Manga

ಗೇರ್‍ ಗೇರ್‍ ಮಂಗಣ್ಣ
ಕಡ್ಲೇಕಾಯ್ ನುಂಗಣ್ಣ
ಕೊಂಬೆಯಿಂದ ಕೊಂಬೆಗೆ
ಹೈಜಂಪ್ ಮಾಡೋ ಹನುಮಣ್ಣ!

ಆಟಕ್ ಕರಕೋ ನನ್ನೂನೂ
ಲಾಗ ಹಾಕ್ತೀನ್ ನಾನೂನೂ,
ಜೀಬಿನ ತುಂಬ ತಿಂಡೀನ
ತಂದೀದೀನಿ ನಿನಗೂನೂ!

ಬೇರೆ ಕೋತಿ ಬೆನ್ನಿಂದ
ಹೇನು ಹೆಕ್ಕೋದ್ ಯಾಕಪ್ಪ?
ಹೆಕ್ಕಿ ಅದನ್ನೇ ತಿಂತೀಯ
ಥೂ, ಥೂ ಕೊಳಕಪ್ಪ

ಮರದ್ ತುಂಬ ಚೇಪೇಕಾಯ್
ಎಲ್ಲ ನಿಂಗೇ ಯಾಕಣ್ಣಾ?
ಎರಡೇ ಎರಡು ಕಾಯನ್ನ
ಕಿತ್ತು ತಮ್ಮಂಗ್ ಹಾಕಣ್ಣಾ!

ಎರಡೇ ಗೇಣು ಇದೀಯ
ಲಂಕೆಗೆ ಹಾರಿದ್ಯಂತಲ್ಲ!
ಲಂಕೇಗ್ ಬೆಂಕಿ ಇಟ್ಯಂತೆ
‘ಮಂಕೀ’ ಅಂದ್ರೆ ನೀನಲ್ವ?

ಪಿಳ್ ಪಿಳಾಂತ ಕಣ್ಬಿಟ್ಟು
ಹಲ್ ಕಿರಿಯೋದು ಯಾಕಣ್ಣಾ?
ನಿನ್ಹಾಗೇನೇ ಮಾಡ್ತಾನ್ – ನಮ್
ಪಕ್ಕದ ಮನೆ ರಂಗಣ್ಣ!
*****