ಪಡುಗಡಲು

ಹೊಡೆ- ಹೊಡೆ – ಹೊಡೆ
ಪಡುಗಡಲಿನ ತೆರೆ
ತಡಿಯೊಡೆಯುವವರೆಗೂ,
ತಡೆ – ತಡೆ – ತಡೆ
ಕಡಲಲೆಗಳ ಹೆಡೆ
ದಡ ಮುಟ್ಟುವವರೆಗೂ.

ನಡೆ – ನಡೆ – ನಡೆ
ಕಡೆದೆಬ್ಬಿಸುತಲೆ
ಮುಗಿಲಪ್ಪುವವರೆಗೂ,
ಕಡೆ – ಕಡೆ – ಕಡೆ
ಕಡೆದುಬ್ಬಿಸು ತೆರೆ
ನೊರೆಯಾಗುವವರೆಗೂ.

ಮಡು – ಮಡು – ಮಡು
ಬಡಿವಾರದ ನೊರೆ
ಕುಣಿದಾಡುವ ಸೆರಗು,
ಪಳ – ಪಳ – ಪಳ
ಥಳ ಥಳಿಸುವ ನೊರೆ
ಪರೆ ಕಳಚುವವರೆಗೂ.

ಸುಡು – ಸುಡು – ಸುಡು
ರವಿಯುರಿಯುತಲಿ
ಅಡಿ ಮುಟ್ಟುವವರೆಗೂ,
ಬುಳು – ಬುಳು – ಬುಳು
ಕಡಲಂಚಿನ ಕಿರಿ
ಒಯ್ಯಲಿನೆದೆ ಬುರುಗು.

ಉರಿ – ಉರಿ – ಉರಿ
ಕೆನ್ನಾಲಗೆಯುರಿ
ಕಡಲಾ ಕೊನೆವರೆಗೂ,
ಅಲೆ – ಅಲೆ – ಅಲೆ
ಉರಿ ಹೊತ್ತಿರೆ
ಸಾಗರ-ಸುಡುತರಗು.

ಸಿರಿ – ಸಿರಿ – ಸಿರಿ
ಕೆಂಬಣ್ಣದ ಸಿರಿ
ಮುಗಿಲಂಚಿನವರೆಗೂ,
ಕರಿ – ಕರಿ – ಕರಿ
ಕರಿ ಸೀರೆಯ ನಿರಿ
ಇರುಳಿಳಿಯುವವರೆಗೂ.

ಧಗೆ – ಧಗೆ – ಧಗೆ
ಎಲ್ಲೆಲ್ಲಿಯು ಹೊಗೆ
ಗಾಳಿಯ ಸುಳಿ ಸೆರಗು
ಮೊಗೆ – ಮೊಗೆ – ಮೊಗೆ
ಮೊಗೆ ನೀರಿನ ಹನಿ
ಮೈ ಮುಚ್ಚುವವರೆಗೂ.

ಸಿಡಿ – ಸಿಡಿ – ಸಿಡಿ
ಸಿಡಿಲಂತಕನೊಲು
ಮುಡಿಯುರುಳುವವರೆಗೂ,
ಬಡಿ – ಬಡಿ – ಬಡಿ
ಭೋರ್ಗರೆಯುತ ನಡಿ
-ಅಡಿಗೆರಗುವವರೆಗೂ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇನ್ನೊಬ್ಬ
Next post ಸೂರ್ಯ ಸುಡಲಾರ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…