು ಸಾವಿಗಿಂತ ಏನೂ ಕಡಿಮೆಯಾಗಿರಲಿಲ್ಲ. ಆಕೆಯ ಕವಿತೆಗಳಲ್ಲಿ ಬದುಕು ಬದುಕಾಗದೇ ಸಾವಿಗೆ ಸಮೀಪದ ಸಂಗತಿ. ಪ್ರೀತಿ ಪಾತ್ರರ ಅವಜ್ಞೆ, ಉಪೇಕ್ಷೆ, ದೂರಾಗುವಿಕೆ, ಪ್ರೀತಿಯ ಹೆಸರಿನಲ್ಲಿ ದೈಹಿಕ ಭ್ರಷ್ಟತೆ, ಇತ್ಯಾದಿ ಇತ್ಯಾದಿ ವಿಚಾರಗಳ ಸಮೀಕರಿಸುತ್ತದೆ.

ಐ ಹರ್ಡ್ ಎ ಫ್ಲಾಯ್ ಬಜ್ಜ್ ವ್ಹೆನ್ ಐ ಡೈಡ್
ಬಿಕಾಜ್ ಐ ಕುಡ್ ನಾಟ್ ಸ್ಟಾಪ್ ಫಾರ್ ಡೆತ್
ದಿ ಸೋಲ್ ಸೆಲೆಕ್ಟ್ಸ್ ಹರ್ ವೋನ್ ಸೋಸಾಯಿಟಿ
ಮೈ ಲೈಫ್ ಕ್ಲೋಸ್ಡ್ ಟ್ವೈಸ್ ಬಿಫೋರ್ ಇಟ್ಸ್ ಕ್ಲೋಸ್
ದಿ ಲಾಸ್ಟ ನೈಟ್ ಷಿ ಲಿವ್ಡ್

ಈ ಐದು ಕವಿತೆಗಳ ಆಳ ಅಗಲಗಳೆಲ್ಲಾ ಸಾವಿನ ಪದರಪದರಗಳ ಭಿನ್ನ ವಿಭಿನ್ನ ಚಿತ್ರಣಗಳ ಕಟ್ಟಿಕೊಟ್ಟವೆ.

೧೮೩೦, ಡಿಸೆಂಬರ ೧೦ ರಂದು ಉತ್ತರ ಅಮೇರಿಕಾದ ಆಮ್ಹರ್‍ಸ್ಟ್ ಎಂಬಲ್ಲಿ ಜನಿಸಿದ ಎಮಿಲಿ ಅಮೇರಿಕನ್ ಸಾಹಿತ್ಯ ಲೋಕದ ಪಿತಾಮಹನೆಂದು ಕರೆಸಿಕೊಂಡ ರಾಲ್ಫ್ ವಾಲ್ಡೋ ಎಮರಸನ್ನ ನೈತಿಕತೆಯ ಉತ್ಕೃಷ್ಠ ಪ್ರಜ್ಞೆ, ಸ್ವಾವಲಂಬಿ ಬದುಕು ಇಂತಹ ಸಿದ್ಧಾಂತಗಳಿಂದ ಪ್ರಭಾವಿತಗೊಂಡಿದ್ದಳು. ಆದರಾಕೆಯ ಬದುಕು ಬಾಲ್ಯದಿಂದಲೂ ತಂದೆ ಎಡ್ವರ್ಡ ಡಿಕಿನಸನ್ನ ಕಟ್ಟುನಿಟ್ಟಾದ ಶಿಸ್ತಿನ ಮನೆಯಲ್ಲಿಯೇ ಕಳೆಯಿತು. ತಮ್ಮ ಕರ್ತವ್ಯಪರತೆ, ನಡತೆಗಳ ಮೇಲೆ ನಿಗಾ ಇಡುವಂತೆ ಬೋಧಿಸುತ್ತಿದ್ದ ಎಡ್ವರ್ಡ ಡಿಕನ್ಸಸನ್ ನಗರದ ಪ್ರಸಿದ್ಧ ವಕೀಲ ಹಾಗೂ ಧುರೀಣನಾಗಿದ್ದ. ಎಡ್ವರ್ಡ ಡಿಕನ್ಸನ್ನ ತಂದೆ ನ್ಯೂ‌ಇಂಗ್ಲೆಂಡಿಗೆ ವಲಸೆ ಬಂದ ಕೆಲವೇ ಪ್ಯೂರಿಟನ್ ತತ್ವಾದರ್ಶಗಳ ಪ್ರೋಟೆಸ್ಟಂಟ್ರಲ್ಲಿ ಒಬ್ಬನಾಗಿದ್ದರಿಂದ ಎಡ್ವರ್ಡ ಕೂಡಾ ಸಂಪ್ರದಾಯಸ್ಥ ಪುರಿಟನ್ ತತ್ವಗಳಿಂದ ಪ್ರಭಾವಿತನಾಗಿದ್ದ. ಹಾಗಾಗಿ ಮನೆಯಲ್ಲಿ ಬೌದ್ಧಿಕ ಬೆಳವಣಿಗೆ ಭಾವನಾತ್ಮಕ ಭಾಂದವ್ಯಗಳೆಲ್ಲಾ ಹೀಗೆ ಇರಬೇಕೆಂಬ ನಿಯಮಗಳಿದ್ದವು. ಸಂಪ್ರದಾಯಸ್ಥ ತಂದೆಯ ಆದರ್ಶಗಳ ಅಡಿಯಲ್ಲಿಯೇ ಮಕ್ಕಳು ಬೆಳೆಯಬೇಕಾದ ಅನಿವಾರ್ಯತೆಯಿಂದ ಮಕ್ಕಳಿಗೆ ಹೊರಜಗತ್ತಿನೊಂದಿಗೆ ಸಂಪರ್ಕ ಮೊಟಕಾಗಿತ್ತು. ಒಂದು ವರ್ಷ ಹೊರಜಗತ್ತಿನ ಶಾಲೆಯಲ್ಲಿ ಅಧ್ಯಯನ ಮಾಡಿದ್ದನ್ನು ಹೊರತು ಪಡಿಸಿ ಆಕೆ ತನ್ನೆಲ್ಲಾ ಶಿಕ್ಷಣವನ್ನು ಮನೆಯ ನಾಲ್ಕು ಗೋಡೆಗಳ ಮಧ್ಯೆ ಪಡೆದಳು. ಹೀಗಾಗಿ ಎಮಿಲಿ ಬೆಳೆದಂತೆ ಅಂತರ್‍ಮುಖಿಯಾಗತೊಡಗಿದಳು. ಆಕೆಯೊಂದಿಗೆ ಭಾವನಾತ್ಮಕ ಬಂಧ ಏರ್ಪಟ್ಟ ಪುರುಷರೆಲ್ಲಾ ಒಂದಿಲ್ಲಾ ಒಂದು ಕಾರಣದಿಂದ ಸಾವಿಗೆ ಶರಣಾದರು. ಇಲ್ಲವೇ ದೂರವಾದರು.

ಎಮಿಲಿ ಬದುಕಿನಲ್ಲಿ ಬಂದ ಮೊದಲ ವ್ಯಕ್ತಿ ಎಂದರೆ ಬೆಂಜಮಿನ್ ನ್ಯೂಟನ್. ಆಕೆಯ ಮೊದಲ ಕಾವ್ಯಗುರು. ಆಕೆಯ ವಕೀಲ ತಂದೆಯ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಆತ ಎಮಿಲಿ ಬರೆದ ಕಾವ್ಯಗಳನ್ನು ವಿಮರ್‍ಶಿಸಿ ತಿದ್ದಿ ಆಕೆಯ ಬರವಣಿಗೆ, ಕವಿತಾ ಸಾಮರ್‍ಥ್ಯವನ್ನು ವಿಸ್ತರಿಸುವತ್ತ ಮಾರ್ಗದರ್ಶನ ಮಾಡುತ್ತಿದ್ದ. ಆತನೊಂದಿಗೆ ಆಕೆ ಭಾವನಾತ್ಮಕವಾಗಿಯೂ ಬೆರೆತಿದ್ದಳು. ಬೆಂಜಮಿನ್ ಓದಲು ಎಮರಸನ್ ಕವಿತೆಗಳ ಕಟ್ಟು ನೀಡಿ ಪ್ರೋತ್ಸಾಹಿಸುತ್ತಿದ್ದನೆಂದು ಆಕೆ ತನ್ನ ಕಾವ್ಯ ಗುರು ಟಿ.ಡಬ್ಯ್ಲೂ. ಹಿಗ್ಗಿನ್‍ಸನ್‍ಗೆ ಬರೆದ ಪತ್ರದಲ್ಲಿ ಹೇಳುತ್ತಾಳೆ. ಆತನ ಕುರಿತು ಆಕೆ ಹೀಗೆ ಬರೆಯುತ್ತಾಳೆ “ಮೈ ಡೈಯಿಂಗ್ ಟ್ಯೂಟರ್ ಟೋಲ್ಡ್ ಮಿ ದಟ್ ಹಿ ವುಡ್ ಲೈಕ್ ಟು ಲಿವ್ ಟಿಲ್ ಐ ಹ್ಯಾಡ್ ಬೀನ್ ಎ ಪೊಯೆಟ್”. ಆ ಸಾಂಗತ್ಯ ದುರ್‍ದೈವದಿಂದ ೧೮೫೨ರಲ್ಲಿ ಆತನ ಅಕಾಲಮರಣದಿಂದ ಕೊನೆಯಾಯಿತು. ಆಕೆ ಜರ್ಜರಿತಳಾದಳು. ಆತನ ಸಾವು ಆಕೆಯನ್ನು ಅಲ್ಲಾಡಿಸಿಬಿಟ್ಟಿತು.

ಮುಂದೆ ಚೇತರಿಸಿಕೊಂಡ ಆಕೆಯ ಬದುಕಿನ ಇನ್ನೊಂದು ಆರಂಭವೆಂದರೆ ಅದು ಚಾರ್‍ಲ್ಸ್ ವಡ್ಸವರ್ಥ. ಆತನನ್ನಾಕೆ “ಮಾಸ್ಟರ್” ಎಂದೇ ಸಂಭೋದಿಸುತ್ತಾಳೆ. ವಿವಾಹಿತ ಕ್ಲೆರ್‍ಜಿಮ್ಯಾನ್ ಚಾರ್‍ಲ್ಸ್ ವಡ್ಸವರ್ಥನಲ್ಲಿ ಆಕೆ ಅನುರಾಗಭರಿತಳಾಗಿದ್ದಳು. ತನ್ನ ಕವಿತೆಯೊಂದರಲ್ಲಿ ಆತನನ್ನು ಆಕೆ ವರ್‍ಣಿಸಿದ್ದು ಹೀಗೆ, “ಮೈ ಕ್ಲೋಸೆಸ್ಟ್ ಅರ್‍ಥ್‍ಲಿ ಫ್ರೆಂಡ್” ಅದ್ಯಾವುದೋ ಕಾರಣದಿಂದ ತಂದೆಯೊಂದಿಗೆ ಪ್ರವಾಸದಲ್ಲಿದ್ದ ಆಕೆಗೆ ಆತನೊಂದಿಗೆ ಮೊದಲ ಭೇಟಿ. ಆಗಾಕೆಗೆ ಬರೀಯ ೨೩ ವರ್ಷ. ಅಂದಿನಿಂದ ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಮಿಲಿಯ ಸ್ನೇಹ ಆತನ ಮರಣದವರೆಗೂ ಮುಂದುವರೆದಿತ್ತು. ೧೮೬೦ರಲ್ಲಿ ಆಕೆಯನ್ನು ಭೇಟಿಯಾದ ಆತ ನಂತರ ಮರುವರ್ಷವೇ ತನ್ನ ಯಾವುದೋ ಒಪ್ಪಂದದಂತೆ ಕುಟುಂಬದೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋಗೆ ಸ್ಥಳಾಂತರಗೊಂಡ. ಇದು ಆಕೆಯ ಮನಸ್ಸಿಗೆ ಅತೀವ ನೋವನ್ನು ನೀಡಿತ್ತು. ತನ್ನ ಮನೆಯಿಂದಲೂ ತನ್ನೊಳಗಿನಿಂದಲೂ ಆಕೆ ವಿಮುಖಳಾಗತೊಡಗಿದಳು. ವಿಲಕ್ಷಣ ವ್ಯಕ್ತಿತ್ವವನ್ನು ಹೊಂದತೊಡಗಿದಳು. ಆಕೆಯ ಮನಸ್ಸಿನಲ್ಲಿ ನೆಲೆನಿಂತ ಪ್ರೀತಿಪಾತ್ರನಾಗಿದ್ದ ವಡ್ಸವರ್ಥ ಹತ್ತಿರಾದಷ್ಟೇ ದೂರವಾದಾಗ ನವೆದ ನರಳಿದ ಎಮಿಲಿಗೆ ಆತನ ಅಗಲುವಿಕೆ ಸಾವಿನಷ್ಟೇ ಸಹಿಸಲಾಗದ ಸಂಗತಿಯಾಗಿತ್ತು. ಆತ ಆಕೆಯ ಬದುಕಿನಲ್ಲಿ ಬಿಕ್ಕಟ್ಟು ಸೃಷ್ಟಿಸಿದ. ಈ ನೋವನ್ನು ಆಕೆ ತನ್ನೋರ್ವ ಗೆಳೆಯ ಜರ್ನಲಿಸ್ಟ ಟಿ.ಡಬ್ಯ್ಲೂ.ಹಿಗ್ಗಿನ್‍ಸನ್‍ಗೆ ಹೀಗೆ ಬರೆಯುತ್ತಾಳೆ. “ವೆನ್ ಎ ಲಿಟಿಲ್ ಗರ್‍ಲ್, ಐ ಹಾಡ್ ಎ ಫ್ರೆಂಡ್ ವೂ ಟಾಟ್ ಮಿ ಇಮ್ಮಾರ್‍ಟಲಿಟಿ; ಬಟ್ ವೆಂಚರಿಂಗ್ ಟೂ ನಿಯರ್‍, ಹಿಂಸೆಲ್ಫ್ ಹಿ ನೆವರ್‍ ರಿಟರ್‍ನಡ್”.

ಆನಂತರದ ದಿನಗಳಲ್ಲಿ ಆಕೆಗೆ ಹತ್ತಿರವಾದ ಮೂರನೇ ವ್ಯಕ್ತಿಯೆಂದರೆ ಅವಳ ತಂದೆಯ ಗೆಳೆಯ ಹಾಗೂ ನ್ಯಾಯವಾದಿ ಓಟಿಸ್ ಪಿ. ಲಾರ್ಡ. ತಂದೆಯ ಆತ್ಮೀಯನೂ ಮೆಸಾಚುಸೆಟ್ಸ್ನ ಸುಪ್ರೀಂ ಕೋರ್ಟನಲ್ಲಿ ನ್ಯಾಯವಾದಿಯೂ ಆಗಿದ್ದ ಆತ ಎಮಿಲಿಗಿಂತ ಹದಿನೆಂಟು ವರ್ಷಗಳಷ್ಟು ಹಿರಿಯನಾಗಿದ್ದ. ಎಮಿಲಿಯ ತಂದೆಯ ಮರಣದ ನಂತರ ಆಕೆಯೊಂದಿಗೆ ನಿಕಟವರ್‍ತಿಯಾದ ಓಟಿಸ್ ತನ್ನದೇ ಸುಖಸಂಸಾರವನ್ನೂ ಹೊಂದಿದ್ದ. ಆದರೆ ಈ ಸಂಬಂಧ ಮುಂದೆ ಓಟಿಸ್ನ ಪತ್ನಿಯ ಮರಣದೊಂದಿಗೆ ಇನ್ನಷ್ಟು ಗಾಢವಾಯಿತು. ಆದರೆ ಓಟಿಸ್ ಪತ್ನಿಯ ಮರಣ ಹೊಂದಿದ ನಾಲ್ಕೈದು ವರ್ಷಗಳಲ್ಲೆ ೧೮೮೪ರಲ್ಲಿ ಇಹಲೋಕ ತ್ಯಜಿಸಿದ. ಒಂದೊಮ್ಮೆ ಓಟಿಸ್ ಮರಣ ಹೊಂದದಿದ್ದಲ್ಲಿ ಇವರಿರ್ವರ ಸಂಬಂಧ ವಿವಾಹದಲ್ಲಿ ಕೊನೆಗೊಳ್ಳುತ್ತಿತ್ತೆಂಬುದು ಹಲವು ವಿಮರ್ಶಕರು, ಜೀವನ ಚರಿತ್ರಕಾರರ ಅಭಿಪ್ರಾಯ. ಆಕೆಯ ಬದುಕಿನಲ್ಲಿ ತುಂಬಲಾರದ ನಷ್ಟವಾಗಿ ಓಟಿಸ್ನ ಮರಣವೆಂದು ಅದು ಕೊನೆಯ ಅಂಕವೆಂದು ಆಕೆ ತನ್ನ “ಮೈ ಲೈಫ್ ಕ್ಲೋಸ್ಡ್ ಟ್ವೈಸ್ ಬಿಫೋರ್ ಇಟ್ಸ್ ಕ್ಲೋಸ್” ಕವನದ ಮೂಲಕ ಪ್ರಲಾಪಿಸುತ್ತಾಳೆ. ಇನ್ನು ದುಃಖದ ಕೊಂಡಿ ಆಕೆಯಿಂದ ಕಳಚಿಕೊಂಡಿಲ್ಲವೆಂಬಂತೆ ೧೮೮೬ರಲ್ಲಿ ಆಕೆ ಮರಣ ಹೊಂದುವ ಮುನ್ನ ಅಂದರೆ ೧೮೮೨ ರಲ್ಲಿ ಆತ್ಮದ ಗೆಳೆಯ ವಡ್ಸವರ್ಥ ಮತ್ತು ತನ್ನ ತಾಯಿಯ ಸಾವು ಕಂಗೆಡಿಸುತ್ತದೆ. ಎಮಿಲಿಯೊಂದಿಗೆ ಭಾವನಾತ್ಮಕ ಬೆಸುಗೆ ಹೊಂದಿದ್ದ ಇನ್ನೊಬ್ಬ ಗೆಳೆಯ ಸ್ಯಾಮ್ಯೂಯಲ್ ಬೌಲ್ಸ್‍ನನ್ನು ಕೂಡಾ ಅದೇ ವರ್ಷ ಸಾವು ಸೆಳೆದ್ಯೊಯ್ಯಿತು. ಇವೆಲ್ಲವೂ ಆಕೆಯ ಬದುಕು ಮತ್ತು ಕಾವ್ಯ ರಚನೆಯ ಮೇಲೆ ಅಗಾಧ ಪರಿಣಾಮ ಬೀರಿದ್ದವು. ಆದಾಗ್ಯೂ ಗಮನಿಸಬೇಕಾದ ಸಂಗತಿ ಎಂದರೆ ಆಕೆಯೊಂದಿಗೆ ಸಂಬಂಧ ಬೆಸೆದ ಗಂಡುಗಳೆಲ್ಲ ವಿವಾಹಿತರೆಂಬುದು ಆಕೆಗಿಂತ ಪ್ರಾಯದಲ್ಲಿ ಹಿರಿಯರೆಂಬುದು. ಅದರಲ್ಲಿ ಆಕೆಯ ಪ್ರಾಯಕ್ಕೆ ಹತ್ತಿರನಾಗಿದ್ದವನೆಂದರೆ ರಿಪಬ್ಲಿಕನ್ ಪತ್ರಿಕೆಯ ಸಂಪಾದಕ ಸಾಮ್ಯೂಯಲ್ ಮಾತ್ರ. ಇವೆಲ್ಲವೂ ಆಕೆಯಲ್ಲಿನ ವಿಲಕ್ಷಣ ವ್ಯಕ್ತಿತ್ವವನ್ನು ಬೆಳೆಸಿದವು. ಆಕೆಯ ಕವಿತೆಗಳಲ್ಲಿ ಸಾಂಪ್ರದಾಯಿಕ ವೈವಸ್ಥೆಯ ಬಿಗಿಹಿಡಿತದಿಂದ ತಪ್ಪಿಸಿಕೊಳ್ಳಬಯಸುವ ಮಾನಸಿಕ ತುಮುಲವೂ ಪ್ರತಿಧ್ವನಿಸುತ್ತದೆ. ಸ್ಥಿತ್ಯಂತರ ಸಾಧ್ಯವಾಗದೇ ಬಳಲಿದ ಹೆಣ್ಣು ತನ್ನ ಶಬ್ಧಗಳ ಮುಖೇನ ಅಂತರಂಗದ ಒಳಪರದೆಯನ್ನು ಬಿಚ್ಚಿ ಹರಹುತ್ತ, ವಿಮುಖತೆಯ ಪ್ರತಿಪಾದಿಸುತ್ತ ಅಂತರ್‍ಮುಖಿಯಾಗತೊಡಗಿದಳು. ಎಮಿಲಿಯ ಬದುಕಿನಲ್ಲಿ ಬಂದ ಪುರುಷರನ್ನು ಪ್ರೀತಿಪಾತ್ರರನ್ನು ಕೊನೆವರೆಗೂ ಆಕೆಯೊಂದಿಗೆ ಇರುವ ಅವಕಾಶವನ್ನೆ ಕೊಡದ ವಿಧಿ ಅವರನ್ನು ತನ್ನ ಕಪಿಮುಷ್ಟಿಯೊಳಗೆ ಸೆಳೆದುಕೊಂಡಿದ್ದು ಇದಕ್ಕೆ ಕಾರಣವಿರಬಹುದು.

ಎಮಿಲಿಯ ಮರಣದ ನಂತರ ಸಹೋದರಿ ಲವಿನಿಯ ಕವಿತೆಗಳನ್ನೆಲ್ಲಾ ಹುಡುಕಿ ತೆಗೆದು ಟಿ.ಡಬ್ಯೂ.ಹಿಗ್ಗಿನ್‍ಸನ್‍ಗೆ ನೀಡಿದ್ದಳು. ಅವು ೧೮೯೦ರ ಸುಮಾರಿಗೆ ಆಕೆಯ ಕವಿತೆಗಳು ಪ್ರಕಟವಾದರೂ ಅವು ಅಪ್ರಬುದ್ಧ ಪ್ರತಿಭೆ ಎಂದೆ ಪರಿಗಣಿಸಲ್ಪಟ್ಟಿತ್ತು. ಹಾಗಾಗಿ ಆಕೆ ಜಗತ್ತಿಗೆ ಪರಿಚಯವಾದದ್ದು ೧೯೨೦ರ ನಂತರ. ೧೯೨೪ರಲ್ಲಿ ಎಮಿಲಿಯ ಕವಿತೆಗಳನ್ನು ಮಾರ್‍ಥ ಬಿಯಾಂಚಿ “ದಿ ಕಂಪ್ಲೀಟ್ ಪೊಯಮ್ಸ್ ಆಫ್ ಎಮಿಲಿ ಡಿಕೆನ್‍ಸನ್” ಹೆಸರಿನಲ್ಲಿ ಪ್ರಕಟಿಸಿದರು. ಮುಂದೆ ೧೯೫೫ರಲ್ಲಿ ಥಾಮಸ್ ಜಾನ್ಸನ್ “ದಿ ಪೊಯಮ್ಸ್ ಆಫ್ ಎಮಿಲಿ ಡಿಕೆನ್‍ಸನ್” ಎಂಬುದಾಗಿ ಮೂರು ಸಂಪುಟಗಳಲ್ಲಿ ಎಮಿಲಿಯ ಸುಮಾರು ೧೭೭೫ ಕವಿತೆಗಳನ್ನು ಪ್ರಕಟಿಸುವ ಮೂಲಕ ಗುರುತರ ಕೊಡುಗೆಯನ್ನು ಆಕೆಯ ಸಾಹಿತ್ಯ ಬದುಕಿಗೆ ನೀಡಿ ಆಕೆಯನ್ನು ಜಗತ್ತಿಗೆ ಪರಿಚಯಿಸಿದರು. ಬದುಕಿರುವವರೆಗೂ ಅಜ್ಞಾತವಾಗಿಯೇ ಉಳಿದ ಆಕೆ ತನ್ನ ಕಾವ್ಯವನ್ನು ವೈಯಕ್ತಿಕ ನೆಲೆಯಲ್ಲಿಯೇ ಇಡಲು ಬಯಸಿದ್ದಳು. ಅದು ಸಾರ್ವಜನಿಕ ಸ್ವತ್ತಾಗುವುದು ಆಕೆಗೆ ಇಷ್ಟವಿರಲಿಲ್ಲ. “ಪಬ್ಲಿಕೇಷನ್ ಈಸ್ ದ ಆಕ್ಷನ್ ಆಫ್ ದ ಮೈಂಡ್” ಎಂಬುದು ಆಕೆಯ ಅಭಿಮತವಾಗಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನಿರೀಕ್ಷಿತ ಭೇಟಿ
Next post ನನಗೆ ನನ್ನ ಬೊಬ್ಬರ್ಯ

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys