Home / ಕವನ / ಕವಿತೆ / ಕಿಟ್ಟುಣ್ಣಿ ಸರ್ಕಸ್ಸು

ಕಿಟ್ಟುಣ್ಣಿ ಸರ್ಕಸ್ಸು

ನೆನೆಯದೆ ಇರುವಾಗ ಬರುತ್ತಾನೆ ಕಿಟ್ಟುಣ್ಣಿ
(ಅವನ ಆತ್ಮಕ್ಕೆ ಶಾಂತಿಯಿರಲಿ!) ತನ್ನ
ಜನರೊಂದಿಗೆ ಸರಂಜಾಮುಗಳೊಂದಿಗೆ, ಬಂದು
ಶಾಲೆಯಂಗಳದಲ್ಲಿ ಹೂಡುತ್ತಾನೆ ಗೂಟ.

ಡೇರೆಯಿಲ್ಲದ ಸರ್ಕಸ್ಸು, ಕಿಟ್ಟುಣ್ಣಿ ಸರ್ಕಸ್ಸು
ನಿಜವಾದ ಸರ್ಕಸ್ಸಿಗಿಂತ ಸ್ವಲ್ಪ ಕೆಳಗೆ
ಡೊಂಬರಾಟಕ್ಕಿಂತ ಸ್ವಲ್ಪ ಮೇಲೆ-ಯಾವಾಗಲೂ
ಮಧ್ಯಂತರ ಸ್ಥಿತಿಯಲ್ಲಿ.  ಆನೆ ಸಿಂಹಗಳಿಲ್ಲ

ಒಂದೆರಡು ನಾಯಿಗಳಿವೆ.  ಉಳಿದೆಲ್ಲವನ್ನೂ
ಅವನ ಚುರುಕಾದ ಹುಡುಗ-ಹುಡುಗಿಯರೆ
ಮಾಡಬೇಕು.  ಸಿದ್ಧವಾಯಿತು ರಂಗ ಇದೀಗ
ಸುರುವಾಯಿತು ಆಟ ಕಂಬಿಯ ಮೇಲೆ

ಒಬ್ಬಳು ಚಂದದ ಹುಡುಗಿ ನಡೆಯುವುದರಿಂದ
ಸುರು.  ಆಕಳಿಸುವ ಡೋಲಿನವನು
ಬಡಿಯುತ್ತಲೇ ಇರುತ್ತಾನೆ.  ತಮಾಷೆಯ ಟೊಪ್ಪಿ
ಧರಿಸಿದ ಹಾಸ್ಯಗಾರ ನಗಿಸುತ್ತಲೇ ಇರುತ್ತಾನೆ.

ಸುತ್ತಲೂ ಸೇರಿದ ನಾವು ಇಷ್ಟು ಚಂದದ
ಹುಡುಗಿರಯನ್ನು ಕಂಡದ್ದಿಲ್ಲ.  ಹೀಗೆ ಬರೇ
ಚಡ್ಡಿಯಲ್ಲಿ ಕಂಡದ್ದಂತೂ ಇಲ್ಲವೇ ಇಲ್ಲ.
ನಮ್ಮಲ್ಲಿದ್ದ ನಾಣ್ಯಗಳನ್ನೆಲ್ಲ ಕೊಟ್ಟುಬಿಡುತ್ತೇವೆ.

ಕಿಟ್ಟುಣ್ಣಿಯ ಎತ್ತಿನ ಗಾಡಿಗಳು ನಮ್ಮೂರು ಬಿಡುವಾಗ
ನಾವು ನೋಡುತ್ತಲೇ ಇರುತ್ತೇವೆ.  ಅರ್ಧಗಂಟೆಯ ಮೊದಲು
ನಮ್ಮ ಮನಸೆಳೆದ ಹುಡುಗಿಯರೀಗ ಯಾಕೆ
ಚಿಂದಿ ಬಟ್ಟೆಗಳನ್ನು ತೊಟ್ಟಿದ್ದಾರೋ ಅರ್ಥವಾಗುವುದಿಲ್ಲ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...