ಕಳೆದು ಹೋದೆಯಲ್ಲೇ

ಲಕ್ಷ್ಮೀಽ ಕಳೆದುಹೋದೆಯಲ್ಲೆ Megesticನಲ್ಲಿ
ಲಕ್ಷ್ಮೀ ಕಳೆದುಹೋದೆಯಲ್ಲೆ ಮ್ಯಾಜೆಸ್ಟಿಕ್‌ನಲ್ಲಿ
ಮೊನ್ನೆ ಮೊನ್ನೆಯಷ್ಟೇ ಅದೇ ದೀಪಾವಳಿಯಂದು
ಗರಿಗರಿಯಾದ ಸೀರೆಯುಟ್ಟು
ನನ್ನ ಮನೆಗೆ ಬಂದಿದ್ದೆಯಲ್ಲೆ
ಲಕ್ಷ್ಮೀ ಕಳೆದು ಹೋದೆಯೆಲ್ಲೆ…

ಮೊನ್ನೆ ರಾಜ್ಯೋತ್ಸವದಂದು ನಿನಗೂ
ಭುವನೇಶ್ವರಿಗೂ ಒಂದೇ sweet ಮಾಡಿದ್ದೆ
ಅದಕ್ಕೇನಾದರೂ ಸಿಟ್ಟುಮಾಡಿಕೊಂಡೆಯೋ!
ಕಳ್ಳರ ಕಾಟ ಜಾಸ್ತಿ ಎಂದು ಒಂದೆಳೆ
ಸರದ ಮೇಲೆಯೇ ನಿನ್ನ ಪೂಜಿಸಿದ್ದೆ
ಅದಕ್ಕೇನಾದರೂ ಬೇಸರ ಪಟ್ಟುಕೊಂಡೆಯೋ!
ಎಲ್ಲವೂ ನಿನ್ನದೇ ಅಂದೆ
ಸ್ವಲ್ಪ ನಿರ್ಲಕ್ಷಿಸಿದ್ದೇನೋ ನಿಜ
ಆದರೆ ಇಂದು ಒಮ್ಮಿಂದೊಮ್ಮೆಲೆ
ನನ್ನ ಮರೆತು Megesticನಲ್ಲಿ ಇಳಿದು ಬಿಡುವುದೇ
ಲಕ್ಷ್ಮೀ ಕಳೆದುಹೋದೆಯಲ್ಲೆ…..

ನೀನು ಅದೆಷ್ಟು ಚೆಂದ ಅಂದ ಆಕರ್ಷನೀಯಳು
ಆಘಾತವಾಗದಂತೆ ಕಾಯುತ್ತಲೇ ಇದ್ದೆ
ನೀನು ಹೀಽಗೆ ತುಂಬಾ ಚಂಚಲಿ
ನೀನು ನಿನ್ನ ಹಾಗೆಯೇ,
ನಿನ್ನ ಕಳೆದುಕೊಂಡ ನನ್ನ ಮನ ಮೌನವಾಯಿತು
ಬೆವರು ಬೆನ್ನಕಾವಲಿಗೆ ಇಳಿಯಿತು
ಗೊತ್ತಾಗಲೇ ಇಲ್ಲ ನೋಡು ನನಗೆ ನೀನು
ಇದ್ದಕ್ಕಿದ್ದ ಹಾಗೆ ಒಮ್ಮೆಲೇ ತಪ್ಪಿಸಿಕೊಳ್ಳುವಿಯೆಂದು
ಒಂದಿಷ್ಟೇನಾದರೂ ಸಂಶಯ ಬಂದಿದ್ದರೆ
ಕೈಯಲ್ಲಿ ಕೈ ಹಿಡಿದು ನಡೆಯುತ್ತಿದ್ದೆ
ಲಕ್ಷ್ಮೀ ಕಳೆದುಹೋದೆಯಲ್ಲೆ….
ಪ್ರವಾಸಿಗರೇ ತುಂಬಿದ Megesticನಲ್ಲಿ
ಕಳ್ಳರ ಹಾವಳಿಗೆ ತುತ್ತಾಗಿ ದಿನ ದಿನವೂ
ಮೌಲ್ಯವೇ ಕಳೆದುಕೊಳ್ಳುತ್ತಿರುವೆಯಲ್ಲೆ….
ಹಾಯಾಗಿ ಬದುಕಲೂ ಬಿಡದ ಬೆಂಗಳೂರಿನಲ್ಲಿ
ನೀನು ಬದುಕುತ್ತಲೇ ಕಳೆದುಕೊಳ್ಳುತ್ತಿದ್ದಿಯಲ್ಲ
ಬಡವರ ಕನಸಿಗೆ ಕೊಳ್ಳಿ ಇಡುತ್ತಾ
ಸಿರಿಗರವ ಹೊಡೆದವರಲ್ಲೇ ಇರುವೆನೆನುತ
ಕುಡಿತಗಳ ಜನರ ನಡುವೆಯೇ
ಹೊರಳಾಡುತ್ತ ನೆರಳಾಡುತ್ತ
ಬೆಲೆಯೇ ಕಳೆದುಕೊಳ್ಳುತ್ತಿರುವಿಯಲ್ಲ ಲಕ್ಷ್ಮಿ
ಬಾಗಿಲು ತಟ್ಟಿ ಬರುವವಳಲ್ಲ ನೀನು
ಬಾಗಿಲು ಒದ್ದು ಹೋಗುವುದು ಮಾತ್ರ ಗೊತ್ತು
ಅದಕ್ಕೆಂದೇ ನೀನು ಚಂಚಲೆ ಲಕ್ಷ್ಮಿ
ಲಕ್ಷ್ಮಿ ಕಳೆದುಹೋದೆಯಲ್ಲೆ.

(Megesticನಲ್ಲಿ ಇತ್ತೀಚೆಗೆ ಸಾವಿರಾರು ರೂಪಾಯಿ ಕಳೆದುಕೊಂಡಾಗ, ವಾರವಿಡೀ ಆ ಬೇಸರದಲ್ಲಿಯೇ ಇದ್ದಾಗ ಬರದದ್ದು)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧೈರ್ಯ ಬೇಕು
Next post ಲಿಂಗಮ್ಮನ ವಚನಗಳು – ೩೯

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…