ಅಯ್ಯ ಅದೇನು ಕಾರಣವೆಂದರೆ,
ಕಂಗಳ ಕತ್ತಲೆಯನೆ ಹರಿಸಿದಿರಿ.
ಮನದ ಕಾಳಿಕೆಯನೆ ಹಿಂಗಿಸಿದಿರಿ.
ಮಾತಿನ ಮೊದಲನೆ ಹರಿದಿರಿ.
ಜ್ಯೋತಿಯ ಬೆಳಗ ತೋರಿದಿರಿ.
ಮಾತು ಮಥನವ ಕೆಡಿಸಿದಿರಿ.
ವ್ಯಾಕುಳವನೆ ಬಿಡಿಸಿ ವಿವೇಕಿಯ
ಮಾಡಿ ನಿಮ್ಮ ಪಾದದಲ್ಲಿ ಏಕವಾದ
ಕಾರಣದಿಂದ ನಾ ನಿಜಮುಕ್ತಳಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ