ಏ ರಘು ನೀ ಮಾತಾಡಕ್ಹತ್ಯಂದ್ರ ರಾಜಕೀಯದವರಂಗ ಯದ್ವಾತದ್ವಾ ಎಡವಟ್ಟು ಹೇರಾ ಪೇರಿ ಮಾತಾಡ್ತಿನೋಡು ಎಲ್ಲಾರೂ ಝಬರಿಸಿ ಬೈದು ನಿನ್ನ ಹೊರಗ ಹಾಕಿದ್ರ ಮನಿಯೆಲ್ಲಾ ಭಣ ಭಣ ಸ್ಮಶಾನದಂಗ ಮೌನ ಏ ರಾಘು ನಿನ್ನ ಯಡವಟ್ಟತನಾ ಬಿಡೋ ನಮಗೂ ಭಣ ಭಣ ಬ್ಯಾಡಾ ಮಾತಾಽಡ...
ಏಕಮ್ಮ ಓ ಪ್ರಕೃತಿ ಎನ್ನಿಂದ ದಿನದಿನವು ದೂರಕೆ ಸಾಗುತ ನಿಲ್ಲುತಿರುವೆ ನರಕವಾಗಿದೆ ಎನ್ನ ಜೀವನ ವಿಕೃತಿಯಲಿ ತಬ್ಬಲಿಗೈದೆನ್ನ ಕೊಲ್ಲು ತಿರುವೆ ಎಲೆ ಎಲೆ ಪಿಸುಮಾತು ಕೇಳಿಸದೆ ಕಿವಿಗಳಿಗೆ ನಾಗರಿಕ ಸಂತೆಯಲಿ ಮುಚ್ಚಿರುವುದು ನಗುವ ಹೂಗಳ ಮೋಡಿ ಎನ್ನಿಂ...
ಪ್ರಿಯ ಸಖಿ, ಎಂಟು ಹತ್ತು ವರ್ಷದ ಹುಡುಗನೊಬ್ಬ ತನ್ನಮ್ಮನನ್ನು ಪ್ರಶ್ನಿಸುತ್ತಿದ್ದಾನೆ. “ಅಮ್ಮ ಮಾನವೀಯತೆ ಎಂದರೇನು?” ಅಮ್ಮ ಕ್ಷಣಕಾಲ ತಬ್ಬಿಬ್ಬಾಗುತ್ತಾಳೆ. ದೊಡ್ಡ ದೊಡ್ಡ ಪದಗಳಲ್ಲಿ ಮಾನವೀಯತೆಯನ್ನು ಅರ್ಧೈಸಿ ಹೇಳಬಹುದು. ಆದರೆ ...
ಜೂ ನೋಡಿದೆ – ನಾ ಜೂ ನೋಡಿದೆ, ಬೋನಿನಲ್ಲಿ ಹುಲಿ ಸಿಂಹ ತೋಳ ನೋಡಿದೆ. ಚೂಪು ಹಲ್ಲಿದೆ – ಸಿಂಹ ಕೋಪವಾಗಿದೆ, ರೋಪಿನಿಂದ ಘುರ್ ಅಂದ್ರೆ ನಡಗತ್ತೆ ಎದೆ. ಬಣ್ಣ ಬಣ್ಣದ – ಅಗಲ ಪಟ್ಟೆ ಹುಲಿ ಇದೆ, ಸಣ್ಣ ಚೂರಿಯಂಥ ಉಗುರು ಹೆಜ್ಜೆ...
ಭೂಮಿ ಕಾಣಿ ಧವಸ ಧಾನ್ಯ ಮನಿಶಾ ಪ್ರಾಣಿ, ಈ ಜಗತ್ತೆಲ್ಲಾ ಸೂರ್ಯನದೇ ಅಂಗಡಿ ಅದರೊಳಗೇ ಈ ಚಂದ್ರ ಒಂದು ಪುಟ್ಟ ಕನ್ನಡಿ. *****...
ಒಂದೊಂದು ಮನೆಯೊಳಗೂ ಒಂದೊಂದು ಭರಣಿ. ಭರಣಿಯೊಳಗೆ ಪುರಾತನದ ದೈವಗಳು. ಯಾರೂ ತೆರೆಯರು. ಸಂಪುಟದಿಂದ ಹೊರ ಬರುವ ದೇವರುಗಳು ಕಲ್ಲಿನವು. ಹಲವು ಕಾಲದ ನೀರಿನಿಂದ ಸವೆದವು. ಮನೆಹಿಂದೆ ಒಂದೊಂದು ಮರದ ಮೇಲೂ ಒಂದೊಂದು ಪ್ರೇತಗಳು ಸದಾಕಾಲ ಫಲ ಬಿಟ್ಟ ಹ...
ದಾರಿವಿಡಿದು ಬರಲು, ಮುಂದೆ ಸರೋವರವ ಕಂಡೆ, ಆ ಸರೋವರದ ಮೇಲೆ ಮಹಾಘನವ ಕಂಡೆ. ಮಹಾಘನವಿಡಿದು, ಮನವ ನಿಲಿಸಿ, ಕಾಯಗುಣಗಳನುಳಿದು, ಕರಣಗುಣವ ಸುಟ್ಟು, ಆಶೆಯನೆ ಅಳಿದು, ರೋಷವನೆ ನಿಲಿಸಿ, ಜಗದೀಶ್ವರನಾದ ಶರಣರ ಮರ್ತ್ಯದ ಹೇಸಿಗಳೆತ್ತ ಬಲ್ಲರು ಅಪ್ಪಣಪ್ರ...
ಬಿಟ್ಟೂ ಬಿಟ್ಟೂ ಬರುವ ಮಳೆ ತಟ್ಟೇ ತಟ್ಟೀ ಮಲಗಿಸುವ ಅಮ್ಮ ಪೆಟ್ಟು ಕೊಟ್ಟು ಕಲಿಸುವ ಅಪ್ಪ ಬಿಕ್ಕಿ ಬಿಕ್ಕಿ ಅಳುವ ಕಂದಮ್ಮಗಳು ಸೊಕ್ಕಿ ಸೊಕ್ಕಿ ಬೆಳೆವ ಹೂಗಿಡ ಮರಗಳು ರಣ ರಣವಾಗಿ ಬರುವ ಸೂರ್ಯ ಕಾರ್ಡಿಯೋಗ್ರಾಫಿ ಹಾಗೆ ಇವೆಲ್ಲವುಗಳೊಂದಿಗೆ ಏರಿಳಿಯು...
ಗಾಳ್ಯಾಗೆ ಹಾರ್‍ತಾವೆ ಅಂಗಿ | ಅವಕೆ ಕೈ ಚಾಚಿ ನಿಂತೈತೆ ಅಂಗಿ ಬಹುದಿನ ಬರಿಮೈಯಲಿದ್ದು| ಇದಕೆ ಬೇಕಾತು ಮೈಮೇಲಿದ್ದದ್ದು ಎಲ್ಲಾರು ನೋಡಲಿ ಎಂದು | ತಾನೂ ಮೆರೆವಂಥ ಹಂಬಲ ಬಂದು ಕೂಸಾಗಿ ಮಗುವಾಗಿ ಬೆಳೆದು | ಅತ್ತಿತ್ತ ಓಡಾಡಿ ಅರಿವನ್ನು ತಳೆದು ಬೆತ...
ಪ್ರಿಯ ಸಖಿ, ಇವನು ಐದು ವರ್ಷಗಳ ತನ್ನ ವಿದೇಶ ವಾಸ ಮುಗಿಸಿ ಈಗಷ್ಟೇ ತನ್ನ ಮಾತೃಭೂಮಿಗೆ ಕಾಲಿಡುತ್ತಿದ್ದಾನೆ. ಈಗ ಇವನಿಗೆ ಇಲ್ಲಿಯದೆಲ್ಲವೂ ಕೆಟ್ಟದಾಗಿ, ಅಸಹ್ಯವಾಗಿ, ಕೀಳಾಗಿ ಕಾಣುತ್ತಿದೆ. ಗಳಿಗೆಗೊಂದು ಬಾರೀ ವಿದೇಶೀಯರ ಶುಚಿತ್ವ, ಅಲ್ಲಿನ ರಸ್ತ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...





