ಹೆಣ್ಣಿನಂದ ಯಾರಿಗೆಂದ?!

ಹೆಣ್ಣು
ಕಣ್ಣು
ಬಿಟ್ಟು
ಚೆಲುವೆಂದಳು!

ಗಂಡು:
ಹಪಹಪಿಸಿ…
“ಅಯ್ಯೋ ದೇವರೇ!ಽ…
ಹೆಣ್ಣಿಗಿಶ್ಟು ಚೆಲುವು?!”
ಕೊರಗಿ…
ಸೊರಗಿ…
ಕಣ್ಣು
ಬಿಟ್ಟೆ!

ದೇವರೆಂದ:
ಹೆಣ್ಣಿನಂದ:
ಗಂಡಿಗೆಂದ!
ದುಂಬಿಗೆಂದ,
ನೀ ನಾರಿಗೆಂದ!
ಜಗದ ಶಾಂತಿಗೆಂದ.
ಸ್ವಲ್ಪ ತಡಿಯೆಂದ!

ಗಂಡು:
ಆ ಕ್ಷಣದಿ
ದುಂಬಿಯಾದ!
ಮಕರಂದ…
ಹೀರಿ-
“ಪುರ್‍ರೆಂದು”
ಹಾರಿದ!
ಪರಾಗ ಸ್ಪರ್ಶಕೆ…
ಮಾಗಿ ಹಣ್ಣಾಯಿತು
ಈ ಹೆಣ್ಣು!
ಮಣ್ಣಾಯಿತು
ಹಣ್ಣು!
ಹೋಳಾಗಿ
ಹಾಳಾಗಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್ಯನ ಕಾವು
Next post ಹಿರಿಯ ದಾನಿ

ಸಣ್ಣ ಕತೆ