ಗುಬ್ಬಾರೆ ಗುಬ್ಬಾರೆ ಗುಬ್ಬಾರೆ
ದುಂಡು ದುಂಡು ಮಕ್ಕಳ ಗುಬ್ಬಾರೆ
ಗುಬ್ದಿಮರಿಯಂತಹ ಗುಬ್ಬಾರೆ
ನೋಡಲು ಕಣ್ಣಿಗೆ ಹಬ್ಬಾರೆ

ಊದಿದರುಬ್ಬುವ ಗುಬ್ಬಾರೆ
ಬಿಟ್ಟರೆ ಹಾರುವ ಗುಬ್ಬಾರೆ
ಅದೋ ನೋಡಿರಿ ಆಗಲೆ ಹಾರಿತು
ಹಾರಿತು ತೇಲಿತು ಗಾಳಿಯಲಿ
ಹಿಂಬಾಲಿಸಿತು ಮಕ್ಕಳ ದಂಡು
ಅದು ಆಕಾಶದಿ ಹಾರೊದು ಕಂಡು

ಇನ್ನೇನು ಗುಬ್ಬಾರೆ ಹೊರಟೇ ಹೋಯಿತು
ಎನುವಷ್ಪರಲಿ ಗಾಳಿಯು ನಿಂತಿತು
ಗುಬ್ಬಾರೆ ಇಳಿಯಿತು ಬೇಲಿಯ ಮೇಲೆ
ಇನ್ನೇನು ಸಿಕ್ಕಿತು ಗುಬ್ಬಾರೆ ಎಂದು
ಪುಟಾಣಿ ಮಕ್ಕಳು ಕುಣಿದಾಡುತಿರಲು
ಅಲ್ಲೊಂದು ಮುಳ್ಳು ಕಾಯುತ ಇತ್ತು
ಪಾಪ ಗುಬ್ಬಾರೆಗೆ ಚುಚ್ಚಿಯೆ ಬಿಟ್ತು

ಇನ್ನೆಲ್ಲಿ ಗುಬ್ಬಾರೆ ಠುಸ್ ಸ್ ಸ್…
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)