Home / Kavana

Browsing Tag: Kavana

ಸಿನೇಮಗಳಲಿ ನೋಡಿದಂತೆಯೇ ಪುಸ್ತಕಗಳಲಿ ಓದಿದಂತೆಯೇ ಅಷ್ಟೇ ಏಕೆ ನಿನ್ನೆಯೇ ಸ್ಟಾರ್ ಹೊಟೆಲೊಂದರಲಿ ಆ ಗುಲಾಬಿ ಹುಡುಗಿಯರು ಕೋಟು ತೊಟ್ಟು ಅದರ ಬಾಲ ಕೊರಳಿಗೆ ಸುತ್ತಿಕೊಂಡಂತೆಯೇ ಕಂಡೆ ನಾನೊಂದು ಅಚ್ಚ ಬಿಳಿಯ ಫ್ಹರ್ ಕೋಟು ಗಡಗಡ ಚಳಿಯ ಒಂದು ಸಂಜೆ ಪ್...

ಬೇಸಿಗೆಯ ಬಿಸಿಲಿನಂಥ ಅವಳ ನೆನಪಿನಲ್ಲಿ ಹೃದಯದ ತಂತುಗಳೆಲ್ಲಾ ಸುಟ್ಟೂ ಸುಟ್ಟೂ ಕ್ಷಣ ಕ್ಷಣಕೂ ಸಾಯುತಿವೆ ಆದರೂ ಅವಳು ಚಂದ್ರನ ಶೀತಲದಂತಾದರೆ ಎಂದು ಈಗಲೂ ಕಾಯ್ದಿದ್ದೇನೆ. *****...

ಅತ್ತೇ ಮಾವರಿಗಂಜಿ ಸುತ್ತೇಳು ನೆರೆಗಂಜಿ ಮತ್ತೇ ಪತಿ, ಭಾವ ಮೈದುನರಿಗಂಜಿ ಅವರಿಗಂಜಿ, ಇವರಿಗಂಜಿ ಅಂಜಿ, ಅಂಜಿ ಅಳುಕುತ್ತಲೇ ಬಾಳುವ ಕರ್ಮ ಬೇಡ ಮಗಳೇ ಎಲ್ಲರಿಗಂಜಿ ಬಾಳಿದವರೆಲ್ಲ ಕಾಲನ ಛಾಯೆಯ ತಿಮಿರವಾದರು ಹೊಸಲಿನಾಚೆಯ ಬೆಳಕ ಕಾಣದಾದರು ಮುಚ್ಚಿಟ್...

ಅವರಿವರ ಕೈಜಾರಿ ಇಟ್ಟಿಗೆ ಬಿದ್ದಲ್ಲೆಲ್ಲಾ ಧುತ್ತನೆ ಎದ್ದು ನಿಂತ ನನಗೆ ನಾನೇ ನಿರ್ಮಿಸಿಕೊಂಡ ಎತ್ತರೆತ್ತರ ಗೋಡೆಗಳು ನಿಜ ಮುಖ ತೋರದ ಮುಸುಗುಗಳು! ಗೋಡೆ ಮೇಲೊಂದು ಗೋಡೆ ಕಿರಿಗೋಡೆ, ಮರಿಗೋಡೆ ಬಾನಿನೆತ್ತರಕ್ಕೆ ಏರಿನಿಂತ ಹಿರಿಗೋಡೆಗಳು! ನನಗೆ ನಾ...

ಹೊಸ ಸಹಸ್ರಮಾನಕೆ ಪ್ರೀತಿಯ ಸುಸ್ವಾಗತ ಆರತಿ ಎತ್ತಿದೆ ವಿಶ್ವದ ಕಲ್ಯಾಣಕೆ ಭಾರತ ಶ್ರುತಿನುಡಿಸಲಿ ಈ ವರ್ಷ ಶತಮಾನದ ಚಲನೆಗೆ, ಸತ್ಯ ಸಹನೆ ಅಹಿಂಸೆಗಳ ತವರು ಮನೆಯ ಹಾಡಿಗೆ ಆಧ್ಯಾತ್ಮದ ಮೂರ್ತಿ ಹೊತ್ತ ವಿಜ್ಞಾನದ ರಥಕೆ ತಡೆಯಿಲ್ಲದ ನಡೆ ಒದಗಲಿ ಶಿವ ಸ...

ಆಕಾಶಮಾರ್ಗದಲ್ಲೂ ಇಳಿಜಾರು ಬೆಟ್ಟ ಆಕ್ಸಿಡೆಂಟ್ ಝೋನ್, ಅಂಕುಡೊಂಕು ರಸ್ತೆ ಎಂದಿರಬೇಕಾಗಿತ್ತು ಬ್ರೇಕು ಗೇರುಗಳ ಕಿರಿಕಿರಿ ಶಬ್ದ ನಡುರಾತ್ರಿ ಟಾಯರ್ ಪಂಕ್ಚರ್ ಎಲ್ಲೋ ಕತ್ತಲಲ್ಲಿ ಒಂಟಿಯಾಗಿ ನಿಂತ ಒಗ್ಗಾಲಿ ಬಸ್ಸು ಹೊರಗೆ ಗಾಲಿ ಬದಲಿಸುವ ಡ್ರೈವರ್...

ಹೀಗೆ, ಹೀಗೆಯೇ ಇದ್ದೆ ಒಂದಂಗುಲವೂ ಆಚೀಚೆ ಹಾರದೆ ದಾಟದೆ ಯಾರಿಟ್ಟರೋ ಶಾಪ ಬರಿ ಪರಿತಾಪ ಒಳಗಿಹುದೆಲ್ಲವೂ ಮಿಥ್ಯೆ ಸೀತೆಗೂ ಒಮ್ಮೆ ಅಗ್ನಿ ಪರೀಕ್ಷೆ ಗೆದ್ದರೂ ಗೆಲುವಲ್ಲ ರಾಘವನದೇ ಪ್ರತೀಕ್ಷೆ ಯಾವುದೋ ನಿರೀಕ್ಷೆ ಗತಿತಪ್ಪಿದ ವಿವೇಚನೆ ಜಮದಗ್ನಿಯ ರೇ...

ಎಷ್ಟೊಂದು ವರ್ಷಗಳಿಂದ ನನ್ನಲ್ಲಿಯೇ ಉಳಿದುಬಿಟ್ಟ ನನ್ನವಲ್ಲದ ಹಳೆಯ ಎಕ್ಕಡಗಳೂ! ದಂತದ ಕುಸುರಿ ಮಾಡಿದ ಗಮಗುಡುವ ಗಂಧದ ಪೆಟ್ಟಿಗೆಯಲ್ಲೇ ಅವುಗಳ ವಾಸ ಎಲ್ಲಿ ಹೋದರೂ ಎಲ್ಲಿ ಬಂದರೂ ಹಳೆಯ ಎಕ್ಕಡಗಳ ಗಂಧದ ಪೆಟ್ಟಿಗೆಯ ಬೆನ್ನಿನ ಮೇಲೆಯೇ ಹೊತ್ತು ಸಾಗಬೇ...

ಆಕಾಶ ತುಂಬೆಲ್ಲ ನಕ್ಷತ್ರಗಳಾ ಬೀಜ ಬಿತ್ತಿದವರಾರೆ ಗೆಳತಿ- ನೋಡ ನೋಡ ಬೆಳೆ ಹೊಳೆಹೊಳೆವ ಮಣಿಗಳಾ ಸುತ್ತೋಣ ಬಾರೆ ಗೆಳತಿ ದಿಕ್ಕು ದಿಕ್ಕಿಗೂ ಕತ್ತೆತ್ತಿ ನೋಡಿದರ ನಗತಾವ ನೋಡ ಗೆಳತಿ- ಫಳಫಳಿಸುವಾ ವಜ್ರಗಳಾ ನೋಡು ನೋಡುತಿರೆ ಕಿವಿಯೋಲೆ ಸರಗಳಾದಾವು ಗ...

ಪ್ರತಿದಿನ ಬೆಳಗ್ಗೆ ಕನ್ನಡಿಯೊಳಗೆ ನನ್ನದೆ ದರ್ಶನ ಹೊರಡುವ ಅವಸರ ಒಂದಿಷ್ಟು ಕ್ರೀಮುಬಳಿದು ಲ್ಯಾಕ್ಮೆ ಹಚ್ಚುವಷ್ಟರಲ್ಲಿ ಸಮಯ ಒಂಬತ್ತು ಬಿಂದಿ ಇಡುವ ಹೊತ್ತು ಗಳಿಗೆ ತಟಸ್ಥ ಕೈ ಬಿಂದಿ ಇಡದೆ ಮುಗಿಯದು ಸಿಂಗಾರ ದೊಡ್ಡ ಬಿಂದಿ, ಚಿಕ್ಕ ಬಿಂದಿ ನಕ್ಷತ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...